Kannada News Photo gallery How To Bounce Back After Getting Laid Off? Things To Keep In Mind latest news on Industry layoffs and business in Kannada
Layoffs: ಉದ್ಯೋಗದಿಂದ ವಜಾ; ಚಿಂತೆ ಬೇಡ, ಈ ವಿಷಯಗಳು ನಿಮಗೆ ತಿಳಿದಿರಲಿ
ಜಾಗತಿಕ ಆರ್ಥಿಕ ಅನಿಶ್ಚಿತತೆ, ನಷ್ಟ, ಆದಾಯ ಕುಸಿತ ಮತ್ತಿತರ ಕಾರಣಗಳಿಂದಾಗಿ ದಿಗ್ಗಜ ಐಟಿ ಕಂಪನಿಗಳೂ ಸೇರಿದಂತೆ ಅನೇಕ ಕಂಪನಿಗಳು ಉದ್ಯೋಗ ಕಡಿತದ ಮೊರೆ ಹೋಗುತ್ತಿವೆ. ಮೆಟಾ, ಟ್ವಿಟರ್, ಅಮೆಜಾನ್, ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಕಂಪನಿಗಳು ಈಗಾಗಲೇ ಹೆಚ್ಚಿನ ಸಂಖ್ಯೆಯ ಉದ್ಯೋಗ ಕಡಿತ ಮಾಡಿವೆ.
Tech Layoffs continued Meta signal another round of job cuts
1 / 7
How To Bounce Back After Getting Laid Off? Things To Keep In Mind latest news on Industry layoffs and business in Kannada
2 / 7
ನಿಮ್ಮ ಸಾಧನೆಗಳ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಿ. ಉದ್ಯೋಗ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನೀವು ಗಳಿಸಿದ ಜ್ಞಾನ, ಅನುಭವ ಎಂದಿಗೂ ನಾಶವಾಗದು. ಹೊಸ ಉದ್ಯೋಗ ಹುಡುಕುವ ಮುನ್ನ ನಿಮ್ಮ ವೃತ್ತಿಯಲ್ಲಿ ನೀವು ಏನು ಸಾಧಿಸಿದ್ದೀರಿ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅದನ್ನು ಒಂದು ಕಡೆ ಟಿಪ್ಪಣಿ ಮಾಡಿಕೊಳ್ಳಿ. ಇದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ. ಮುಂದಿನ ಸಂದರ್ಶನಗಳಿಗೆ ನಿಮ್ಮನ್ನು ಸಜ್ಜುಗೊಳಿಸಲಿದೆ.
3 / 7
ನಿಮ್ಮ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳಿ. ಒಮ್ಮೆ ವಜಾಗೊಂಡರೆ, ತಕ್ಷಣವೇ ಮತ್ತೊಂದು ಉದ್ಯೋಗ ಹುಡುಕಿಕೊಳ್ಳಬೇಕಾಗುತ್ತದೆ. ಮರಳಿ ಬೇರೆ ಕಂಪನಿಯಲ್ಲಿ ಕೆಲಸ ಹುಡುಕುವುದು ಅನಿವಾರ್ಯವೇ ಅಥವಾ ಹೊಸ ಉದ್ದಿಮೆಯಲ್ಲಿ ತೊಡಗಿಕೊಳ್ಳಬಹುದೇ ಎಂಬ ಬಗ್ಗೆ ಯೋಚಿಸಿ. ನಿಮ್ಮ ಅಗತ್ಯತೆಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಿ.
4 / 7
ಉದ್ಯೋಗ ನಷ್ಟ ಮತ್ತು ನಿಮ್ಮ ಸಾಮರ್ಥ್ಯದ ಮಧ್ಯೆ ಯಾವುದೇ ಸಂಬಂಧ ಇಲ್ಲದಿದ್ದರೂ, ಯಾವಾಗಲೂ ನೀವು ಕೆಲಸ ಮಾಡುವ ಕಡೆ ನಿಮ್ಮ ಅನಿವಾರ್ಯತೆಯನ್ನು ಸಾಬೀತುಪಡಿಸಲು ಪ್ರಯತ್ನಿಸಬೇಕು. ಬೇರೆ ಉದ್ಯೋಗ ಅರಸುವ ಮುನ್ನ ಈ ನಿಟ್ಟಿನಲ್ಲಿ ನಿಮ್ಮ ಕೌಶಲವನ್ನು ವೃದ್ಧಿಸಿಕೊಳ್ಳುವುದರತ್ತ ಗಮನಕೊಡಿ.
5 / 7
ಸಕಾರಾತ್ಮಕ ಚಿಂತನೆ ನಿಮ್ಮಲ್ಲಿರಲಿ. ಧನಾತ್ಮಕ ಧೋರಣೆಯೊಂದಿಗೆ ಹೊಸ ಉದ್ಯೋಗದ ಸಂದರ್ಶನಕ್ಕೆ ಸಿದ್ಧರಾಗಿ. ಅಥವಾ ಉದ್ಯೋಗ ಕ್ಷೇತ್ರದಿಂದ ತುಸು ಬಿಡುವು ಪಡೆದುಕೊಂಡು ಕುಟುಂಬದ ಜತೆ ಸಮಯ ಕಳೆಯಬೇಕೆಂಬ ಇಚ್ಛೆ ಹೊಂದಿದ್ದರೆ ಅದಕ್ಕೆ ಮೊದಲು ಆದ್ಯತೆ ಕೊಡಿ.
6 / 7
ನಿಮ್ಮ ಹಳೆಯ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ನಿಮ್ಮ ಸಂಪರ್ಕದಲ್ಲಿರುವವರ ನೆರವು ಪಡೆದು ಹೊಸ ಉದ್ಯೋಗ ಅರಸುವ ಕಾರ್ಯಕ್ಕೆ ಅಣಿಯಾಗಿ. ಬೇರೊಂದು ಉದ್ಯೋಗ ಪಡೆಯುವುದಕ್ಕಾಗಿ ನಿಮ್ಮ ಮಾಜಿ ಬಾಸ್ಗಳನ್ನು ಸಂಪರ್ಕಿಸಲು ಹಿಂಜರಿಕೆ ಮಾಡಬೇಡಿ.