Updated on: Oct 01, 2022 | 4:56 PM
‘ಬಿಗ್ ಬಾಸ್ ಹಿಂದಿ ಸೀಸನ್ 16’ ಇಂದಿನಿಂದ (ಅಕ್ಟೋಬರ್ 1) ಆರಂಭ ಆಗಲಿದೆ. ನಟ ಸಲ್ಮಾನ್ ಖಾನ್ ಅವರು ಎಂದಿನ ಜೋಶ್ನಲ್ಲಿ ಬಿಗ್ ಬಾಸ್ ನಡೆಸಿಕೊಡಲಿದ್ದಾರೆ.
ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆದಾಗಲೂ ಮನೆಯಲ್ಲಿ ಒಂದಷ್ಟು ಬದಲಾವಣೆ ಮಾಡಲಾಗುತ್ತದೆ. ಅದೇ ರೀತಿ ಹಿಂದಿ ಬಿಗ್ ಬಾಸ್ನಲ್ಲಿ ಮನೆಯಲ್ಲಿ ಈ ಬಾರಿ ಸಾಕಷ್ಟು ಚೇಂಜಸ್ ಮಾಡಲಾಗಿದೆ.
ಬಿಗ್ ಬಾಸ್ ಮನೆ ಸಾಕಷ್ಟು ಐಷಾರಾಮಿಯಾಗಿದೆ. ಈ ಮನೆಯನ್ನು ನೋಡಿ ವೀಕ್ಷಕರು ಸಖತ್ ಖುಷಿಪಟ್ಟಿದ್ದಾರೆ.
ಇಂದು ಎಲ್ಲಾ ಸ್ಪರ್ಧಿಗಳನ್ನು ಸಲ್ಮಾನ್ ಖಾನ್ ಸ್ವಾಗತಿಸಲಿದ್ದಾರೆ. 16-18 ಸ್ಪರ್ಧಿಗಳು ದೊಡ್ಮನೆ ಒಳಗೆ ಸೇರುವ ನಿರೀಕ್ಷೆ ಇದೆ.
ಈ ಬಾರಿ ಯಾವ ಸ್ಪರ್ಧಿಗಳು ದೊಡ್ಮನೆ ಒಳಗೆ ಎಂಟ್ರಿ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಬಾರಿ ಆಟದ ಸ್ವರೂಪದಲ್ಲಿ ಬದಲಾವಣೆ ಇರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.