ದಶಕಗಳ ಬಳಿಕ ಶಾಲೆಗೆ ಮರಳಿದ ಗಿಲ್ಲಿ: ಚಿತ್ರಗಳ ನೋಡಿ
Gilli Nata visited his school: ಗಿಲ್ಲಿ ತಮ್ಮ ಶಾಲೆಗೆ ಭೇಟಿ ನೀಡಿದ್ದು, ಹಳೆ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಶಾಲೆಯ ಮಕ್ಕಳು, ಶಿಕ್ಷಕರುಗಳೊಟ್ಟಿಗೆ ಫೋಟೊಗಳನ್ನು ಸಹ ತೆಗೆಸಿಕೊಂಡಿದ್ದಾರೆ. ಮಳವಳ್ಳಿ ತಾಲ್ಲೂಕಿನ ಬಂಡೂರಿನ ಪ್ರೌಢಶಾಲೆಯಲ್ಲಿ ಗಿಲ್ಲಿ ನಟ ವಿದ್ಯಾಭ್ಯಾಸ ಮಾಡಿದ್ದು, ಇಂದು (ಜನವರಿ 24) ಗಿಲ್ಲಿ ನಟ ತಮ್ಮ ಹಳೆಯ ಶಾಲೆಗೆ ಭೇಟಿ ನೀಡಿದ್ದಾರೆ. ಇಲ್ಲಿವೆ ನೋಡಿ ಗಿಲ್ಲಿ ನಟನ ಚಿತ್ರಗಳು.
Updated on: Jan 24, 2026 | 4:21 PM

ಬಿಗ್ಬಾಸ್ ಗೆದ್ದಿರುವ ಗಿಲ್ಲಿ, ಗೆದ್ದಾಗಿನಿಂದಲೂ ನಿಂತ ಕಡೆ ನಿಲ್ಲುತ್ತಿಲ್ಲ. ಹಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳನ್ನು ಭೇಟಿ ಮಾಡುತ್ತಾ ಅವರುಗಳ ಆಶೀರ್ವಾದ, ಹಾರೈಕೆಗಳನ್ನು ಪಡೆಯುತ್ತಿದ್ದಾರೆ.

ಇದೀಗ ಗಿಲ್ಲಿ ತಮ್ಮ ಶಾಲೆಗೆ ಭೇಟಿ ನೀಡಿದ್ದು, ಹಳೆ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಶಾಲೆಯ ಮಕ್ಕಳು, ಶಿಕ್ಷಕರುಗಳೊಟ್ಟಿಗೆ ಫೋಟೊಗಳನ್ನು ಸಹ ತೆಗೆಸಿಕೊಂಡಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಬಂಡೂರಿನ ಪ್ರೌಢಶಾಲೆಯಲ್ಲಿ ಗಿಲ್ಲಿ ನಟ ವಿದ್ಯಾಭ್ಯಾಸ ಮಾಡಿದ್ದು, ಇಂದು (ಜನವರಿ 24) ಗಿಲ್ಲಿ ನಟ ತಮ್ಮ ಹಳೆಯ ಶಾಲೆಗೆ ಭೇಟಿ ನೀಡಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲಿ ಶಾಲೆಯಲ್ಲಿ ತಾವು ಕೂರುತ್ತಿದ್ದ ತರಗತಿಯಲ್ಲಿ ಬೆಂಚಿನ ಮೇಲೆ ಕೂತು ಹಳೆಯ ದಿನಗಳನ್ನು ಗಿಲ್ಲಿ ನಟ ಮೆಲುಕು ಹಾಕಿದ್ದಾರೆ. ತಾವು ಬೆಂಚಿನ ಮೇಲೆ ಬರೆದ ಹೆಸರುಗಳನ್ನು ನೋಡಿ ಖುಷಿ ಪಟ್ಟಿದ್ದಾರೆ.

ಗಿಲ್ಲಿಯೊಟ್ಟಿಗೆ ಬಂಡೂರಿನ ಪ್ರೌಢಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಲವು ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ. ಕೆಲ ಗ್ರಾಮಸ್ಥರು ಸಹ ಗಿಲ್ಲಿಯೊಟ್ಟಿಗೆ ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ.

ಗಿಲ್ಲಿಯನ್ನು ಬಂಡೂರಿನ ಪ್ರೌಢಶಾಲೆ ಸಿಬ್ಬಂದಿ ಹಾರ, ಶಾಲು ಹಾಕಿ ಸನ್ಮಾನ ಸಹ ಮಾಡಿದ್ದಾರೆ. ಮಾತ್ರವಲ್ಲದೆ, ಅದೇ ಶಾಲೆಯಲ್ಲಿ ಶಿಕ್ಷಕರೊಟ್ಟಿಗೆ ಸೇರಿ ಊಟ ಸಹ ಮಾಡಿದ್ದಾರೆ.




