- Kannada News Photo gallery Here is a simple healthy juice recipe that actress Shraddha Kapoor drinks daily kannada news
Shraddha Kapoor: ನಟಿ ಶ್ರದ್ದಾ ಕಪೂರ್ ಪ್ರತಿದಿನದ ಆರೋಗ್ಯಕರ ಸಿಂಪಲ್ ಜ್ಯೂಸ್ ಇಲ್ಲಿದೆ
ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಬೆಳಗ್ಗಿನ ಆಹಾರ ಕ್ರಮಗಳ ಬಗ್ಗೆ ಹಂಚಿಕೊಂಡಿದ್ದಾರೆ. ಶ್ರದ್ದಾ ಬೆಳಗ್ಗೆ ಕುಡಿಯುವ ಆರೋಗ್ಯಕರ ಜ್ಯೂಸ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: Dec 08, 2022 | 3:50 PM

ನಟಿ ಶ್ರದ್ದಾ ಕಪೂರ್ ಬಾಲಿವುಡ್ನಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಬೆಳಗ್ಗಿನ ಆಹಾರ ಕ್ರಮಗಳ ಬಗ್ಗೆ ಹಂಚಿಕೊಂಡಿದ್ದಾರೆ. ಶ್ರದ್ದಾ ಬೆಳಗ್ಗೆ ಕುಡಿಯುವ ಆರೋಗ್ಯಕರ ಜ್ಯೂಸ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇವಲ ಎರಡೇ ತರಕಾರಿಯಿಂದ ತಯಾರಿಸುವ ಈ ಜ್ಯೂಸ್ ನನ್ನನ್ನು ದಿನ ಪೂರ್ತಿ ಶೂಟಿಂಗ್ ಮಧ್ಯದಲ್ಲೂ ಉಲ್ಲಾಸದಿಂದ ಇರುವಂತೆ ಮಾಡುತ್ತದೆ ಎಂದು ಇತ್ತೀಚಿಗಷ್ಟೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೌದು ಶ್ರದ್ದಾ ಕಪೂರ್ ಹಂಚಿಕೊಂಡಿರುವ ಜ್ಯೂಸ್ ಬೀಟ್ರೂಟ್, ಕ್ಯಾರೆಟ್ ಜ್ಯೂಸ್. ಕೇವಲ 2 ಬೀಟ್ರೂಟ್, 2 ಕ್ಯಾರೆಟ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಮೆಣಸಿನ ಹುಡಿಯಿಂದ ತಯಾರಿಸಲಾಗುತ್ತದೆ.

ಮಾಡುವ ವಿಧಾನ: ಬೀಟ್ರೂಟ್, ಕ್ಯಾರೆಟ್ ಅನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಜೊತೆಗೆ ಸ್ವಲ್ಪ ನೀರು ಹಾಕಿ, ಇದಕ್ಕೆ ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಮೆಣಸಿನ ಹುಡಿಯನ್ನು ಹಾಕಿ. ನಂತರ ಇದನ್ನು ಒಂದು ಗ್ಲಾಸಿಗೆ ಸೋಸಿಕೊಳ್ಳಿ.

ಬೀಟ್ರೂಟ್ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಇದು ನಿಮ್ಮ ದೇಹದ ತೂಕವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ.

ಕ್ಯಾರೆಟ್ ನಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ದವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ವಿಟಮಿನ್ ಬಿ6 ನ್ನು ಕೂಡ ಕ್ಯಾರೆಟ್ ಒಳಗೊಂಡಿದ್ದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.



















