
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಅವರು ಹುಟ್ಟೂರಲ್ಲಿ ವಿಜಯ ಯಾತ್ರೆ ಮಾಡಿದರು. ಇದಾದ ಬಳಿಕ ಬೆಂಗಳೂರಿಗೆ ಮರಳಿದ್ದಾರೆ. ಅವರು ಪುನೀತ್ ಸ್ಮಾರಕಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಪ್ರತಿ ಕಲಾವಿದರಿಗೂ, ಅದರಲ್ಲೂ ಯುವ ಕಲಾವಿದರಿಗೆ ಪುನೀತ್ ರಾಜ್ಕುಮಾರ್ ಎಂದರೆ ವಿಶೇಷ ಪ್ರೀತಿ ಇರುತ್ತದೆ. ಇದಕ್ಕೆ ಗಿಲ್ಲಿ ಕೂಡ ಹೊರತಾಗಿಲ್ಲ. ಅವರು ಪುನೀತ್ ಸ್ಮಾರಕಕ್ಕೆ ತೆರಳೋಕೆ ಮರೆತಿಲ್ಲ ಎಂಬುದು ವಿಶೇಷ.

ಬಿಗ್ ಬಾಸ್ ವಿನ್ ಆದ ಬಳಿಕ ಗಿಲ್ಲಿ ಅವರು ಪುನೀತ್ ಸ್ಮಾರಕದ ಬಳಿ ತೆರಳಿದ್ದಾರೆ. ಅಲ್ಲಿ ಅವರು ಅಪ್ಪು ಸಮಾಧಿಗೆ ಪೂಜೆ ಮಾಡಿದ್ದಾರೆ. ಈ ವೇಳೆ ಕಪ್ನ ಇಟ್ಟು ನಮಸ್ಕರಿಸಿದ್ದಾರೆ. ಅಪ್ಪು ಅಭಿಮಾನಿಗಳು ಗಿಲ್ಲಿ ನಡೆಯನ್ನು ನೋಡಿ ಇಷ್ಟಪಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸಾಕಷ್ಟು ಮನರಂಜನೆ ನೀಡಿದ್ದಾರೆ. ಈ ಕಾರಣದಿಂದಲೇ ಅವರಿಗೆ 45 ಕೋಟಿಗೂ ಹೆಚ್ಚು ವೋಟ್ ಬಿದ್ದಿದೆ. ಅಸಲಿ ವೋಟ್ನ ಸಂಖ್ಯೆಯನ್ನು ಯಾರೂ ರಿವೀಲ್ ಮಾಡಿಲ್ಲ.

ಗಿಲ್ಲಿ ಅವರು ಬಿಗ್ ಬಾಸ್ ವಿನ್ ಆದ ಬಳಿಕ ಸಿಎಂ ಸಿದ್ದರಾಮಯ್ಯ, ನಟರಾದ ಶಿವರಾಜ್ಕುಮಾರ್, ಸುದೀಪ್ ಮೊದಲಾದವರನ್ನು ಭೇಟಿ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ ಕರೆ ಮಾಡಿ ಅವರಿಗೆ ವಿಶ್ ಮಾಡಿದ್ದಾರೆ.
Published On - 10:33 am, Fri, 23 January 26