ಈ ವಾರ ತೆರೆಗೆ ಬರುತ್ತಿವೆ ಹಲವು ಸಿನಿಮಾಗಳು, ಇಲ್ಲಿದೆ ಪಟ್ಟಿ

Updated on: Nov 20, 2025 | 5:43 PM

Friday release: ಪ್ರತಿ ಬಾರಿಯಂತೆ ಮತ್ತೊಂದು ಶುಕ್ರವಾರ ಬಂದಿದೆ. ಚಿತ್ರ ತಂಡಗಳು ತಿಂಗಳಾನುಗಟ್ಟಲೆ ಕಷ್ಟಪಟ್ಟು, ಕನಸುಗಳ ಹೊತ್ತು ನಿರ್ಮಿಸಿದ ಸಿನಿಮಾಗಳು ತೆರೆಗೆ ಬರುವ ವಾರ ಶುಕ್ರವಾರ. ಈ ವಾರವೂ ಸಹ ಪ್ರತಿ ಬಾರಿಯಂತೆ ಕೆಲವು ಹೊಸ ಸಿನಿಮಾಗಳು ಚಿತ್ರಮಂದಿರಗಳಿಗೆ ಬಂದಿವೆ. ಈ ವಾರ ಬಿಡುಗಡೆ ಆದ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ...

1 / 5
ಹೆಸರಿಗೆ ತಕ್ಕಂತೆ ಹಾಸ್ಯಮಯ ಪ್ರೇಮಕತೆಯನ್ನು ಒಳಗೊಂಡಿರುವ ‘ಫುಲ್ ಮೀಲ್ಸ್’ ಕನ್ನಡ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ಖುಷಿ ರವಿ, ತೇಜಸ್ವಿನಿ ಶರ್ಮಾ ನಾಯಕಿಯರು. ಲಿಖಿತ್ ಶೆಟ್ಟಿ ನಾಯಕ. ಇವರ ಜೊತೆಗೆ ರಂಗಾಯಣ ರಘು, ರಾಜೇಶ್ ನಟರಂಗ, ವಿಜಯ್ ಚೆಂಡೂರು ಅವರುಗಳು ನಟಿಸಿದ್ದಾರೆ. ಎನ್ ವಿನಾಯಕ ಈ ಸಿನಿಮಾದ ನಿರ್ದೇಶಕ. ನಾಯಕ ಲಿಖಿತ್ ಶೆಟ್ಟಿ ನಿರ್ಮಾಣವನ್ನೂ ಮಾಡಿದ್ದಾರೆ.

2 / 5
ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ‘ಮಾರುತ’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ಶ್ರೇಯಸ್ ಮಂಜು ಜೊತೆಗೆ ದುನಿಯಾ ವಿಜಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ರವಿಚಂದ್ರನ್ ಸಹ ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಬೃಂದಾ ಆಚಾರ್ಯ ಮತ್ತು ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಎಸ್ ನಾರಾಯಣ್, ಈ ಸಿನಿಮಾ ನಿರ್ದೇಶಿಸಿದ್ದಾರೆ.

3 / 5
ಅಜಯ್ ರಾವ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಥ್ರಿಲ್ಲರ್ ಸಿನಿಮಾ ‘ರಾಧೆಯಾ’ ನಾಳೆ (ನವೆಂಬರ್ 22) ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಸೋನಲ್ ಮೊಂಟೇರೊ ನಾಯಕಿ. ಧನ್ಯಾ ಬಾಲಕೃಷ್ಣ ಸಹ ಸಿನಿಮಾನಲ್ಲಿ ನಟಿಸಿದ್ದಾರೆ. ವೇದ ಗುರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಗಮನ ಸೆಳೆದಿದೆ.

4 / 5
ಕ್ರೈಂ ಥ್ರಿಲ್ಲರ್ ಕತೆಯನ್ನು ಒಳಗೊಂಡ ‘ಟಾಸ್ಕ್’ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ. ಸಿನಿಮಾ ಅನ್ನು ರಘು ಶಿವಮೊಗ್ಗ ನಿರ್ದೇಶನ ಮಾಡಿದ್ದಾರೆ. ಜಯ ಸೂರ್ಯ ಆಜಾದ್, ಸಾಗರ್ ರಾಮ್, ಅಚ್ಯುತ್ ಕುಮಾರ್, ಸಂಗೀತಾ ಭಟ್, ಬಾಲಾಜಿ ಮನೋಹರ್ ಇನ್ನೂ ಕೆಲವು ಪ್ರತಿಭಾವಂತ ನಟರು ಈ ಸಿನಿಮಾದ ಭಾಗವಾಗಿದ್ದಾರೆ.

5 / 5
ಹಾಸ್ಯಮಿಶ್ರಿತ ಪ್ರೇಮಕತೆ ಹೊಂದಿರುವ ‘ಕಂಗ್ರಾಜುಲೇಷನ್ ಬ್ರದರ್’ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ರಕ್ಷಿತ್ ನಾಗ್ ಈ ಸಿನಿಮಾದ ನಾಯಕ. ಸಂಜನಾ ದಾಸ್ ಮತ್ತು ಅನುಷಾ ಎ ನಾಯಕಿ. ಖ್ಯಾತ ನಟ ಶಶಿಕುಮಾರ್ ಅವರು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಾಪ್ ಗಂಧರ್ವ ಈ ಸಿನಿಮಾದ ನಿರ್ದೇಶಕ.