ತಂದೆ-ಮಗಳ ಪಾತ್ರದಲ್ಲಿ ರಾಘಣ್ಣ-ಹರ್ಷಿಕಾ ಪೂಣಚ್ಚ​; ಇಲ್ಲಿದೆ ‘ಸ್ತಬ್ಧ’ ಫೋಟೋ ಗ್ಯಾಲರಿ

Edited By:

Updated on: Jan 29, 2022 | 3:29 PM

ನಟಿ ಹರ್ಷಿಕಾ ಪೂಣಚ್ಚ ಮತ್ತು ರಾಘವೇಂದ್ರ ರಾಜ್​ಕುಮಾರ್​ ಅವರು ‘ಸ್ತಬ್ಧ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿತು. ಅದರ ಫೋಟೋ ಗ್ಯಾಲರಿ ಇಲ್ಲಿದೆ..

1 / 6
ಬ್ಯಾಕ್​ ಟು ಬ್ಯಾಕ್​ ಭೋಜ್​ಪುರಿ ಸಿನಿಮಾ ಮಾಡುತ್ತಿದ್ದ ನಟಿ ಹರ್ಷಿಕಾ ಪೂಣಚ್ಚ ಅವರು ಈಗ ಮತ್ತೆ ಕನ್ನಡದಲ್ಲೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ‘ಸ್ತಬ್ಧ’ ಎಂದು ಶೀರ್ಷಿಕೆ ಇಡಲಾಗಿದೆ.

2 / 6
‘ಸ್ತಬ್ಧ’ ಸಿನಿಮಾದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಅವರು ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ರಾಘಣ್ಣ ಮತ್ತು ಹರ್ಷಿಕಾ ಪೂಣಚ್ಚ ಅವರು ತಂದೆ-ಮಗಳಾಗಿ ಅಭಿನಯಿಸಲಿರುವುದು ವಿಶೇಷ.

3 / 6
‘ರಾಘಣ್ಣ ಜೊತೆ ನಟಿಸುವುದು ನನಗೆ ಹೆಮ್ಮೆಯ ವಿಚಾರ. ವಜ್ರೇಶ್ವರ ಕಂಬೈನ್ಸ್​ಗೆ ನಾನು ಒಂಥರಾ ಮನೆಮಗಳು ಆಗಿದ್ದೇನೆ. ಜಾಕಿ ಚಿತ್ರದಲ್ಲಿ ಅವರು ಅವಕಾಶ ನೀಡಿದ ನೆನಪು ಇನ್ನೂ ಹಸಿರಾಗಿದೆ’ ಎಂದಿದ್ದಾರೆ ಹರ್ಷಿಕಾ.

4 / 6
ಈ ಹಿಂದೆ ಪುನೀತ್​ ರಾಜ್​ಕುಮಾರ್​ ಮತ್ತು ಶಿವರಾಜ್​ಕುಮಾರ್​ ಜೊತೆ ನಟಿಸಿದ್ದ ಹರ್ಷಿಕಾ ಪೂಣಚ್ಚ ಅವರು ರಾಘವೇಂದ್ರ ರಾಜ್​ಕುಮಾರ್​ ಜೊತೆ ನಟಿಸಲು ಕಾಯುತ್ತಿದ್ದರು. ‘ಸ್ತಬ್ಧ’ ಸಿನಿಮಾ ಮೂಲಕ ಅವರಿಗೆ ಈ ಅವಕಾಶ ಸಿಕ್ಕಿದೆ.

5 / 6
‘ಈ ಸಿನಿಮಾದಲ್ಲಿ ವಿಭಿನ್ನವಾದ ಕಥೆ ಇದೆ. ಮೂರು ಪಾತ್ರಗಳು ಸಮಯಕ್ಕೆ ತಕ್ಕಂತೆ ಹೇಗೆ ಬದಲಾಗುತ್ತವೆ ಎಂಬುದನ್ನು ಚೆನ್ನಾಗಿ ತೋರಿಸಲಾಗಿದೆ. ಇಡೀ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ’ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

6 / 6
‘ಸ್ತಬ್ಧ’ ಚಿತ್ರವನ್ನು ಡಾ. ಡಿ.ವಿ. ವಿದ್ಯಾಸಾಗರ್​ ಅವರು ನಿರ್ಮಾಣ ಮಾಡುತ್ತಿದ್ದಾರೆ. ಲಾಲಿ ರಾಘವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ನೆರವೇರಿದೆ. ಹೊಸ ನಟ ಪ್ರತಾಪ್​ ಸಿಂಹ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Loading...
Unable to load recommendations.
Follow Us