‘ಕಾಫಿ ವಿತ್ ಕರಣ್ ಸೀಸನ್ 7’ ಜುಲೈ 7ರಿಂದ ಆರಂಭ ಆಗುತ್ತಿದೆ. ಈ ಬಾರಿ ಡಿಸ್ನಿ+ ಸ್ಟಾರ್ನಲ್ಲಿ ಈ ಶೋ ಪ್ರಸಾರ ಆಗಲಿದೆ. ಕರಣ್ ಜೋಹರ್ ಅವರು ಈ ಶೋ ನಡೆಸಿಕೊಡಲಿದ್ದಾರೆ. ಈ ಬಾರಿ ಯಾವ ಸೆಲೆಬ್ರಿಟಿಗಳು ಬರಲಿದ್ದಾರೆ ಎಂಬ ಪ್ರಶ್ನೆಗೆ ಹೊಸ ಪ್ರೋಮೋದಿಂದ ಉತ್ತರ ಸಿಕ್ಕಿದೆ.
ಅಕ್ಷಯ್ ಕುಮಾರ್ ಹಾಗೂ ಸಮಂತಾ ಇಬ್ಬರೂ ಒಟ್ಟಾಗಿ ಆಗಮಿಸಲಿದ್ದಾರೆ. ಅಕ್ಷಯ್ ಬಾಲಿವುಡ್ನಲ್ಲಿ ಹೆಸರು ಮಾಡಿದರೆ ಸಮಂತಾ ಟಾಲಿವುಡ್ನಲ್ಲಿ ಸದ್ದು ಮಾಡುತ್ತಿದ್ದಾರೆ. ಸಮಂತಾ ಅವರು ಈ ಕಾರ್ಯಕ್ರಮದಲ್ಲಿ ವಿಚ್ಛೇದನದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅನಿಲ್ ಕಪೂರ್ ಹಾಗೂ ವರುಣ್ ಧವನ್ ಈ ಶೋಗೆ ಒಟ್ಟಾಗಿ ಆಗಮಿಸಲಿದ್ದಾರೆ. ಪ್ರೋಮೋದಲ್ಲಿ ಇವರ ಸಂಭಾಷಣೆ ಹೈಲೈಟ್ ಆಗಿದೆ.
ಸಾರಾ ಅಲಿ ಖಾನ್ ಹಾಗೂ ಜಾನ್ವಿ ಕಪೂರ್ ಇಬ್ಬರ ನಡುವೆ ಗೆಳೆತನ ಇದೆ. ‘ಕಾಫಿ ವಿತ್ ಕರಣ್’ ಶೋನಲ್ಲಿ ಇವರ ಜುಗಲ್ಬಂಧಿ ಹೈಲೈಟ್ ಆಗಿದೆ.
ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಅವರ ನಡುವೆ ಒಳ್ಳೆಯ ಗೆಳೆತನ ಇದೆ. ಇವರಿಬ್ಬರು ‘ಕಾಫಿ ವಿತ್ ಕರಣ್ ಶೋ’ಗೆ ಒಟ್ಟಾಗಿ ಬರಲಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ‘ಲೈಗರ್’ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಈ ಶೋನಲ್ಲಿ ಯಾವ ರೀತಿಯ ವಿಚಾರ ಹಂಚಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕಿಯಾರಾ-ವರುಣ್