- Kannada News Photo gallery Health Tips: Foods that trigger cravings and make your Weight Gain Latest News in Kannada
Health Tips: ನಿಮ್ಮಿಷ್ಟದ ಈ ತಿಂಡಿಗಳು ನಿಮ್ಮ ತೂಕ ಹೆಚ್ಚಲು ಕಾರಣವಾಗಬಹುದು, ಜೋಪಾನ!
ಯಾವಾಗಲೋ ಆಗೀಗ ಈ ರೀತಿಯ ಜಂಕ್ಫುಡ್ಗಳನ್ನು ತಿನ್ನುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಆದರೆ, ಆಗಾಗ ಈ ರೀತಿಯ ಆಹಾರವನ್ನು ತಿಂದರೆ ತೂಕ ಹೆಚ್ಚಾಗುವುದು ಖಂಡಿತ.
Updated on: Feb 10, 2023 | 7:49 AM

ತೂಕ ಹೆಚ್ಚಾಗುವ ಸಮಸ್ಯೆ ಒಬ್ಬಿಬ್ಬರದಲ್ಲ. ತೂಕ ಹೆಚ್ಚಾಗಲು ನಮ್ಮ ಜೀವನಶೈಲಿ, ಆಹಾರ ಕ್ರಮವೂ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೊಂದು ಆಹಾರವನ್ನು ನೋಡಿದಾಗ ನಮಗೆ ಅದನ್ನು ತಿನ್ನಬೇಕೆಂಬ ಆಸೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಈ ರೀತಿಯ ಕಡುಬಯಕೆಗಳು ನಮ್ಮ ತೂಕವನ್ನು ಹೆಚ್ಚಿಸುತ್ತದೆ. ಅಂತಹ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ. ಈ ಆಹಾರಗಳು ಹೈಪೋಥಾಲಮಸ್ ಅನ್ನು ಉತ್ತೇಜಿಸುತ್ತದೆ. ಯಾವಾಗಲೋ ಆಗೀಗ ಈ ರೀತಿಯ ಜಂಕ್ಫುಡ್ಗಳನ್ನು ತಿನ್ನುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಆದರೆ, ಆಗಾಗ ಈ ರೀತಿಯ ಆಹಾರವನ್ನು ತಿಂದರೆ ತೂಕ ಹೆಚ್ಚಾಗುವುದು ಖಂಡಿತ.

ಬಿಳಿ ಪಾಸ್ತಾ: ಸಂಸ್ಕರಿಸಿದ ಹಿಟ್ಟು, ಬ್ರೆಡ್‌ಗಳು ಮತ್ತು ಪಾಸ್ತಾದಂತಹ ಎಲ್ಲಾ ರೀತಿಯ ಸರಳ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಇನ್ಸುಲಿನ್ ಅನ್ನು ಬಿಡುಗಡೆ ಮಾಡಲು ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುತ್ತದೆ. ಇದರ ಪರಿಣಾಮವಾಗಿ, ಕ್ರಮೇಣ ತೂಕ ಹೆಚ್ಚಾಗುತ್ತದೆ.

ಕ್ಯಾಂಡಿ: ಚಾಕೊಲೇಟ್‌ಗಳು, ಸಿಹಿತಿಂಡಿಗಳು ಮತ್ತು ಕ್ಯಾಂಡಿಗಳು ಆರೋಗ್ಯವನ್ನು ಹಾಳು ಮಾಡುತ್ತವೆ. ಅವುಗಳಲ್ಲಿರುವ ಸಕ್ಕರೆ ಅಂಶ ತೂಕ ಹೆಚ್ಚಾಗಲು ಕಾರಣವಾಗುತ್ತವೆ. ಅವು ಫ್ರಕ್ಟೋಸ್ ಸಿರಪ್, ಕಾರ್ನ್ ಸಿರಪ್ಗಳಿಂದ ತುಂಬಿರುತ್ತವೆ. ಇದು ದೇಹವು ಸಾಕಷ್ಟು ಮಟ್ಟದ ಲೆಪ್ಟಿನ್ ಅನ್ನು ಉತ್ಪಾದಿಸುವುದನ್ನು ತಡೆಯುತ್ತದೆ.

ಫ್ರೆಂಚ್ ಫ್ರೈಸ್: ಬಹುತೇಕರ ಫೇವರೆಟ್ ತಿಂಡಿಗಳಲ್ಲಿ ಫ್ರೆಂಚ್ ಫ್ರೈಸ್ ಕೂಡ ಒಂದು. ಕೇವಲ ಆಲೂಗಡ್ಡೆ, ಎಣ್ಣೆ ಮತ್ತು ಉಪ್ಪು ಹಾಕಿ ತಯಾರಿಸಲಾಗುವ ಈ ತಿನಿಸು ನಮ್ಮ ಕಡುಬಯಕೆಯನ್ನು ಹೆಚ್ಚಿಸುತ್ತದೆ. ಆಲೂಗಡ್ಡೆ ಮತ್ತು ಎಣ್ಣೆಯ ಅಂಶ ಎರಡೂ ಸೇರುವುದರಿಂದ ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಚಿಪ್ಸ್ : ಆಲೂಗಡ್ಡೆ ಮತ್ತು ಚೀಸ್‌ನಿಂದ ತಯಾರಿಸಿದ ಚಿಪ್ಸ್ ಮತ್ತು ಕ್ರ್ಯಾಕರ್‌ಗಳು ಕೂಡ ತೂಕವನ್ನು ಹೆಚ್ಚಿಸುತ್ತವೆ. ಇವನ್ನು ಒಮ್ಮೆ ತಿನ್ನಲು ಆರಂಭಿಸಿದರೆ ಆ ಪ್ಯಾಕ್ ಖಾಲಿ ಆಗುವವರೆಗೆ ಸುಮ್ಮನಿರಲು ಸಾಧ್ಯವೇ ಇಲ್ಲ.

ಐಸ್ ಕ್ರೀಮ್: ಕೆಲವರಿಗೆ ಐಸ್ ಕ್ರೀಮ್ ಎಷ್ಟು ಇಷ್ಟವೆಂದರೆ ಒಂದು ಬಕೆಟ್ ಐಸ್ಕ್ರೀಂ ಕೊಟ್ಟರೂ ತಿಂದು ಮುಗಿಸುತ್ತಾರೆ. ಐಸ್ ಕ್ರೀಮ್‌ಗಳು ಕೊಬ್ಬುಗಳು, ಸಕ್ಕರೆ ಮತ್ತು ಕ್ಯಾಲೊರಿಗಳಿಂದ ತುಂಬಿರುತ್ತವೆ. ಇದು ಬೊಜ್ಜನ್ನು ಹೆಚ್ಚಿಸುತ್ತದೆ.

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.
Read More



