ನಿಮಗೆ ತಿಳಿದಿರಬೇಕಾದ ಐದು ಸಂಚಾರ ನಿಯಮಗಳು ಇಲ್ಲಿವೆ
ಅದೆಷ್ಟೋ ಜನರಿಗೆ ತಿಳಿದಿರಬೇಕಾದ ಸಂಚಾರ ನಿಯಮಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹೆಚ್ಚಿನ ಜರಿಗೆ ತಿಳಿದಿರದ 5 ಸಂಚಾರ ನಿಯಮಗಳ ಪಟ್ಟಿ ಇಲ್ಲಿದೆ.
Updated on: Jul 19, 2022 | 3:55 PM

Here are five traffic rules you should know

Here are five traffic rules you should know

ಪಾದರಕ್ಷೆಗಳು- ಸಾಮಾಜಿಕ ಮಾಧ್ಯಮ ಮತ್ತು ತಪ್ಪಾದ ಸುದ್ದಿಗಳಿಂದಾಗಿ ವಾಹನ ಚಾಲನೆ ಅಥವಾ ಸವಾರಿ ಮಾಡುವಾಗ ಚಪ್ಪಲಿಗಳನ್ನು ಧರಿಸಿದರೆ ದಂಡದ ವಿಧಿಸಲಾಗುತ್ತದೆ ಎಂದು ಭಾವಿಸಿದರೆ ಅದು ತಪ್ಪು ಗ್ರಹಿಕೆ.

ಹೈ-ಬೀಮ್ ಲೈಟ್ ಬಳಕೆ- ಇದನ್ನು ಬಳಕೆ ಮಾಡುವುದು ತಪ್ಪು ಎಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಹೈ-ಬೀಮ್ ಬಳಕೆಯು ರಾತ್ರಿಯಲ್ಲಿ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನಿಮ್ಮ ಮುಂದೆ ಚಾಲನೆ ಮಾಡುವ ವಾಹನಗಳಿಗೆ ಮತ್ತು ವಿರುದ್ಧ ದಿಕ್ಕಿನಿಂದ ಬರುವ ವಾಹನಗಳಿಗೆ ತುಂಬಾ ಅನಾನುಕೂಲವಾಗಿದೆ. ನೀವು ಹೆದ್ದಾರಿಗಳಲ್ಲಿ ಹೈ ಬೀಮ್‌ಗಳನ್ನು ಬಳಸಬಹುದಾದರೂ ಒಂದೇ ಹೆದ್ದಾರಿಗಳಲ್ಲಿ ಹೈ-ಬೀಮ್ ಬಳಸುವುದನ್ನು ತಪ್ಪಿಸಿ. ಹೈ-ಬೀಮ್‌ನ ಅನುಚಿತ ಬಳಕೆ 500 ರೂ.ವರೆಗೆ ದಂಡವನ್ನು ವಿಧಿಸಬಹುದು.

ಪೊಲೀಸರೇ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ- ಕರ್ತವ್ಯದಲ್ಲಿರುವ ಯಾವುದೇ ಪೊಲೀಸ್ ಸಿಬ್ಬಂದಿ ರಸ್ತೆಯಲ್ಲಿ ಕಾನೂನು ಉಲ್ಲಂಘಿಸುವುದು ಕಂಡುಬಂದರೆ ಅಂತಹವರು ದುಪ್ಪಟ್ಟು ದಂಡ ಪಾವತಿಸಬೇಕಾಗುತ್ತದೆ.



















