ಟಿಪ್ಪು ಸುಲ್ತಾನ್ ನಿರ್ಮಿಸಿದ ನಕ್ಷಾತ್ರಾಕಾರದ ಕೋಟೆ ಎಲ್ಲಿದೆ? ತಲುಪುವುದು ಹೇಗೆ?
ಹಾಸನದ ಸಕಲೇಶಪುರ ಬಳಿ ಇರುವ ದೇಶದ ವಿಶಿಷ್ಟ ಕೋಟೆಗಳಲ್ಲಿ ಒಂದಾದ ಮಂಜರಾಬಾದ್ ಕೋಟೆ ವಿಶಿಷ್ಟ ರೀತಿಯ ವಾಸ್ತು ಶಿಲ್ಪವನ್ನು ಹೊಂದಿದೆ. ಇದು ನೋಡಲು ನಕ್ಷತ್ರಾಕಾರದ ಕೋಟೆಯಾಗಿದ್ದು ಎಂಟು ಗೋಡೆಗಳನ್ನು ಹೊಂದಿರುವ ಅಷ್ಟಭುಜಾಕೃತಿಯ ವಿನ್ಯಾಸವನ್ನು ಹೊಂದಿದೆ. ಸಾಕಷ್ಟು ಪ್ರವಾಸಿಗರು ಈ ಕೋಟೆಯನ್ನು ನೋಡಲು ಭೇಟಿ ನೀಡುತ್ತಾರೆ. ಇದು ಸಕಲೇಶಪುರದಲ್ಲಿ ನೋಡಲೇ ಬೇಕಾದ ಪ್ರಮುಖ ಪ್ರವಾಸಿ ತಾಣದಲ್ಲೊಂದು.
Updated on:Aug 21, 2022 | 10:39 PM

ಹಾಸನದ ಸಕಲೇಶಪುರ ಬಳಿ ಇರುವ ದೇಶದ ವಿಶಿಷ್ಟ ಕೋಟೆಗಳಲ್ಲಿ ಒಂದಾದ ಮಂಜರಾಬಾದ್ ಕೋಟೆ ವಿಶಿಷ್ಟ ರೀತಿಯ ವಾಸ್ತು ಶಿಲ್ಪವನ್ನು ಹೊಂದಿದೆ. ಇದು ನೋಡಲು ನಕ್ಷತ್ರಾಕಾರದ ಕೋಟೆಯಾಗಿದ್ದು ಎಂಟು ಗೋಡೆಗಳನ್ನು ಹೊಂದಿರುವ ಅಷ್ಟಭುಜಾಕೃತಿಯ ವಿನ್ಯಾಸವನ್ನು ಹೊಂದಿದೆ. ಸಾಕಷ್ಟು ಪ್ರವಾಸಿಗರು ಈ ಕೋಟೆಯನ್ನು ನೋಡಲು ಭೇಟಿ ನೀಡುತ್ತಾರೆ. ಇದು ಸಕಲೇಶಪುರದಲ್ಲಿ ನೋಡಲೇ ಬೇಕಾದ ಪ್ರಮುಖ ಪ್ರವಾಸಿ ತಾಣದಲ್ಲೊಂದು.

ಹಾಸನ ಜಿಲ್ಲೆಯ ಸಕಲೇಶಪುರದಿಂದ ಸುಮಾರು ಹತ್ತು ಕಿ.ಮೀ ಗಳಷ್ಟು ದೂರದಲ್ಲಿರುವ ಮಂಜರಾಬಾದ್ ಕೋಟೆ ಭಾರತದಲ್ಲೆ ವಿಶಿಷ್ಟವಾಗಿ ವಿನ್ಯಾಸ ಪಡಿಸಲಾದ ಕೋಟೆಯಾಗಿದೆ. ಇದು ಸಮುದ್ರ ಮಟ್ಟದಿಂದ 3,241 ಅಡಿಗಳಷ್ಟು ಎತ್ತರದಲ್ಲಿದೆ.

ಈ ಸುಂದರವಾದ ಕೋಟೆಯನ್ನು “ಮೈಸೂರಿನ ಹುಲಿ” ಟಿಪ್ಪು ಸುಲ್ತಾನ್ 1792ರಲ್ಲಿ ನಿರ್ಮಾಣ ಮಾಡಿದ ಎಂದು ಇತಿಹಾಸ ಹೇಳುತ್ತೆ. ಫ್ರೆಂಚ್ ವಾಸ್ತುಶಿಲ್ಪಿ ಸೆಬಾಸ್ಟಿಯನ್ ಲಿ ಪ್ರೆಸ್ಟ್ರೆ ಡಿ ವೌಬನ್ ಈ ಕೋಟೆಗೆ ನಕ್ಷತ್ರದಾಕಾರದ ಅದ್ಭುತ ವಿನ್ಯಾಸ ನೀಡಿದ.

ಈ ಕೋಟೆಗೆ ತೆರಳಲು 250 ಮೆಟ್ಟಿಲುಗಳನ್ನು ಏರಬೇಕು. ಈ ಕೋಟೆಯು ಅತ್ಯಂತ ಆಕರ್ಷಕವಾಗಿದ್ದು, ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಇಲ್ಲಿಗೆ ಬಂದು ಹೋಗುತ್ತಾರೆ.

ಮಂಜರಾಬಾದ್ ಕೋಟೆ ಸುಮಾರು 5 ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕೋಟೆಯನ್ನು ಇಸ್ಲಾಮಿಕ್ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಸ್ಥಳ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗೂ ಶೌಚಾಲಯಗಳು ಇವೆ. ಈ ಕೋಟೆಯಲ್ಲಿ ಒಂದು ಸುರಂಗ ಮಾರ್ಗ ಕೂಡ ಇದ್ದು ನೇರವಾಗಿ ಶ್ರೀರಂಗಪಟ್ಟಣಕ್ಕೆ ಸಂಪರ್ಕ ಹೊಂದಿದೆ ಎನ್ನಲಾಗುತ್ತೆ.

ಬೆಂಗಳೂರಿನಿಂದ ಸಕಲೇಶಪುರಕ್ಕೆ ನೇರ ರೈಲು ಲಭ್ಯವಿದೆ. ಈ ಪ್ರಯಾಣವು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಸಕಲೇಶಪುರ ನಗರ ಕೇಂದ್ರವು ಸಕಲೇಶಪುರ ರೈಲ್ವೆ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿದೆ ಮತ್ತು ಆಟೋರಿಕ್ಷಾ, ರಿಕ್ಷಾ ಅಥವಾ ಬಸ್ ಮೂಲಕ ತಲುಪಬಹುದು.
Published On - 10:32 pm, Sun, 21 August 22