ಅಯೋಧ್ಯೆಯ ಅಲಂಕಾರಕ್ಕೆ ಹುಬ್ಬಳ್ಳಿ ಕಲಾವಿದರ ಅಳಿಲು ಸೇವೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 19, 2024 | 4:57 PM

ಅಳಿಲಿನ ಬೃಹದಾಕಾರದ ಕಲಾಕೃತಿಯನ್ನು ಅಯೋಧ್ಯೆ ಧಾಮ ಜಂಕ್ಷನ್​ನಲ್ಲಿ (ರೈಲ್ವೆ ನಿಲ್ದಾಣ) ನಿರ್ಮಿಸಲಾಗಿದ್ದು, ಈ ಕಲಾಕೃತಿಯನ್ನು ಹುಬ್ಬಳ್ಳಿಯ ಆರ್ಟ್ ವಾಲೇ ಸಂಸ್ಥೆ ನಿರ್ಮಿಸಿರುವುದು ಮತ್ತೊಂದು ವಿಶೇಷ. ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯ ಆರ್ಟ್ ವಾಲೆ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಓಸ್ತವಾಲ್ ಹಾಗೂ ಆರ್ಟ್ ಡೈರೆಕ್ಟರ್ ನಿಧಿ ಓಸ್ತವಾಲ್ ಅವರ ಮಾರ್ಗದರ್ಶನದಲ್ಲಿ ಈ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

1 / 5
ಅಯೋಧ್ಯೆಯಲ್ಲಿ ಇನ್ನು ಮೂರೇ ದಿನದಲ್ಲಿ (ಜನವರಿ 22) ರಾಮಮಂದಿರ ಉದ್ಘಾಟನೆಯಾಗಲಿದೆ. ಈ ಮಧ್ಯೆ ಅಯೋಧ್ಯೆ ಧಾಮ ಜಂಕ್ಷನ್​ನಲ್ಲಿ ಹುಬ್ಬಳ್ಳಿ ಕಲಾವಿದರಿಂದ ಅಳಿಲು ಸೇವೆ ಮಾಡಲಾಗಿದೆ. ಅಂದರೆ ಅಳಿಲಿನ ಬೃಹದಾಕಾರದ ಕಲಾಕೃತಿಯನ್ನು ನಿರ್ಮಾಣ ಮಾಡಲಾಗಿದೆ.

2 / 5
ಅಯೋಧ್ಯೆ ರೈಲ್ವೆ ನಿಲ್ದಾಣದಲ್ಲಿ ಹುಬ್ಬಳ್ಳಿಯ ಆರ್ಟ್ವಾಲೇ ಸಂಸ್ಥೆಯಿಂದ ಒಟ್ಟು 5 ಕಲಾಕೃತಿ ನಿರ್ಮಾಣ ಮಾಡಲಾಗಿದ್ದು, ಆರ್ಟ್ ವಾಲೇ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಓಸ್ತವಾಲ್ ಮಾರ್ಗದರ್ಶನದಲ್ಲಿ ಒಟ್ಟು 20 ಜನ ಸಿಬ್ಬಂದಿ ಕೇವಲ 35 ದಿನಗಳಲ್ಲಿ ಕಲಾಕೃತಿ ಸಿದ್ಧಪಡಿಸಿದ್ದಾರೆ.

3 / 5
ಜಂಕ್ಷನ್​ ಮುಖ್ಯ ದ್ವಾರದ ಬಳಿಯ ಎ-3 ಪ್ಯಾಸೇಜ್ನಲ್ಲಿ ಕ್ವಾರ್ಟನ್ ಸ್ಟೀಲ್​ನಲ್ಲಿ 19.5 ಅಡಿ ಎತ್ತರದ, 2.5 ಟನ್ ತೂಕವಿದೆ.

4 / 5
ಅದೇ ರೈಲ್ವೆ ಜಂಕ್ಷನ್​ನಲ್ಲಿ 40 ಅಡಿ ಎತ್ತರದ ಅಯೋಧ್ಯೆ ರಾಮ ಮಂದಿರ ಕಲಾಕೃತಿ ಮತ್ತು 8.5 ಅಡಿ ಎತ್ತರದ ಅಯೋಧ್ಯೆ ಹಾಗೂ 9 ಅಡಿ ಎತ್ತರದ ನಾಮಫಲಕ, 40 ಅಡಿ ಎತ್ತರದ ಸರಯು ನದಿ ಘಾಟ್ ಕಲಾಕೃತಿಗಳು ಪ್ರತಿಷ್ಠಾಪಿಸಲಾಗಿದೆ. 

5 / 5
ಕಲ್ಯಾಣ್ ಜುವೆಲರ್ಸ್ ಕಲಾಕೃತಿಗಳ ಸಾಮಾಗ್ರಿ ಖರೀದಿಗೆ ನೆರವಾಗಿದೆ. ಕಲಾಕೃತಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಸದ್ಯ ತಂಡ ಹುಬ್ಬಳ್ಳಿಗೆ ವಾಪಸ್ಸಾಗಿದೆ. ಇಂಥದ್ದೊಂದು ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆ ಅನಿಸುತ್ತದೆ. ನಾಲ್ಕು ತಿಂಗಳಲ್ಲಿ ಮಾಡುವ ಕೆಲಸವನ್ನು ಕೇವಲ 35 ದಿನದಲ್ಲಿ ಮಾಡಿದ್ದೇವೆ. ಶ್ರೀರಾಮನಿಗೆ ಅಳಿಲು ಸೇವೆ ಸಲ್ಲಿಸಿದ್ದೇವೆ ಎಂದು ಆರ್ಟವಾಲೇ ಕಲಾವಿದರು ಹೇಳುತ್ತಾರೆ. 