ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಹರೀಶ್ ರಾಯ್, ಶಿಕ್ಷೆ ತಪ್ಪಿಸಿಕೊಂಡಿದ್ದು ಹೇಗೆ?

Updated on: Nov 06, 2025 | 1:23 PM

Harish Rai: ಹರೀಶ್ ರಾಯ್ ನಿಧನ ಹೊಂದಿದ್ದಾರೆ. ಅಂದಹಾಗೆ ಅವರು ಚಿತ್ರರಂಗಕ್ಕೆ ಬರುವ ಮುಂಚೆಯೇ ಕೊಲೆ ಪ್ರಕರಣದ ಆರೋಪಿ ಆಗಿದ್ದರು. ಮಾತ್ರವಲ್ಲ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದು ಶಿಕ್ಷೆ ಸಹ ಆಗಿತ್ತು ಹರೀಶ್ ರಾಯ್​​ ಅವರಿಗೆ. ಏನಿದು ಪ್ರಕರಣ? ಪ್ರಕರಣದಿಂದ ಹೊರಬಂದಿದ್ದು ಹೇಗೆ? ಇಲ್ಲಿದೆ ಮಾಹಿತಿ...

1 / 7
ಕನ್ನಡ ಚಿತ್ರರಂಗದ ಜನಪ್ರಿಯ ಖಳನಟ ಹರೀಶ್ ರಾಯ್ ನಿಧನ ಹೊಂದಿದ್ದಾರೆ. ಅವರ ಕಳೆದ ಕೆಲ ವರ್ಷಗಳಿಂದಲೂ ಕ್ಯಾನ್ಸರ್​​ನೊಂದಿಗೆ ಹೋರಾಡುತ್ತಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಕನ್ನಡ ಚಿತ್ರರಂಗದ ಜನಪ್ರಿಯ ಖಳನಟ ಹರೀಶ್ ರಾಯ್ ನಿಧನ ಹೊಂದಿದ್ದಾರೆ. ಅವರ ಕಳೆದ ಕೆಲ ವರ್ಷಗಳಿಂದಲೂ ಕ್ಯಾನ್ಸರ್​​ನೊಂದಿಗೆ ಹೋರಾಡುತ್ತಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

2 / 7

ಅಂದಹಾಗೆ ಹರೀಶ್ ರಾಯ್ ಅವರು ಚಿತ್ರರಂಗಕ್ಕೆ ಬರುವ ಮುಂಚೆಯೇ ಕೊಲೆ ಪ್ರಕರಣದ ಆರೋಪಿ ಆಗಿದ್ದರು. ಮಾತ್ರವಲ್ಲ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದು ಶಿಕ್ಷೆ ಸಹ ಆಗಿತ್ತು ಹರೀಶ್ ರಾಯ್​​ ಅವರಿಗೆ. ಈ ಪ್ರಕರಣದ ಬಗ್ಗೆ ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದರು.

3 / 7

1992, ನವೆಂಬರ್ 13 ರಂದು ಉಡುಪಿಯಲ್ಲಿ ಶಾಲಾ ಶಿಕ್ಷಕರಾಗಿದ್ದ ಜಯರಾಮ್ ಎಂಬುವರ ಮೇಲೆ ಹರೀಶ್ ರಾಯ್ ಮತ್ತು ಅವರ ಕೆಲವರು ಗೆಳೆಯರು ಹಲ್ಲೆ ಮಾಡಿದ್ದರಂತೆ. ಜಯರಾಮ್ ಒಂದು ವಾರದ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದರು.

4 / 7

ಆ ಸಂದರ್ಭದಲ್ಲಿ ಹರೀಶ್ ರಾಯ್ ಸೇರಿದಂತೆ ಇನ್ನೂ ಕೆಲವರ ಮೇಲೆ ಕೊಲೆ ಆರೋಪ ದಾಖಲಾಗಿತ್ತು. ಪ್ರಕರಣ ಸೆಷನ್ಸ್​​ ಕೋರ್ಟ್​​ನಲ್ಲಿತ್ತು, ಆದರೆ ಹರೀಶ್ ರಾಯ್ ಅಷ್ಟರಲ್ಲೆ ಬೆಂಗಳೂರಿಗೆ ಬಂದು ಸಿನಿಮಾಗಳಲ್ಲಿ ತೊಡಗಿಕೊಂಡರು.

5 / 7

‘ಓಂ’ ಸಿನಿಮಾದಿಂದ ಅವರಿಗೆ ಖ್ಯಾತಿ ಸಿಕ್ಕಿತು, ಒಂದರ ಹಿಂದೊಂದರಂತೆ ಸಿನಿಮಾ ಅವಕಾಶಗಳು ಹರೀಶ್ ರಾಯ್ ಅವರಿಗೆ ದೊರಕುತ್ತಾ ಹೋಯ್ತು, ಹರೀಶ್ ರಾಯ್ ಕೊಲೆ ಪ್ರಕರಣದ ವಿಚಾರಣೆ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ.

6 / 7

ಆದರೆ 2003 ರಲ್ಲಿ ಹರೀಶ್ ರಾಯ್ ಸೇರಿದಂತೆ ಹಲವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಘೋಷಣೆ ಆಯ್ತು. ಹರೀಶ್ ರಾಯ್ ಪರಪ್ಪನ ಅಗ್ರಹಾರ ಜೈಲು ಸೇರಿದರು. ಆ ಸಮಯದಲ್ಲಿ ಹರೀಶ್ ರಾಯ್ ಕೈಯಲ್ಲಿ ಬಹಳ ಸಿನಿಮಾ ಆಫರ್​​ಗಳು ಸಹ ಇದ್ದವು.

7 / 7

ಬಳಿಕ ಹರೀಶ್ ರಾಯ್, ಒಳ್ಳೆಯ ಲಾಯರ್ ಒಬ್ಬರ ಹಿಡಿದು ತೀರ್ಪನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸಿದರು. ಅಲ್ಲಿ ಅವರಿಗೆ ಪ್ರಕರಣದಿಂದ ಮುಕ್ತಿ ದೊರಕಿತು. ಹರೀಶ್ ಹೇಳುವಂತೆ, ಸತ್ತ ವ್ಯಕ್ತಿಯೇ, ಹರೀಶ್ ಅಂದು ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿದ್ದರಂತೆ.

Published On - 1:22 pm, Thu, 6 November 25

Loading...
Unable to load recommendations.
Follow Us