- Kannada News Photo gallery Heavy fog in 40 years on Bangalore Hyderabad highway near chikkaballapur accident
Chikkaballapur: 40 ವರ್ಷಗಳಿಂದ ಇಂಥ ದಟ್ಟ ಮಂಜು ನೋಡಿಲ್ಲ, ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ವಾಹನ ಸವಾರರ ಪರದಾಟ!
ಒಂದೆಡೆ ವಿಪರೀತ ಚಳಿ ಮತ್ತೊಂದೆಡೆ ವಿಪರೀತ ಮಂಜು, ದಟ್ಟವಾಗಿ ಕವಿದ ಮಂಜಿನಿಂದಾಗಿ ಬೆಳಗಿನ ಜಾವ ವಾಹನ ಸವಾರರು ಪರದಾಡ್ತಿದ್ದಾರೆ. ಇನ್ನು ವಾಹನ ದಟ್ಟಣೆಗೆ ಖ್ಯಾತಿಯಾಗಿರುವ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ಕಾಣದೆ ವಾಹನ ಸವಾರರ ಪರದಾಟ ಒಂದೆಡೆಯಾದ್ರೆ ಮತ್ತೊಂದೆಡೆ ಅಪಘಾತಗಳು ನಡೆದು ಚಾಲಕರುಗಳ ಗಲಾಟೆ ಮಾಡಿಕೊಳ್ಳುವಂತಾಗಿದೆ. ಈ ಕುರಿತು ಒಂದು ವರದಿ.
Updated on: Jan 18, 2023 | 11:01 AM

ಒಂದೆಡೆ ವಿಪರೀತ ಚಳಿ ಮತ್ತೊಂದೆಡೆ ವಿಪರೀತ ಮಂಜು, ದಟ್ಟವಾಗಿ ಕವಿದ ಮಂಜಿನಿಂದಾಗಿ ಬೆಳಗಿನ ಜಾವ ವಾಹನ ಸವಾರರು ಪರದಾಡ್ತಿದ್ದಾರೆ. ಇನ್ನು ವಾಹನ ದಟ್ಟಣೆಗೆ ಖ್ಯಾತಿಯಾಗಿರುವ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ಕಾಣದೆ ವಾಹನ ಸವಾರರ ಪರದಾಟ ಒಂದೆಡೆಯಾದ್ರೆ ಮತ್ತೊಂದೆಡೆ ಅಪಘಾತಗಳು ನಡೆದು ಚಾಲಕರುಗಳ ಗಲಾಟೆ ಮಾಡಿಕೊಳ್ಳುವಂತಾಗಿದೆ. ಈ ಕುರಿತು ಒಂದು ವರದಿ.

ಅದು ರಾಷ್ಟ್ರೀಯ ಹೆದ್ದಾರಿ 44. ಬೆಂಗಳೂರು ಹೈದರಾಬಾದ್ ಮಹಾ ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ. ಇದೆ ರಸ್ತೆಯಲ್ಲಿ ಬೆಳಗಾದ್ರೆ ಸಾಕು, ಹೈದರಾಬಾದ್ ನಿಂದ ಬೆಂಗಳೂರಿಗೆ ಇರುವೆ ಸಾಲಿನಂತೆ... ವಾಹನಗಳು ಚಲಿಸುತ್ತವೆ.

ಆದ್ರೆ ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ 5 ಗಂಟೆಯಿಂದ 7 ಗಂಟೆವರೆಗೂ... ದಟ್ಟವಾಗಿ ಮಂಜು ಕವಿಯುತ್ತಿದೆ.

ಇದ್ರಿಂದ ಹೆದ್ದಾರಿ ಯಾವುದು? ರಸ್ತೆ ಕೊನೆ ಎಲ್ಲಿದೆ? ರಸ್ತೆ ಹೇಗಿದೆ ಅಂತ ವಾಹನಗಳ ಚಾಲಕರಿಗೆ ಗೊತ್ತಾಗುತ್ತಿಲ್ಲ.

ಇನ್ನು ನಡುರಸ್ತೆಯಲ್ಲಿ ವಾಹನಗಳು ಕೆಟ್ಟು ನಿಂತಿರುವುದು ಗೊತ್ತಾಗದೆ ಪದೆ ಪದೆ ಅಪಘಾತಗಳು ಆಗ್ತಿವೆ.

ಚಿಕ್ಕಬಳ್ಳಾಪುರದ ಬೈಪಾಸ್ ನಲ್ಲಿ ಲಾರಿಯೊಂದು ಕೆಟ್ಟು ನಿಂತಿದ್ರೆ... ಹೈದರಾಬಾದ್ ನಿಂದ ಬೆಂಗಳೂರಿಗೆ ಬರ್ತಿದ್ದ ಸ್ಲೀಪರ್ ಕೋಚ್ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದು, ಚಾಲಕರ ಗಲಾಟೆಗೆ ಕಾರಣವಾಗಿದೆ.

ಕಳೆದ 40 ವರ್ಷಗಳಲ್ಲಿ ಕಂಡು ಕಾಣದಂಥ ದಟ್ಟ ಮಂಜು ಬೀಳುತ್ತಿದೆ. ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ಮಂಜು ಜೊತೆ ಕೊರೆಯುವ ಚಳಿ-ಗಾಳಿ, ಇದ್ರಿಂದ ವಾಹನ ಸವಾರರು ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ.. ವಿಶ್ರಾಂತಿ ಪಡೆಯಲು ಮುಂದಾಗುತ್ತಿದ್ದಾರೆ.

ವಾಹನಗಳ ಸವಾರರಿಗೆ ದಾರಿ ಸ್ಪಷ್ಟವಾಗಿ ಕಾಣಿಸದೆ ರಸ್ತೆ ವಿಭಜಕಕ್ಕೆ ಇಲ್ಲವೇ ಅಕ್ಕಪಕ್ಕದ ವಾಹನಗಳಿಗೆ ಡಿಕ್ಕಿ ಹೊಡೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಚಿಕ್ಕಬಳ್ಳಾಪುರ ಬೈಪಾಸ್ ನಲ್ಲಿ ಲಾರಿ ಕೆಟ್ಟು ನಿಂತು... ಹೈದರಾಬಾದಿನಿಂದ ಬರ್ತಿದ್ದ ಸ್ಲೀಪರ್ ಕೋಚ್ ಬಸ್ಸು ಡಿಕ್ಕಿ ಹೊಡೆದಿದೆ