ಗಿಲ್ಲಿಗೆ ಬಂಪರ್; 50 ಲಕ್ಷದ ಜೊತೆ ಐಷಾರಾಮಿ ಕಾರು, ಸುದೀಪ್ ಕಡೆಯಿಂದ ಬಿಗ್ ಅಮೌಂಟ್

Updated on: Jan 18, 2026 | 11:54 PM

Gilli Nata News: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ವಿನ್ ಎಂದು ಘೋಷಣೆ ಮಾಡಿದರು. ಗಿಲ್ಲಿ ನಟ ಅವರಿಗೆ ಹಣದ ಜೊತೆಗೆ ಐಷಾರಾಮಿ ಕಾರು ಕೂಡ ಸಿಕ್ಕಿದೆ. ಈ ವಿಷಯ ತಿಳಿದು ಅಭಿಮಾನಿಗಳು ಖುಷಿ ಆಗಿದೆ.

1 / 6
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಆಗಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ. ಅವರಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. 24 ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವನ್ನು ಕಂಡರು. ರನ್ನರ್ ಅಪ್ ಸ್ಥಾನಕ್ಕೆ ರಕ್ಷಿತಾ ಶೆಟ್ಟಿ ಖುಷಿಪಟ್ಟಿದ್ದಾರೆ.

2 / 6
ಗಿಲ್ಲಿ ನಟ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್​ ಬೇಸ್ ಸಿಕ್ಕಿದೆ. ಇದು ಅವರಿಗೆ ವೋಟ್ ಆಗಿಯೂ ಬದಲಾಗಿದೆ. 40 ಕೋಟಿಗೂ ಅಧಿಕ ವೋಟ್ ಅವರು ಪಡೆದಿದ್ದಾರೆ ಎಂಬುದೇ ಇದಕ್ಕೆ ಸಾಕ್ಷಿ.

3 / 6
ಗಿಲ್ಲಿ ನಟಗೆ ವಿನ್ನಿಂಗ್ ಅಮೌಂಟ್ ಆಗಿ 50 ಲಕ್ಷ ರೂಪಾಯಿ ಸಿಕ್ಕಿದೆ. ಇದು ಪ್ರತಿ ಬಾರಿ ವಿನ್ನರ್​​​ಗೂ ಸಿಗುತ್ತಿದ್ದ ಮೊತ್ತ. ಈ ಬಾರಿ ಗಿಲ್ಲಿಗೆ ಬಂಪರ್ ಲಾಟರಿ ಹೊಡೆದಿದೆ. ಏಕೆಂದರೆ ಒಂದು ಕಾರು ಕೂಡ ಸಿಗುತ್ತಿದೆ.

4 / 6
ವಿನ್ನರ್ ಗಿಲ್ಲಿಗೆ ಸುಮಾರು 20 ಲಕ್ಷ ರೂಪಾಯಿಯ ಕಾರು ಉಡುಗೊರೆಯಾಗಿ ಸಿಗುತ್ತಿದೆ. ಈ ಬಾರಿಯ ಬಿಗ್ ಬಾಸ್​ಗೆ ಮಾರುತಿ ಸುಜುಕಿ ಕೂಡ ಸ್ಪಾನ್ಸರ್ ಆಗಿತ್ತು. ಅವರ ಕಡೆಯಿಂದ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ವಿಜೇತರಿಗೆ ಸಿಕ್ಕಿದೆ.

5 / 6
ಮಾರುತಿ ವಿಕ್ಟೋರಿಸ್ ಕಳೆದ ವರ್ಷ ಪರಿಚಯಿಸಲಾಗಿದೆ. ಈ ಕಾರು 1490 ಸಿಸಿ ಇಂಜಿನ್ ಹೊಂದಿದೆ. ಗ್ಲೋಬಲ್ ನ್​ಕ್ಯಾಪ್​​​ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಕಾರು ಗಿಲ್ಲಿಗೆ ಸಿಕ್ಕಿರೋದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.

6 / 6
ಸುದೀಪ್ ಕಡೆಯಿಂದ ಗಿಲ್ಲಿಗೆ 10 ಲಕ್ಷ  ರೂಪಾಯಿ ಸಿಗುತ್ತಿದೆ. ಈ ಬಗ್ಗೆ ಅವರು ಘೋಷಣೆ ಮಾಡಿದರು. ಮುಂದಿನ ದಿನಗಳಲ್ಲಿ ಅವರಿಗೆ ಸಾಕಷ್ಟು ಸಿನಿಮಾ ಆಫರ್​​ಗಳು ಕೂಡ ಬರುವ ಸಾಧ್ಯತೆ ಇದೆ. ಗಿಲ್ಲಿ ಅವರನ್ನು ನೋಡಲು ಜಾಲಿವುಡ್ ಸ್ಟುಡಿಯೋ ಹೊರಗೆ ಸಾಕಷ್ಟು ಜನರು ಸೇರಿದ್ದರು.