Skin care: ಒತ್ತಡದಿಂದ ಮುಖ ಕಳೆಗುಂದಿದೆಯೇ? ಚರ್ಮದ ಆರೋಗ್ಯಕ್ಕೆ ಇಲ್ಲಿವೆ ಸಿಂಪಲ್ ಟಿಪ್ಸ್
TV9 Web | Updated By: shivaprasad.hs
Updated on:
Apr 10, 2022 | 9:02 AM
Stress on face: ಕೆಲಸದ ಹೊರೆ ಮತ್ತು ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ, ಹೆಚ್ಚಿನ ಜನರ ಮುಖದಲ್ಲಿ ಒತ್ತಡವು ಸದಾ ಇರುತ್ತದೆ. ಈ ಒತ್ತಡವನ್ನು ತೆಗೆದುಹಾಕಿ ಚರ್ಮವನ್ನು ಆರಾಮವಾಗಿರುವಂತೆ ಮಾಡಲು ನೀವು ಈ ಪದಾರ್ಥಗಳ ಸಹಾಯವನ್ನು ತೆಗೆದುಕೊಳ್ಳಬಹುದು. ಸೌತೇಕಾಯಿ ರಸ, ಗ್ರೀನ್ ಟೀ, ರೋಸ್ ವಾಟರ್, ಕಲ್ಲಂಗಡಿ ಮೊದಲಾದವುಗಳು ಚರ್ಮದ ತ್ವಚೆ ಚೆನ್ನಾಗಿಡಲು ಸಹಾಯ ಮಾಡುತ್ತವೆ.
1 / 5
ಸೌತೆಕಾಯಿ ರಸ: ಚರ್ಮದ ತ್ವಚೆಯನ್ನು ತಾಜಾವಾಗಿಡಲು ಸೌತೇಕಾಯಿ ಸಹಕಾರಿ. ಇದರ ವಿಶೇಷತೆ ಏನೆಂದರೆ, ಹಲವು ತ್ವಚೆಯ ಸಮಸ್ಯೆಗಳನ್ನು ಸೌತೇಕಾಯಿ ದೂರ ಮಾಡುತ್ತದೆ. ತುರಿದ ಸೌತೆಕಾಯಿಯ ರಸವನ್ನು ತೆಗೆದುಕೊಂಡು ಅದನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ ಮತ್ತು ಒಣಗಿದ ನಂತರ ತೊಳೆಯಿರಿ.
2 / 5
ಗ್ರೀನ್ ಟೀ: ತೂಕ ಇಳಿಕೆಗೆ ಸಹಕಾರಿಯಾಗಿರುವ ಗ್ರೀನ್ ಟೀ ತ್ವಚೆಯ ಆರೈಕೆಗೂ ಬಳಸಬಹುದು. ಹಸಿರು ಚಹಾದ ಟೋನರನ್ನು ತಯಾರಿಸಿ, ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ. ಇದರಿಂದ ಚರ್ಮ ಕಾಂತಿಯುತವಾಗಿರುತ್ತದೆ.
3 / 5
ರೋಸ್ ವಾಟರ್: ಅತ್ಯುತ್ತಮ ರೋಸ್ ವಾಟರ್ ತ್ವಚೆಯ ಆರೈಕೆಗೆ ಸಹಕಾರಿ. ಅದಕ್ಕಾಗಿಯೇ ಇದನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ.
4 / 5
ಕಲ್ಲಂಗಡಿ: ದೇಹವನ್ನು ತೇವಾಂಶದಿಂದ ಇಡುವ ಕಲ್ಲಂಗಡಿ, ತ್ವಚೆಯಲ್ಲಿ ತೇವಾಂಶವನ್ನು ಉಳಿಸಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣನ್ನು ಮ್ಯಾಶ್ ಮಾಡಿ ಅದರ ರಸವನ್ನು ತೆಗೆದು ಸ್ಪ್ರೇ ಸಹಾಯದಿಂದ ಮುಖಕ್ಕೆ ಹಚ್ಚಿ. ಕಲ್ಲಂಗಡಿಯಲ್ಲಿರುವ ಅಂಶಗಳು ತ್ವಚೆಯನ್ನು ಆರೋಗ್ಯಕರವಾಗಿಸುತ್ತದೆ.
5 / 5
ಮೊಸರು ಮತ್ತು ಸ್ಟ್ರಾಬೆರಿ: ಈ ಎರಡೂ ಪದಾರ್ಥಗಳು ಚರ್ಮದ ಆರೈಕೆಯಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇವುಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯು ಫ್ರೆಶ್ ಆಗಿರುತ್ತದೆ. ಒಂದು ಬಟ್ಟಲಿನಲ್ಲಿ ಎರಡರಿಂದ ಮೂರು ಸ್ಟ್ರಾಬೆರಿಗಳನ್ನು ಮ್ಯಾಶ್ ಮಾಡಿ ಮತ್ತು ಅದಕ್ಕೆ ಒಂದು ಚಮಚ ಮೊಸರು ಸೇರಿಸಿ. ಈ ಪೇಸ್ಟ್ ಒಣಗಿದಾಗ ಅದರಿಂದ ತಣ್ಣೀರಿನ ಮೂಲಕ ಮುಖವನ್ನು ತೊಳೆಯಿರಿ.