AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gautam Adani: ಮಹಾಕುಂಭದಲ್ಲಿ ಮಿಂದೆದ್ದು ತೃಪ್ತರಾಗಿ ಖುಷಿ ಹಂಚಿಕೊಂಡ ಗೌತಮ್ ಅದಾನಿ

ನವದೆಹಲಿ, ಜನವರಿ 21: ಭಾರತದ ಎರಡನೇ ಅತಿದೊಡ್ಡ ಶ್ರೀಮಂತರಾದ ಗೌತಮ್ ಅದಾನಿ ಅವರು ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಪಾಲ್ಗೊಂಡಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ ಗಂಗೆಗೆ ಪೂಜೆ ಸಲ್ಲಿಸಿದ್ದಾರೆ. ತಮ್ಮ ಕುಟುಂಬ ಸಮೇತ ತೆರಳಿದ್ದ ಅವರು ಉತ್ತರಪ್ರದೇಶ ರಾಜ್ಯದ ಆಡಳಿತವನ್ನು ಪ್ರಶಂಸಿಸಿದ್ದಾರೆ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 21, 2025 | 5:50 PM

Share
144 ವರ್ಷಗಳಿಗೊಮ್ಮೆ ಬರುವ ಪ್ರಯಾಗರಾಜ್ ಮಹಾಕುಂಭ ದೇಶ ವಿದೇಶಗಳಿಂದ ಲೆಕ್ಕವಿಲ್ಲದಷ್ಟು ಜನರನ್ನು ಸೆಳೆಯುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧು ಸಂತರು ಪ್ರಯಾಗ್​ರಾಜ್​ನಲ್ಲಿ ಗಂಗೆಯಲ್ಲಿ ಮಿಂದೆದ್ದು ಪುನೀತರಾಗುತ್ತಾರೆ. ದೇಶದ ಎರಡನೇ ಅತಿದೊಡ್ಡ ಉದ್ಯಮಿ ಗೌತಮ್ ಅದಾನಿ ತಮ್ಮ ಕುಟುಂಬ ಸಮೇತರಾಗಿ ಮಹಾಕುಂಭದಲ್ಲಿ ಪಾಲ್ಗೊಂಡರು.

1 / 5
ಗೌತಮ್ ಅದಾನಿ ತಮ್ಮ ಕುಟುಂಬದೊಂದಿಗೆ ಪ್ರಯಾಗ್​ರಾಜ್​ನ ತ್ರಿವೇಣಿ ಸಂಗಮ್​ನಲ್ಲಿ ಪೂಜೆ ಸಲ್ಲಿಸಿದರು. ಪತ್ನಿ, ಮಗ, ಸೊಸೆ ಮೊದಲಾದ ಅವರ ಕುಟುಂಬ ಸದಸ್ಯರೂ ಜೊತೆಗಿದ್ದು ಪ್ರಾರ್ಥನೆ ಸಲ್ಲಿಸಿದರು. ಕುಟುಂಬ ಸದಸ್ಯರು ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು ವಿಶೇಷ.

2 / 5
ಇವತ್ತು ಪ್ರಯಾಗರಾಜ್​ನ ಪುಣ್ಯ ಭೂಮಿಯನ್ನು ಸ್ಪರ್ಶಿಸಿ ಪಾವನನಾಗಿದ್ದೇನೆ. ಬಹಳ ಅದ್ಭುತ ಅನುಭವ ಇದು. ಈ ಅನುಭವ ಪದಗಳಲ್ಲಿ ವರ್ಣಿಸಲಸದಳ ಎಂದು ಹೇಳಿದ ಅವರು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಈ ಮಹಾಕುಂಭವನ್ನು ಸಮರ್ಪಕವಾಗಿ ಆಯೋಜಿಸಿದ್ದಕ್ಕೆ ಧನ್ಯವಾದ ಹೇಳಿದರು. ಗಂಗಾ ಮಾತೆಯ ಆಶೀರ್ವಾದಕ್ಕಿಂತ ಮಿಗಿಲಾದುದು ಇನ್ನೋಂದಿಲ್ಲ ಎಂದರು.

3 / 5
ಮಹಾಕುಂಭ ಆಯೋಜನೆ ಮಾಡಿದ ಆಡಳಿತವರ್ಗ, ಪೊಲೀಸ್, ಸ್ವಚ್ಛತಾ ವಿಭಾಗ ಇವರಿಗೂ ಧನ್ಯವಾದ ಹೇಳುತ್ತೇನೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಇದು ಒಂದು ಕೇಸ್ ಸ್ಟಡಿಯಾಗಿದೆ ಎಂದು ಗೌತಮ್ ಅದಾನಿ ಈ ಸಂದರ್ಭದಲ್ಲಿ ಹೇಳಿದರು.

4 / 5
ಯುಪಿಯಲ್ಲಿ ದೊಡ್ಡ ಅವಕಾಶಗಳಿವೆ. ಇಲ್ಲಿನ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಅದಾನಿ ಗ್ರೂಪ್​ನಿಂದ ಈ ರಾಜ್ಯಕ್ಕೆ ಕೊಡುಗೆ ಇದೆ. ಯುಪಿಯಲ್ಲಿ ಹೂಡಿಕೆ ಮಾಡಲು ತಮ್ಮ ಸಂಸ್ಥೆ ಬದ್ಧವಾಗಿದೆ ಎಂದು ಅದಾನಿ ತಿಳಿಸಿದರು.

5 / 5
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?