
ಸಾರಾ ಅಣ್ಣಯ್ಯ ಅವರು ಬ್ಯಾಕ್ ಟು ಬ್ಯಾಕ್ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.

ಸಾರಾ ಅಣ್ಣಯ್ಯ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಸೈಕೋ ಪ್ರೇಮಿಯ ಪಾತ್ರ ಮಾಡಿದ್ದರು.

ಪ್ರೀತಿಗೋಸ್ಕರ ತನ್ನನ್ನೇ ತಾನು ಸಾಯಿಸಿಕೊಳ್ಳಲು ರೆಡಿ ಆಗುವಂಥ ಹುಡುಗಿಯ ಪಾತ್ರದಲ್ಲಿ ಸಾರಾ ಕಾಣಿಸಿಕೊಂಡಿದ್ದರು.

ಈಗ ‘ಅಮೃತಧಾರೆ’ ಧಾರಾವಾಹಿಯಲ್ಲೂ ಅವರಿಗೆ ಇದೇ ರೀತಿಯ ಪಾತ್ರ ಸಿಕ್ಕಿದೆ. ಸೈಕೋ ಪ್ರೇಮಿ ಪಾತ್ರದಲ್ಲಿ ಅವರು ಮಿಂಚುತ್ತಿದ್ದಾರೆ.

ಆದರೆ, ನಿಜ ಜೀವನದಲ್ಲಿ ಸಾರಾ ಅಣ್ಣಯ್ಯ ಸಖತ್ ಕೂಲ್. ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು, ಕೂಲ್ ಆದಂತಹ ಕ್ಯಾಪ್ಶನ್ ನೀಡುತ್ತಾ ಇರುತ್ತಾರೆ.

ಸಾರಾ ಸಮಯ ಸಿಕ್ಕಾಗಲೆಲ್ಲ ಸುತ್ತಾಟ ನಡೆಸುತ್ತಾರೆ. ಈ ಫೋಟೋಗಳನ್ನು ಅವರು ಫ್ಯಾನ್ಸ್ಗೋಸ್ಕರ ಅಪ್ಲೋಡ್ ಮಾಡುತ್ತಾರೆ.

ಸಾರಾಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.