ಯುಗಾದಿ ಹಬ್ಬದ ಅಂಗವಾಗಿ ಗ್ರಾಮೀಣ ಭಾಗದಲ್ಲಿ ವಿವಿಧ ಕ್ರೀಡೆಗಳು ನಡೆಯುತ್ತವೆ. ಕೋಟೆನಾಡು ಚಿತ್ರದುರ್ಗದಲ್ಲಿ ಜೋಡೆತ್ತಿನ ಗಾಡಿ ಓಟದ ಸ್ಪರ್ದೆ ಆಯೋಜಿಸಲಾಗಿತ್ತು. ಗ್ರಾಮೀಣ ಕ್ರೀಡೆಯಲ್ಲಿ ನಾಡಿನ ವಿವಿಧೆಡೆಯಿಂದ ಜೋಡೆತ್ತಿನ ಗಾಡಿ ಜತೆ ರೈತರ ಆಗಮಿಸಿ ಭಾಗಿಯಾಗಿದ್ದರು. ಇಲ್ಲಿದೆ ನೋಡಿ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಯ ಝಲಕ್.
Mar 24, 2023 | 3:20 PM
ಜೋಡೆತ್ತಿನ ಗಾಡಿ ಓಟದ ಸ್ಪರ್ದೆಯಲ್ಲಿ ಜೋಡೆತ್ತುಗಳ ಭರ್ಜರಿ ಓಟ. ಅಪರೂಪದ ಗ್ರಾಮೀಣ ಕ್ರೀಡೆ ಕಣ್ತುಂಬಿಕೊಳ್ಳಲು ಸೇರಿರುವ ಜನಸ್ತೋಮ. ಸ್ಪರ್ಧೆಯಲ್ಲಿ ಗೆದ್ದು ಬೀಗಲು ಜೋಡೆತ್ತುಗಳಿಗೆ ಹುರಿದುಂಬಿಸುತ್ತಿರುವ ರೈತರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ.
1 / 6
ಹೌದು ಈ ಗ್ರಾಮದ ವಾಲ್ಮೀಕಿ ಗೆಳೆಯರ ಬಳಗ ಜೋಡೆತ್ತಿನ ಓಟದ ಸ್ಪರ್ಧೆ ಆಯೋಜಿಸಿದೆ. ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಗ್ರಾಮೀಣ ಕ್ರೀಡೆಗೆ ಚಾಲನೆ ನೀಡಿದರು. ಸುಮಾರು 30ಕ್ಕೂ ಹೆಚ್ಚು ಜೋಡಿಗಳು ಈ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
2 / 6
ಇತ್ತೀಚೆಗೆ ಮರೆಯಾಗುತ್ತಿರುವ ಈ ಗ್ರಾಮೀಣ ಕ್ರೀಡೆ ಆಯೋಜಿಸಿದ್ದು ಕೃಷಿಗೆ ಉತ್ತೇಜನ ನೀಡುತ್ತದೆ. ಪ್ರಥಮ ,ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುತ್ತಿದ್ದು ಇದು ಜೂಜಾಟವಲ್ಲ. ಪಕ್ಕಾ ಗ್ರಾಮೀಣಕ್ರೀಡೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾದ್ಯಕ್ಷರು.
3 / 6
ಇನ್ನು ಕಳೆದ ಮೂರು ವರ್ಷಗಳಿಂದ ಹುಣಸೇಕಟ್ಟೆ ವಾಲ್ಮೀಕಿ ಗೆಳೆಯರ ಬಳಗ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುತ್ತಿದೆ. ಯುಗಾದಿ ಸಂದರ್ಭದಲ್ಲಿ ಅನೇಕ ಕಡೆ ಜೂಜಾಟ ಆಡಲಾಗುತ್ತದೆ. ಆದರೆ ನಮ್ಮೂರಲ್ಲಿ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಮತ್ತು ಕೃಷಿಗೆ ಉತ್ತೇಜನ ನೀಡುವ ಕಾರಣಕ್ಕೆ ಈ ಕ್ರೀಡೆ ಆಯೋಜಿಸಿದ್ದೇವೆ.
4 / 6
ಫ್ರಿಡ್ಜ್, ಟಿವಿ ಮತ್ತು ಫ್ಯಾನ್ ಹಾಗೂ ಪಾರಿತೋಷಕವನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನಾಗಿ ನೀಡಲಾಗುತ್ತಿದೆ ಅಂತಾರೆ ಗ್ರಾಮದ ರೈತ ಕಾಂತರಾಜ್.
5 / 6
ಒಟ್ಟಾರೆಯಾಗಿ ಕೋಟೆನಾಡಿನ ಹುಣಸೇಕಟ್ಟೆ ಗ್ರಾಮದಲ್ಲಿ ಜೋಡೆತ್ತಿನ ಗಾಡಿಯ ಓಟದ ಸ್ಪರ್ದೆ ನಡೆಯಿತು. ಸುಮಾರು 30ಕ್ಕೂ ಹೆಚ್ಚು ಸುತ್ತುಗಳಲ್ಲಿ ಓಟದ ಸ್ಪರ್ಧೆ ನಡೆದಿದೆ. ಬೆಳಗ್ಗೆ 10ಗಂಟೆಯಿಂದ ಸಂಜೆಯವರೆಗೆ ನಡೆದ ಗ್ರಾಮೀಣ ಕ್ರೀಡೆಯಲ್ಲಿ ಈ ಭಾಗದ ಅನೇಕ ಗ್ರಾಮಗಳ ಜನರು ಭಾಗಿಯಾಗಿ ಏಂಜಾಯ್ ಮಾಡಿದರು.