Hansika Motwani: ಒಟಿಟಿಯಲ್ಲಿ ನೇರ ಪ್ರಸಾರ ಆಗಲಿದೆಯಾ ‘ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ ಮದುವೆ?
TV9 Web | Updated By: ಮದನ್ ಕುಮಾರ್
Updated on:
Nov 13, 2022 | 7:21 PM
Hansika Motwani Marriage: ಹನ್ಸಿಕಾ ಮೋಟ್ವಾನಿ ಮದುವೆಯ ಕ್ಷಣಗಳನ್ನು ಪ್ರಸಾರ ಮಾಡಲು ಒಟಿಟಿ ಸಂಸ್ಥೆಯೊಂದು ಮುಂದೆ ಬಂದಿದೆ ಎನ್ನಲಾಗಿದೆ. ವಿವಾಹ ನೇರ ಪ್ರಸಾರ ಆಗಲಿದೆ ಎಂದು ಹೇಳಲಾಗುತ್ತಿದೆ.
1 / 5
ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಉದ್ಯಮಿ ಸೊಹೈಲ್ ಜೊತೆ ಅವರು ಮದುವೆ ಆಗಲಿದ್ದಾರೆ.
2 / 5
ಕೆಲವೇ ದಿನಗಳ ಹಿಂದೆ ಹನ್ಸಿಕಾ ಅವರು ತಮ್ಮ ಎಂಗೇಜ್ಮೆಂಟ್ ಸುದ್ದಿ ಹಂಚಿಕೊಂಡರು. ಪ್ಯಾರಿಸ್ನಲ್ಲಿ ಸೊಹೈಲ್ ಪ್ರಪೋಸ್ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಶುಭ ಸಮಾಚಾರ ತಿಳಿಸಿದರು.
3 / 5
ಮೂಲಗಳ ಪ್ರಕಾರ ಡಿಸೆಂಬರ್ 4ರಂದು ಹನ್ಸಿಕಾ ಮೋಟ್ವಾನಿ ಅವರ ಮದುವೆ ನಡೆಯಲಿದೆ. ಕೆಲವೇ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದ್ದು, ಬಹಳ ಅದ್ದೂರಿಯಾಗಿ ವಿವಾಹ ನೆರವೇರಿಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
4 / 5
ಸ್ಟಾರ್ ನಟಿಯ ಮದುವೆ ಕ್ಷಣಗಳನ್ನು ಪ್ರಸಾರ ಮಾಡಲು ಒಟಿಟಿ ಸಂಸ್ಥೆಯೊಂದು ಮುಂದೆ ಬಂದಿದೆ ಎನ್ನಲಾಗಿದೆ. ವಿವಾಹ ನೇರ ಪ್ರಸಾರ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.
5 / 5
ಬಹುಭಾಷೆಯಲ್ಲಿ ಹನ್ಸಿಕಾ ಫೇಮಸ್ ಆಗಿದ್ದಾರೆ. ‘ಬಿಂದಾಸ್’ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ನಟಿಸುವ ಮೂಲಕ ಕರುನಾಡಿನ ಪ್ರೇಕ್ಷಕರಿಗೂ ಹನ್ಸಿಕಾ ಪರಿಚಿತರಾದರು. ಈಗ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತಿದೆ.