
ಗೌತಮಿ ಜಾಧವ್ ಅವರು ಸದಾ ಪಾಸಿಟಿವಿಟಿ ಹರಡಲು ಬಯಸುವವರು. ಕುಟುಂಬದಲ್ಲೂ ಅವರು ಯಾವುದೇ ನೆಗೆಟಿವ್ ಥಾಟ್ ಉಳಿದುಕೊಳ್ಳಲು ಬಿಡೋದಿಲ್ಲ. ಈ ಕಾರಣದಿಂದ ಅವರ ಕುಟುಂಬ ತುಂಬಾನೇ ಖುಷಿಯಿಂದ ಇದೆ. ಈ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ.

ಗೌತಮಿ ಜಾಧವ್ ಅವರು ಅಭಿಷೇಕ್ ಕಾಸರುಗೋಡು ಅವರನ್ನು ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರ ಕುಟುಂಬದಲ್ಲಿ ಇನ್ನೂ ಮೂರು ಸದಸ್ಯರಿದ್ದಾರೆ. ಅದು ಅವರು ಸಾಕಿದ ಶ್ವಾನಗಳು. ಇವುಗಳನ್ನು ಗೌತಮಿ ಅವರು ತುಂಬಾನೇ ಪ್ರೀತಿಸುತ್ತಾರೆ.

ಗೌತಮಿ ಜಾಧವ್ ಅವರು ತಮ್ಮ ಪ್ರೀತಿಯ ಶ್ವಾನಗಳಿಗೆ ಹೆಸರು ಇಟ್ಟಿದ್ದಾರೆ. ಒಂದಕ್ಕೆ ಕ್ವೀನ್, ಹ್ಯಾಪಿ ಹಾಗೂ ಕಾಫಿ ಎಂದು ಹೆಸರು ಇಟ್ಟಿದ್ದಾರೆ. ಈ ಮೂರು ಶ್ವಾನಗಳ ಬಗ್ಗೆ ಗೌತಮಿ ಜಾಧವ್ ಅವರು ವಿಶೇಷ ಪ್ರೀತಿಯನ್ನು ಹೊಂದಿದ್ದಾರೆ.

ಬಿಗ್ ಬಾಸ್ಗೆ ಬಂದಾಗ ಗೌತಮಿ ಜಾಧವ್ ಅವರು ಈ ಬಗ್ಗೆ ಮಾತನಾಡಿದ್ದರು. ಕ್ವೀನ್, ಹ್ಯಾಪಿ ಹಾಗೂ ಕಾಫಿ ತಮ್ಮ ಮಕ್ಕಳು ಎಂದು ಕರೆದಿದ್ದರು. ಅವುಗಳನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದಾಗಿಯೂ ಗೌತಮಿ ಜಾಧವ್ ಅವರು ರಿವೀಲ್ ಮಾಡಿದ್ದರು.

ಗೌತಮಿ ಜಾಧವ್ ಅವರು 100 ದಿನಗಳಿಗೂ ಅಧಿಕ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರನ್ನು ಶ್ವಾನಗಳು ತುಂಬಾನೇ ಮಿಸ್ ಮಾಡಿಕೊಂಡಿದ್ದವು. ಈ ವಿಡಿಯೋಗಳನ್ನು ಬಿಗ್ ಬಾಸ್ ಮನೆಯಲ್ಲಿ ಪ್ಲೇ ಮಾಡಲಾಗಿತ್ತು.