- Kannada News Photo gallery Google Doodles: Here are Google's Creative Doodle Greetings on the occasion of Republic Day every year in Kannada news
Google Doodles: ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭದ ಗೂಗಲ್ನ ಕ್ರಿಯಾತ್ಮಕ ಡೂಡಲ್ ಶುಭಾಶಯಗಳು ಇಲ್ಲಿವೆ
ಭಾರತವು ಇಂದು 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಗೂಗಲ್ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ.
Updated on:Jan 26, 2023 | 11:41 AM

ಭಾರತವು ಇಂದು 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಗೂಗಲ್ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ. ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್‌ಎಫ್‌ಪಿ ಕವಾಯತು ತಂಡ ಮತ್ತು ಮೋಟಾರ್‌ಸೈಕ್ಲಿಸ್ಟ್‌ಗಳು, ಸೇರಿದಂತೆ ಗಣರಾಜ್ಯೋತ್ಸವದ ಪರೇಡ್‌ನ ಹಲವು ಅಂಶಗಳನ್ನು ಕಲಾಕೃತಿಯಲ್ಲಿ ಪ್ರತಿನಿಧಿಸಲಾಗಿದೆ. ಇದನ್ನು ಅಹಮದಾಬಾದ್, ಗುಜರಾತ್ ಮೂಲದ ಅತಿಥಿ-ಕಲಾವಿದ ಪಾರ್ಥ್ ಕೊತೇಕರ್ ಸಿದ್ಧಪಡಿಸಿದ್ದಾರೆ.

ಕಳೆದ ವರ್ಷದ ಡೂಡಲ್ ಗಣರಾಜ್ಯೋತ್ಸವವನ್ನು ಪೆರೇಡ್ ಕಲಾಕೃತಿಯ ಮೂಲಕ ಶುಭಾಶಯ ತಿಳಿಸಿದೆ. ಇದು ಸಂಪ್ರದಾಯಿಕವಾಗಿ ತ್ರಿವರ್ಣ ಧ್ವಜ, ಆನೆ, ಕುದುರೆ, ಶ್ವಾನ, ಒಂಟೆ, ತಬಲಾ, ಆರೋಹಿತವಾದ ಬ್ಯಾಂಡ್‌ನ ಭಾಗವಾಗಿ ಸ್ಯಾಕ್ಸೋಫೋನ್ ಮತ್ತು ಪಾರಿವಾಳಗಳನ್ನು ಪ್ರತಿನಿಧಿಸಲಾಗಿದೆ.

2021 ರಲ್ಲಿ, ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶದ ವಿವಿಧ ಭಾಗಗಳ ಸಂಸ್ಕ್ರತಿ, ಸಂಪ್ರದಾಯವನ್ನು ಪ್ರತಿಬಿಂಬಿಸಲಾಗಿದೆ. ಇದನ್ನು ಮುಂಬೈ ಮೂಲದ ಕಲಾವಿದ ಓಂಕಾರ್ ಫೊಂಡೆಕರ್ ರಚಿಸಿದ್ದಾರೆ.

2020 ರ 71 ನೇ ಗಣರಾಜ್ಯ ದಿನದಂದು, ವಿಶ್ವದ ಏಳು ಅಧ್ಬುತಗಳಲ್ಲಿ ಒಂದಾದ ತಾಜ್ ಮಹಲ್ ಜೊತೆಗೆ ಇಂಡಿಯಾ ಗೇಟ್, ರಾಷ್ಟ್ರೀಯ ಪಕ್ಷಿ, ಶಾಸ್ತ್ರೀಯ ಕಲೆಗಳು, ಭಾರತೀಯ ನೃತ್ಯ ಶೈಲಿಗಳು, ಅಂದರೆ ವೈವಿಧ್ಯತೆಯಲ್ಲಿ ಭಾರತ ಏಕತೆಯನ್ನು ಸಾರುವ ಕಲಾಕೃತಿಯನ್ನು ರಚಿಸಲಾಗಿದೆ. ಇದನ್ನು ಸಿಂಗಾಪುರ ಮೂಲದ ಅತಿಥಿ ಕಲಾವಿದ ಮೆರೂ ಸೇಥ್ ರಚಿಸಿದ್ದಾರೆ.

2019 ರ ಭಾರತದ 70 ನೇ ಗಣರಾಜ್ಯೋತ್ಸವದ ಸಮಯದಲ್ಲಿ ದೇಶದ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸದ ವಿವಿಧ ಘಟಕಗಳನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ಗಣರಾಜ್ಯೋತ್ಸವ ಪರೇಡ್ ಆಚರಣೆಗಳನ್ನು ಮರುಸೃಷ್ಟಿಸಿತು.

68 ನೇ ಗಣರಾಜ್ಯೋತ್ಸದ ಅಂಗವಾಗಿ ಭಾರತದ ತ್ರಿವರ್ಣಗಳಿಂದ ಅಲಂಕರಿಸಿದ ಕ್ರೀಡಾಂಗಣದಲ್ಲಿ ತುಂಬಿದ ಜನಸಾಗರ, ಈರೀತಿಯಾಗಿ ವಿಭಿನ್ನ ರೀತಿಯಲ್ಲಿ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ.

ಭಾರತದ 67 ನೇ ಗಣರಾಜ್ಯೋತ್ಸವದ ಗೌರವಾರ್ಥವಾಗಿ, ಬಿಎಸ್ಎಫ್ (ಗಡಿ ಭದ್ರತಾ ಪಡೆ) ಒಂಟೆ ತುಕಡಿಯನ್ನು ಪ್ರತಿಬಿಂಬಿಸುವ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ.
Published On - 11:41 am, Thu, 26 January 23




