
ಹೃತಿಕ್ ರೋಷನ್ ಅವರು ಇಂದು (ಜನವರಿ 10) ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹೃತಿಕ್ಗೆ ಫ್ಯಾನ್ಸ್ ಬರ್ತ್ಡೇ ವಿಶ್ ತಿಳಿಸುತ್ತಿದ್ದಾರೆ.

ಹೃತಿಕ್ ರೋಷನ್ ಅವರು ನಟಿ ಸಬಾ ಆಜಾದ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ. ಇಂದು ಅವರ ಜತೆ ಬರ್ತ್ಡೇ ಆಚರಿಸಿಕೊಂಡಿದ್ದಾರೆ.

ಹೃತಿಕ್ ಅವರು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಜಿಮ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ. ಅವರು ಹಲವು ಬಾರಿ ಸಿಕ್ಸ್ಪ್ಯಾಕ್ನಲ್ಲಿ ಮಿಂಚಿದ್ದಾರೆ.

ಕಳೆದ ವರ್ಷ ಹೃತಿಕ್ ರೋಷನ್ ನಟನೆಯ ‘ವಿಕ್ರಮ್ ವೇದ’ ಸಿನಿಮಾ ತೆರೆಗೆ ಬಂತು. ಈ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ.

ಈಗ ಹೃತಿಕ್ ‘ಫೈಟರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕೆಲಸಗಳು ನಡೆಯುತ್ತಿವೆ. 2024ರಲ್ಲಿ ಚಿತ್ರ ರಿಲೀಸ್ ಆಗಲಿದೆ.