ಈ ವಾರ ಒಟಿಟಿಗೆ ಬಂದಿವೆ ಕುತೂಹಲಕಾರಿ ಸಿನಿಮಾಗಳು, ಪಟ್ಟಿ ಇಲ್ಲಿದೆ

Updated on: Jul 04, 2026 | 3:27 PM

OTT Release this week: ಪ್ರತಿ ವಾರದಂತೆ ಈ ವಾರವೂ ಒಟಿಟಿಗೆ ಕೆಲವು ಆಸಕ್ತಿಕರ ಸಿನಿಮಾ ಮತ್ತು ವೆಬ್ ಸರಣಿಗಳು ಬಂದಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಕೆಲ ಸಿನಿಮಾಗಳು ಸಹ ಈ ವಾರ ಒಟಿಟಿಗೆ ಬಂದಿರುವುದು ವಿಶೇಷ. ಜೊತೆಗೆ ಹಾರರ್, ಥ್ರಿಲ್ಲರ್, ಕಾಮಿಡಿ, ಆಕ್ಷನ್ ಹೀಗೆ ಹಲವು ಜಾನರ್​​ನ ಹೊಸ ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ ಬಂದಿವೆ. ಇಲ್ಲಿದೆ ನೋಡಿ ಪಟ್ಟಿ...

1 / 5
‘ಮುತ್ತಸ್ಸಿ’ ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿನ ಕಾಡು ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಆಧರಿಸಿದ ವೆಬ್ ಸರಣಿ ‘ಮುತ್ತಸ್ಸಿ’ ಮಲಯಾಳಂ ಭಾಷೆಯ ವೆಬ್ ಸರಣಿಯಾದರೂ ತುಳು ಭಾಷೆ, ಕನ್ನಡದ ಬಳಕೆಯೂ ಸಾಕಷ್ಟಿದೆ. ಸೂಪರ್ ನ್ಯಾಚುರಲ್ ಕತೆಯನ್ನು ಒಳಗೊಂಡಿರುವ ಈ ವೆಬ್ ಸರಣಿ ಇದೀಗ ಜೀ5ನಲ್ಲಿ ಬಿಡುಗಡೆ ಆಗಿದೆ.

‘ಮುತ್ತಸ್ಸಿ’ ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿನ ಕಾಡು ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಆಧರಿಸಿದ ವೆಬ್ ಸರಣಿ ‘ಮುತ್ತಸ್ಸಿ’ ಮಲಯಾಳಂ ಭಾಷೆಯ ವೆಬ್ ಸರಣಿಯಾದರೂ ತುಳು ಭಾಷೆ, ಕನ್ನಡದ ಬಳಕೆಯೂ ಸಾಕಷ್ಟಿದೆ. ಸೂಪರ್ ನ್ಯಾಚುರಲ್ ಕತೆಯನ್ನು ಒಳಗೊಂಡಿರುವ ಈ ವೆಬ್ ಸರಣಿ ಇದೀಗ ಜೀ5ನಲ್ಲಿ ಬಿಡುಗಡೆ ಆಗಿದೆ.

2 / 5

ನಸ್ಲಿನ್ ಗಫೂರ್ ನಟಿಸಿರುವ ಮಲಯಾಳಂ ಸಿನಿಮಾ ‘ಮಾಲಿವುಡ್ ಟೈಮ್ಸ್’ ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಕಂಡಿತ್ತು. ಸಿನಿಮಾದ ವಿಮರ್ಶಕರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

3 / 5

ವಿಶ್ವ ವಿಖ್ಯಾತ ‘ಗೇಮ್ ಆಫ್ ಥ್ರೋನ್ಸ್’ ವೆಬ್ ಸರಣಿಯ ಪ್ರೀಕ್ವೆಲ್ ಆಗಿರುವ ‘ಹೌಸ್ ಆಫ್ ದಿ ಡ್ರ್ಯಾಗನ್’ನ ಮೂರನೇ ಸೀಸನ್​​ನ ಮೂರನೇ ಎಪಿಸೋಡ್ ಇದೇ ಭಾನುವಾರ ಬಿಡುಗಡೆ ಆಗಲಿದೆ. ಈ ವೆಬ್ ಸರಣಿಯನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

4 / 5

‘3 ಇಡಿಯಟ್ಸ್’, ‘ಪಿಕೆ’, ‘ಮುನ್ನಾಭಾಯಿ’, ‘ಲಗೆ ರಹೊ ಮುನ್ನಾಭಾಯಿ’ ಅಂಥಹಾ ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ ಮೊದಲ ವೆಬ್ ಸರಣಿ ‘ಪ್ರೀತಂ ಆಂಡ್ ಪೆದ್ರೊ’ ಈ ವಾರ ಒಟಿಟಿಗೆ ಬಂದಿದೆ. ಅರ್ಷದ್ ವಾರ್ಸಿ, ವಿಕ್ರಾಂತ್ ಮಾಸ್ಸಿ ಇನ್ನೂ ಕೆಲವರು ನಟಿಸಿರುವ ಈ ವೆಬ್ ಸರಣಿಯನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

5 / 5

ಮಲಯಾಳಂ ಚಿತ್ರರಂಗ ಹಾರರ್, ಥ್ರಿಲ್ಲರ್ ಸಿನಿಮಾಗಳನ್ನು ಅದ್ಭುತವಾಗಿ ತೆರೆಗೆ ತರುತ್ತಾರೆ. ಇದೀಗ ‘ಕರಕ್ಕಂ’ ಹೆಸರಿನ ಹಾರರ್ ಸಿನಿಮಾ ಒಟಿಟಿಗೆ ಬಂದಿದೆ. ಮಲಯಾಳಂನ ಈ ಸಿನಿಮಾ ಹಾರರ್ ಜೊತೆಗೆ ಹಾಸ್ಯವನ್ನೂ ಸಹ ಒಳಗೊಂಡಿದೆ. ಸಿನಿಮಾವನ್ನು ಸೋನಿ ಲಿವ್​​ನಲ್ಲಿ ವೀಕ್ಷಿಸಬಹುದಾಗಿದೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us