ಹಾರ್ಮೋನ್ ಅಸಮತೋಲನದಿಂದ ಗರ್ಭಧರಿಸಲು ಸಾಧ್ಯವಾಗದಿದ್ದರೆ ಇದನ್ನು 3 ತಿಂಗಳು ಮಾಡಿ
ಕೆಲವೊಮ್ಮೆ ಹಾರ್ಮೋನ್ ಅಸಮತೋಲನದಿಂದಾಗಿ ಗರ್ಭಧರಿಸಲು ಸಾಧ್ಯವಾಗುವುದಿಲ್ಲ. ಅದಲ್ಲದೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚುತ್ತಿದ್ದು, ಇದನ್ನು ಪರಿಹರಿಸಿಕೊಳ್ಳಲು ನಾನಾ ರೀತಿಯ ಸಲಹೆಗಳನ್ನು, ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಹಾರ್ಮೋನ್ ಅಸಮತೋಲನದಿಂದ ಗರ್ಭಧರಿಸದಿದ್ದರೆ ಡಾ. ಪ್ರೀತಿ ಶಾನಭಾಗ್ ತಿಳಿಸಿರುವ ಈ ಸಲಹೆಗಳನ್ನು ಅನುಸರಿಸಿ ನೋಡಿ.
1 / 5
ಗರ್ಭಧರಿಸದಿರಲು ಹಲವಾರು ಕಾರಣಗಳಿರಬಹುದು. ಅದರಲ್ಲಿ ಹಾರ್ಮೋನ್ ಅಸಮತೋಲನವೂ ಒಂದು ಮುಖ್ಯ ಕಾರಣವಾಗಿದೆ. ಅದಲ್ಲದೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚುತ್ತಿದ್ದು, ಇದನ್ನು ಪರಿಹರಿಸಿಕೊಳ್ಳಲು ನಾನಾ ರೀತಿಯ ಸಲಹೆಗಳನ್ನು, ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಹಾರ್ಮೋನ್ ಅಸಮತೋಲನದಿಂದ ಗರ್ಭಧರಿಸದಿದ್ದರೆ ಡಾ. ಪ್ರೀತಿ ಶಾನಭಾಗ್ ತಿಳಿಸಿರುವ ಈ ಸಲಹೆಗಳನ್ನು ಅನುಸರಿಸಿ ನೋಡಿ.
2 / 5
ಹಾರ್ಮೋನ್ ಅಸಮತೋಲನದಿಂದ ಗರ್ಭ ಧರಿಸುತ್ತಿಲ್ಲವಾದಲ್ಲಿ ಈ 6 ಬದಲಾವಣೆಗಳನ್ನು ಮಾಡಿ ನೋಡಿ. ಇದರಿಂದ 3 ತಿಂಗಳಲ್ಲಿ ನಿಮಗೆ ಸರಿಯಾದ ಫಲಿತಾಂಶ ಸಿಗುತ್ತದೆ. ಈ ಸರಳ ನಿಯಮಗಳಲ್ಲಿ ಮೊದಲನೇಯದು ಪ್ರತಿ ಮುಂಜಾನೆ 15 ನಿಮಿಷಗಳ ಕಾಲ ತಪ್ಪದೆ ಧ್ಯಾನ ಮಾಡಿ. ಇದು ಹಾರ್ಮೋನ್ ಅಸಮತೋಲನವನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
3 / 5
ನಿಮ್ಮ ರಾತ್ರಿ ಊಟದಲ್ಲಿ ಸಿರಿ ಧಾನ್ಯಗಳನ್ನು ಸೇವನೆಯನ್ನು ಹೆಚ್ಚಿಸಿ. ಇದರಿಂದ ನಿಮಗೆ ಅನೇಕ ರೀತಿಯ ಲಾಭಗಳಿದ್ದು, ಅಲ್ಲದೆ ಇವು ಹಾರ್ಮೋನ್ ಅಸಮತೋಲನವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಆದರೆ ಇದನ್ನು ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
4 / 5
ನಿಮ್ಮ ತಿಂಡಿ ಅಥವಾ ಊಟದಲ್ಲಿ ಮೊಸರು ಅಥವಾ ಮಜ್ಜಿಗೆಯನ್ನು ಸೇವನೆ ಮಾಡುವುದನ್ನು ಮರೆಯಬೇಡಿ. ಇದನ್ನು ದಿನದಲ್ಲಿ ಒಂದು ಅಥವಾ ಎರಡು ಬಾರಿಯಾದರೂ ತಪ್ಪದೆ ಸೇವನೆ ಮಾಡಿ. ಅಲ್ಲದೆ ರಾತ್ರಿ ಊಟದ ನಂತರ ಅಶ್ವಗಂಧ ಟ್ಯಾಬ್ಲೆಟ್ ಸೇವನೆ ಒಳ್ಳೆಯದು.
5 / 5
ಜೊತೆಗೆ, ಊಟದ ನಂತರ 20 ನಿಮಿಷಗಳ ಕಾಲ ನಡಿಗೆ ಮಾಡುವುದನ್ನು ಮರೆಯಬೇಡಿ. ಸಂಜೆ ಸಮಯದಲ್ಲಿ ಕ್ಯಾಮೋಮೈಲ್ ಟೀ ಸೇವನೆ ಮಾಡಿ ಇದನ್ನು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿದ್ದು, ಇದು ಹಾರ್ಮೋನ್ ಅಸಮತೋಲನವನ್ನು ಕೂಡ ಕಡಿಮೆ ಮಾಡುತ್ತದೆ.