- Kannada News Photo gallery Mirabai Chanu Wins Gold Medal in Womens 49kg Weightlifting Event at National Games 2022
National Games 2022: ಚಿನ್ನ ಗೆದ್ದ ಮೀರಾಬಾಯಿ ಚಾನು..! ಪದಕ ಗೆದ್ದವರ ಪಟ್ಟಿ ಹೀಗಿದೆ
National Games 2022: ವೇಟ್ ಲಿಫ್ಟಿಂಗ್ನ 49 ಕೆಜಿ ವಿಭಾಗದಲ್ಲಿ ಮಣಿಪುರದ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದರೆ, ಪುರುಷರ 61 ಕೆಜಿ ವಿಭಾಗದಲ್ಲಿ ಅರುಣಾಚಲ ಪ್ರದೇಶದ ಚಾರು ಪೆಸಿ ಚಿನ್ನದ ಪದಕ ಗೆದ್ದರು.
Updated on: Sep 30, 2022 | 7:32 PM

ಗುಜರಾತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಹಿಳೆಯರು ಎಂದಿನಂತೆ ತಮ್ಮ ಪರಾಕ್ರಮ ತೊರಿದ್ದಾರೆ. ಶುಕ್ರವಾರ ನಡೆದ ವೇಟ್‌ಲಿಫ್ಟಿಂಗ್‌ನಿಂದ ರೇಸ್ ವಾಕ್‌ವರೆಗೆ ಭಾರತದ ಮಹಿಳಾ ಆಟಗಾರ್ತಿಯರು ಅದ್ಭುತ ಪ್ರದರ್ಶನ ನೀಡಿದ್ದರು.

20 ಕಿ.ಮೀ. ವೇಗದ ನಡಿಗೆಯಲ್ಲಿ ಉತ್ತರ ಪ್ರದೇಶದ ಮುನಿತಾ ಪ್ರಜಾಪತಿ ಚಿನ್ನದ ಪದಕ ಪಡೆದರು. ಈ ಅಥ್ಲೀಟ್‌ನ ತಂದೆ ದಿನಗೂಲಿ ನೌಕರರಾಗಿದ್ದು, ಈ ಎಲ್ಲಾ ಕಷ್ಟಗಳ ನಡುವೆಯೂ ಈ ಯುವ ಕ್ರೀಡಾಪಟು ಚಿನ್ನದ ಪದಕವನ್ನು ಗೆದ್ದಿದ್ದಾರೆ. 20 ಕಿ.ಮೀ. ರೇಸ್ ವಾಕ್ ಪುರುಷರ ವಿಭಾಗದಲ್ಲಿ ಸರ್ವಿಸಸ್ನ ದೇವೇಂದ್ರ ಸಿಂಗ್ ಚಿನ್ನ ಗೆದ್ದರು.

ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಮಹಾರಾಷ್ಟ್ರದ ರುದ್ರಾಕ್ಷಿ ಪಾಟೀಲ್ ಚಿನ್ನದ ಪದಕ ಗೆದ್ದರು. ಅದೇ ಸಮಯದಲ್ಲಿ, ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ಎನ್‌ವಾನಿಲ್ ವಲರಿವನ್ ಗುಜರಾತ್‌ಗೆ ಚಿನ್ನದ ಪದಕ ಗೆದ್ದರು.

ವೇಟ್ ಲಿಫ್ಟಿಂಗ್ನ 49 ಕೆಜಿ ವಿಭಾಗದಲ್ಲಿ ಮಣಿಪುರದ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ 61 ಕೆಜಿ ವಿಭಾಗದಲ್ಲಿ ಅರುಣಾಚಲ ಪ್ರದೇಶದ ಚಾರು ಪೆಸಿ ಚಿನ್ನದ ಪದಕ ಗೆದ್ದರು.

ರಾಷ್ಟ್ರೀಯ ಕ್ರೀಡಾಕೂಟದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ 7000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಗುಜರಾತ್‌ನ 6 ನಗರಗಳಲ್ಲಿ ಈ ಆಟಗಳನ್ನು ಆಯೋಜಿಸಲಾಗುತ್ತಿದೆ. ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರಾ, ರಾಜ್‌ಕೋಟ್ ಮತ್ತು ಭಾವನಗರದಲ್ಲಿ ರಾಷ್ಟ್ರೀಯ ಕ್ರೀಡಾಕೂಟಗಳು ನಡೆಯುತ್ತಿವೆ.
























