Health Tips: ದೇಹದ ಅತಿಯಾದ ತೂಕ ಇಳಿಸಲು ಈ ಆಹಾರವನ್ನು ಸೇವಿಸಿ
TV9 Web | Updated By: Pavitra Bhat Jigalemane
Updated on:
Jan 05, 2022 | 2:54 PM
ಹಲವರು ಆಹಾರವನ್ನು ಕಡಿಮೆ ಸೇವಿಸಿದರೆ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಬಹುದು ಎಂದುಕೊಳ್ಳುತ್ತಾರೆ. ಆದರೆ ನೆನಪಿಡಿ ನೀವು ಸೇವಿಸಿವು ಆಹಾರದಿಂದಲೇ ದೇಹದ ತೂಕವ್ನು, ಹೊಟ್ಟೆಯ ಬೊಜ್ಜನ್ನು ಇಳಿಸಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ.
1 / 6
ಮೊಟ್ಟೆಯಲ್ಲಿರುವ ವಿವಿಧ
ಪೋಷಕಾಂಶಗಳು ಕಡಿಮೆ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಹೀಗಾಗಿ ಮೊಟ್ಟೆ ಸೇವನೆ, ಹಸಿವನ್ನುನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
2 / 6
ಸೇಬು ಉತ್ಕರ್ಷಣ ನಿರೋಧಕಗಳು, ಖನಿಜಗಳು, ಫೈಬರ್ ಮತ್ತು ವಿಟಮಿನ್ಗಳನ್ನು ಹೊಂದಿರುತ್ತವೆ. ಸೇಬು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಪ್ರತಿದಿನ ಕನಿಷ್ಠ ಒಂದು ಸೇಬನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.
3 / 6
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಮತ್ತು ಫೈಟೊಕೆಮಿಕಲ್ಸ್ ಸಮೃದ್ಧವಾಗಿದೆ. ಕಬ್ಬಿಣದ ಕೊರತೆಯಿಂದ ಬಳಲುತ್ತಿರುವವರು ಪಾಲಕ್ ಸೊಪ್ಪಿನ ಸೇವನೆ ಉತ್ತಮ. ಅಲ್ಲದೆ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಹೊರಹಾಕಲು ಪಾಲಕ್ ಸೊಪ್ಪು ಸಹಾಯ ಮಾಡುತ್ತದೆ.
4 / 6
ಗ್ರೀನ್ ಟೀ ದೇಹವನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. ಜತೆಗೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಗ್ರೀನ್ ಟೀ ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳಲ್ಲಿ ಸಾಬೀತಾಗಿದೆ.
5 / 6
ಮೊಳಕೆ ಕಾಳುಗಳು ಬೆಳಗ್ಗಿನ ಉಪಹಾರಕ್ಕೆ ಉತ್ತಮ ಆಹಾರವಾಗಿದೆ. ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಮೊಳಕೆಕಾಳುಗಳು ಸಹಾಯ ಮಾಡುತ್ತದೆ.
6 / 6
ಹಣ್ಣುಗಳು ದೇಹದಲ್ಲಿನ ನೀರಿನ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಜತೆಗೆ ಹಣ್ಣುಗಳಲ್ಲಿರುವ ಫೈಬರ್ ಅಂಶವು ನಿಮ್ಮ ಹಸಿವನ್ನು ನಿಯಂತ್ರಿಸಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ.