
ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಅವರು ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ಕ್ಷಣದ ಫೋಟೋಗಳನ್ನು ಹಂಚಿಕೊಂಡು ಅವರು ಖುಷಿಪಟ್ಟಿದ್ದಾರೆ.

‘ಲಹರಿ ಮ್ಯೂಸಿಕ್’ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ ‘ಡಿವೈನ್ ಟೈಡ್ಸ್’ ಆಲ್ಬಂಗಾಗಿ ರಿಕ್ಕಿ ಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಅವರು ಗ್ರ್ಯಾಮಿ ಪ್ರಶಸ್ತಿ ಪಡೆದಿರುವುದು ಇದು ಎರಡನೇ ಬಾರಿ.

ಗ್ರ್ಯಾಮಿ ಪಡೆದು ಸಾಧನೆ ಮಾಡಿದ ಕನ್ನಡಿಗ ರಿಕ್ಕಿ ಕೇಜ್ ಅವರಿಗೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ರಿಕ್ಕಿ ಕೇಜ್ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಕುಟುಂಬದವರಿಗೆ ಮತ್ತು ಆಪ್ತರಿಗೆ ಖುಷಿ ನೀಡಿದೆ. ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಪ್ರಧಾನಿ ಮೋದಿ ಅವರನ್ನು ರಿಕ್ಕಿ ಕೇಜ್ ಭೇಟಿ ಮಾಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳನ್ನು ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ನಿಮ್ಮನ್ನು ಭೇಟಿ ಮಾಡಿ ಖುಷಿ ಆಯಿತು. ಸಂಗೀತದ ಬಗ್ಗೆ ನಿಮಗೆ ಇರುವ ಉತ್ಸಾಹ ಇನ್ನಷ್ಟು ಬಲವಾಗುತ್ತಿದೆ. ನಿಮ್ಮ ಭವಿಷ್ಯಕ್ಕೆ ಒಳಿತಾಗಲಿ’ ಎಂದು ನರೇಂದ್ರ ಮೋದಿ ಅವರು ರಿಕ್ಕಿ ಕೇಜ್ಗೆ ಹಾರೈಸಿದ್ದಾರೆ.