Hero NYX HX: 210 ಕಿ.ಮೀ ಮೈಲೇಜ್ ನೀಡುವ ಸ್ಕೂಟರ್ ಪರಿಚಯಿಸಿದ ಹೀರೋ

Hero NYX HX electric scooter price: ಈ ಸ್ಕೂಟರ್​ನಲ್ಲಿ ಸ್ಮಾರ್ಟ್‌ಫೋನ್ ಸಂಪರ್ಕ, ಬ್ಲೂಟೂತ್ ಇಂಟರ್‌ಫೇಸ್‌ನಿಂದ ಟಾಪ್-ಆಫ್-ಲೈನ್ ರಿಮೋಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Dec 26, 2021 | 9:30 PM

ಒಂದೆಡೆ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದರೆ ಮತ್ತೊಂದೆಡೆ ಪ್ರಮುಖ ದ್ವಿಚಕ್ರ ವಾಹನ ಕಂಪೆನಿಗಳು ಎಲೆಕ್ಟ್ರಿಕ್ ಸ್ಕೂಟರ್​ಗಳನ್ನು ಬಿಡುಗಡೆ ಮಾಡುತ್ತಿದೆ. ಅದರಲ್ಲೂ ಇದೀಗ ಹೀರೋ ಕಂಪೆನಿ  NYX HX ಹೆಸರಿನ ಮತ್ತೊಂದು ಎಲೆಕ್ಟ್ರಿಕ್​ ಸ್ಕೂಟರ್​ ಅನ್ನು ಪರಿಚಯಿಸಿದೆ.

1 / 5
ಹೀರೋ Nyx-HX ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಲವು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಇದನ್ನು ಕಮರ್ಷಿಯಲ್ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬಳಸಿಕೊಳ್ಳಬಹುದು. ಏಕೆಂದರೆ ಬಳಕೆದಾರರು ತಮ್ಮ ವ್ಯಾಪಾರ ಅಗತ್ಯಗಳಿಗೆ ಅನುಗುಣವಾಗಿ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮೈಸ್ ಮಾಡಬಹುದು ಎಂದು ಹೀರೋ ಎಲೆಕ್ಟ್ರಿಕ್ ಹೇಳಿದೆ. ಸ್ಕೂಟರ್ ಅನ್ನು ಕಸ್ಟಮೈಸ್ ಮಾಡಲು ಐಸ್ ಬಾಕ್ಸ್ ಮತ್ತು ಸ್ಪ್ಲಿಟ್ ಸೀಟ್‌ಗಳಂತಹ ಹಲವು ಆಯ್ಕೆಗಳನ್ನು ನೀಡಲಾಗಿದೆ.

2 / 5
ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ 600/1300-ವ್ಯಾಟ್ ಮೋಟಾರ್‌ ನೀಡಲಾಗಿದ್ದು,  ಇದನ್ನು 51.2W/30Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಳಿಗೆ ಜೋಡಿಸಲಾಗಿದೆ. ಹಾಗೆಯೇ ಈ ಸ್ಕೂಟರ್​ನಲ್ಲಿ ಸ್ಮಾರ್ಟ್‌ಫೋನ್ ಸಂಪರ್ಕ, ಬ್ಲೂಟೂತ್ ಇಂಟರ್‌ಫೇಸ್‌ನಿಂದ ಟಾಪ್-ಆಫ್-ಲೈನ್ ರಿಮೋಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

3 / 5
ಹೀರೋ ಎಲೆಕ್ಟ್ರಿಕ್ NYX HX ಸ್ಕೂಟರ್​ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 210 ಕಿ.ಮೀ ವರೆಗೆ ಪ್ರಯಾಣಿಸಬಹುದು ಎಂದು ಹೀರೋ ಕಂಪೆನಿ ತಿಳಿಸಿದೆ. ಹೀಗಾಗಿ ಈ ಸ್ಕೂಟರ್ ಕರ್ಮಷಿಯಲ್ ಸ್ಕೂಟರ್ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆಯಿದೆ.

4 / 5
ಹೀರೋ ಕಂಪೆನಿಯು  NYX HX ಎಲೆಕ್ಟ್ರಿಕ್ ಸ್ಕೂಟರ್ ಅನ್ನು LI, LI ER ಮತ್ತು HS500 ER ಎಂಬ ಮೂರು ರೂಪಾಂತರಗಳಲ್ಲಿ ಮಾಡಿದೆ. ಅಂದಹಾಗೆ ಈ ಸ್ಕೂಟರ್​ ಅನ್ನು 63,900 ರಿಂದ  79,900 ರೂ. ಒಳಗೆ ಖರೀದಿಸಬಹುದು.

5 / 5
Follow us