- Kannada News Photo gallery Healthy and Refresh: Add these Ingredients to your Morning Tea and Stay Refreshed Throughout the day
Healthy and Refresh: ಬೆಳಗ್ಗಿನ ಆರೋಗ್ಯಕರ ಆರಂಭಕ್ಕಾಗಿ ಈ ರೀತಿಯಾಗಿ ಚಹಾ ತಯಾರಿಸಿ
ಒಂದು ಕಪ್ ಟೀ ಇಲ್ಲದಿದ್ದರೆ, ದಿನವೇ ಪ್ರಾರಂಭವಾಗುವುದಿಲ್ಲ ಎನ್ನುವವರು ಸಾಕಷ್ಟಿದ್ದಾರೆ. ಆದ್ದರಿಂದ ಆರೋಗ್ಯಕರವಾಗಿ ದಿನವನ್ನು ಪ್ರಾರಂಭಿಸಲು ಚಹಾದೊಂದಿಗೆ ಈ ಪದಾರ್ಥಗಳನ್ನು ಬಳಸುವುದನ್ನು ಮರೆಯದಿರಿ.
Updated on:Feb 02, 2023 | 2:35 PM

ಒಂದು ಕಪ್ ಟೀ ಇಲ್ಲದಿದ್ದರೆ, ದಿನವೇ ಪ್ರಾರಂಭವಾಗುವುದಿಲ್ಲ ಎನ್ನುವವರು ಸಾಕಷ್ಟಿದ್ದಾರೆ. ಆದ್ದರಿಂದ ಆರೋಗ್ಯಕರವಾಗಿ ದಿನವನ್ನು ಪ್ರಾರಂಭಿಸಲು ಚಹಾದೊಂದಿಗೆ ಈ ಪದಾರ್ಥಗಳನ್ನು ಬಳಸುವುದನ್ನು ಮರೆಯದಿರಿ.

ಸೋಂಪು ಕಾಳು: ನಿಮ್ಮ ಒಂದು ಕಪ್ ಚಹಾಕ್ಕೆ ಅರ್ಧ ಚಮಚ ಸೋಂಪು ಕಾಳುಗಳನ್ನು ಸೇರಿಸಿ. ಇದು ನಿಮ್ಮ ಕರುಳಿನ ಆರೋಗ್ಯಕ್ಕೂ ಉತ್ತಮವಾಗಿದೆ. ಆದ್ದರಿಂದ ನೀವು ಆರೋಗ್ಯಕರ ಚಹಾ ಕುಡಿಯುವುದನ್ನು ರೂಡಿಸಿಕೊಳ್ಳಿ.

ನಿಮ್ಮ ಚಹಾಕ್ಕೆ ಒಂದು ಚಮಚ ಲಿಂಬೆ ರಸವನ್ನು ಸೇರಿಸಿ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಹಾಗೂ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ದಿನಪೂರ್ತಿ ನಿಮ್ಮನ್ನು ಉಲ್ಲಾಸದಿಂದಿರುವಂತೆ ಮಾಡುತ್ತದೆ.

ತೆಂಗಿನ ಎಣ್ಣೆ: ನಿಮ್ಮ ಬೆಳಗ್ಗಿನ ಚಹಾದಲ್ಲಿ ಒಂದು ಹನಿ ತೆಂಗಿನ ಎಣ್ಣೆಯನ್ನು ಸೇರಿಸಿ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ ಹಾಗೂ ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಕಾರಿಯಾಗಿದೆ.

ಶುಂಠಿ: ನಿಮ್ಮ ಬೆಳಗ್ಗಿನ ಚಹಾದಲ್ಲಿ ಶುಂಠಿಯನ್ನು ಸೇರಿಸಿಕೊಳ್ಳಿ. ಶುಂಠಿಯಲ್ಲಿರುವ ಉತ್ಕರ್ಷಣ ನಿರೋಧಕ ಶಕ್ತಿ ಶೀತ ಕೆಮ್ಮಿನಿಂದ ನಿಮ್ಮನ್ನು ದೂರವಿಡುತ್ತದೆ. ಇದಲ್ಲದೇ ತೂಕ ನಷ್ಟಕ್ಕೂ ಸಹಕಾರಿಯಾಗಿದೆ.

ಜೇನುತುಪ್ಪ: ಬೆಳಗ್ಗಿನ ಚಹಾದಲ್ಲಿ ಒಂದು ಚಮಚ ಜೇನುತುಪ್ಪವನ್ನು ಸೇರಿಸುವುದರಿಂದ ಇದು ಚಹಾದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಇದು ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ.

ತುಳಸಿ ಎಲೆ: ತುಳಸಿಯೂ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ನಿಮ್ಮ ಬೆಳಗ್ಗಿನ ಚಹಾದಲ್ಲಿ ತುಳಸಿ ಎಲೆಯನ್ನು ಬಳಸಿ. ಇದು ನಿಮ್ಮನ್ನು ದಿನ ಪೂರ್ತಿ ಉಲ್ಲಾಸದಿಂದಿರುವಂತೆ ಮಾಡುತ್ತದೆ.
Published On - 2:35 pm, Thu, 2 February 23




