ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

Edited By:

Updated on: Jan 20, 2022 | 3:29 PM

ICC Mens ODI Team: ಪಾಕ್ ತಂಡದ ಕ್ಯಾಪ್ಟನ್ ಬಾಬರ್ ಆಜಂ ಅವರನ್ನು ಐಸಿಸಿ ಆಯ್ಕೆ ಮಾಡಿಕೊಂಡಿದೆ. ಇನ್ನು ಈ ತಂಡದಲ್ಲಿ ಬಾಂಗ್ಲಾದೇಶ ತಂಡದ ಮೂವರು ಆಟಗಾರರಿರುವುದು ಮತ್ತೊಂದು ವಿಶೇಷ.

1 / 13
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2021ರ ಏಕದಿನ ತಂಡವನ್ನು ಪ್ರಕಟಿಸಿದೆ . 11 ಸದಸ್ಯರಿರುವ ಈ ತಂಡದಲ್ಲಿ ಟೀಮ್ ಇಂಡಿಯಾದ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಮತ್ತೊಂದೆಡೆ ಪಾಕ್ ತಂಡದ ಇಬ್ಬರು ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2021ರ ಏಕದಿನ ತಂಡವನ್ನು ಪ್ರಕಟಿಸಿದೆ . 11 ಸದಸ್ಯರಿರುವ ಈ ತಂಡದಲ್ಲಿ ಟೀಮ್ ಇಂಡಿಯಾದ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಮತ್ತೊಂದೆಡೆ ಪಾಕ್ ತಂಡದ ಇಬ್ಬರು ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2 / 13

ಅಷ್ಟೇ ಅಲ್ಲದೆ ತಂಡದ ನಾಯಕನಾಗಿ ಪಾಕ್ ತಂಡದ ಕ್ಯಾಪ್ಟನ್ ಬಾಬರ್ ಆಜಂ ಅವರನ್ನು ಐಸಿಸಿ ಆಯ್ಕೆ ಮಾಡಿಕೊಂಡಿದೆ. ಇನ್ನು ಈ ತಂಡದಲ್ಲಿ ಬಾಂಗ್ಲಾದೇಶ ತಂಡದ ಮೂವರು ಆಟಗಾರರಿರುವುದು ಮತ್ತೊಂದು ವಿಶೇಷ. ಹಾಗೆಯೇ ಐರ್ಲೆಂಡ್ ತಂಡದ ಇಬ್ಬರು ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ಐಸಿಸಿ ಆಯ್ಕೆ ಮಾಡಿದ 2021 ಏಕದಿನ ತಂಡದಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ...

3 / 13

ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್): ಐರ್ಲೆಂಡ್ ಆಟಗಾರ ಪಾಲ್ ಸ್ಟಿರ್ಲಿಂಗ್​ 705 ರನ್​ ಕಲೆಹಾಕುವ ಮೂಲಕ 2021 ರಲ್ಲಿ ಏಕದಿನದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

4 / 13

ಜಾನೆಮನ್ ಮಲಾನ್ (ದಕ್ಷಿಣ ಆಫ್ರಿಕಾ): ಮಲಾನ್ 2021 ರಲ್ಲಿ ಎಂಟು ಪಂದ್ಯಗಳಲ್ಲಿ 84.83 ಸರಾಸರಿಯಲ್ಲಿ ಎರಡು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ 509 ರನ್ ಗಳಿಸಿದರು.

5 / 13

ಬಾಬರ್ ಆಜಮ್ (ನಾಯಕ) (ಪಾಕಿಸ್ತಾನ): ಪಾಕ್ ನಾಯಕ ಕಳೆದ ವರ್ಷ ಎರಡು ಶತಕಗಳೊಂದಿಗೆ 67.50 ಸರಾಸರಿಯಲ್ಲಿ 405 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

6 / 13

ಫಖರ್ ಜಮಾನ್ (ಪಾಕಿಸ್ತಾನ): 2021 ರಲ್ಲಿ ಕೇವಲ ಆರು ಪಂದ್ಯಗಳನ್ನು ಆಡಿರುವ ಫಖರ್ ಎರಡು ಶತಕಗಳೊಂದಿಗೆ 60.83 ಸರಾಸರಿಯಲ್ಲಿ 365 ರನ್‌ಗಳನ್ನು ಬಾರಿಸಿದ್ದರು.

7 / 13

ರಸ್ಸಿ ವ್ಯಾನ್ ಡೆರ್ ಡುಸ್ಸೆನ್ (ದಕ್ಷಿಣ ಆಫ್ರಿಕಾ): ಡುಸ್ಸೆನ್ 2021 ರಲ್ಲಿ 8 ಪಂದ್ಯಗಳಲ್ಲಿ 57 ರ ಸರಾಸರಿಯಲ್ಲಿ 342 ರನ್ ಗಳಿಸಿದ್ದರು.

8 / 13

ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ): 2021 ರಲ್ಲಿ ಒಂಬತ್ತು ಏಕದಿನ ಪಂದ್ಯಗಳನ್ನು ಆಡಿರುವ ಶಕೀಬ್ 277 ರನ್ ಹಾಗೂ 17 ವಿಕೆಟ್‌ಗಳನ್ನು ಪಡೆದಿದ್ದರು.

9 / 13

ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್) (ಬಾಂಗ್ಲಾದೇಶ): ಕಳೆದ ವರ್ಷ 9 ಪಂದ್ಯಗಳನ್ನು ಆಡಿರುವ ಮುಶ್ಫಿಕರ್ ಒಂದು ಶತಕದೊಂದಿಗೆ 58.14 ಸರಾಸರಿಯಲ್ಲಿ 407 ರನ್ ಗಳಿಸಿದರು.

10 / 13

ವನಿಂದು ಹಸರಂಗ (ಶ್ರೀಲಂಕಾ): 2021 ರಲ್ಲಿ 14 ಪಂದ್ಯಗಳನ್ನು ಆಡಿರುವ ಹಸರಂಗ ಮೂರು ಅರ್ಧ ಶತಕಗಳೊಂದಿಗೆ 27.38 ಸರಾಸರಿಯಲ್ಲಿ 356 ರನ್ ಗಳಿಸಿದರು. ಅಲ್ಲದೆ 12 ವಿಕೆಟ್ ಕೂಡ ಕಬಳಿಸಿದ್ದರು.

11 / 13

ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ): ಬಾಂಗ್ಲಾದೇಶದ ಎಡಗೈ ಸೀಮರ್ 10 ಪಂದ್ಯಗಳಲ್ಲಿ 21.55 ಸರಾಸರಿಯಲ್ಲಿ 18 ವಿಕೆಟ್‌ಗಳನ್ನು ಉರುಳಿಸಿದ್ದರು.

12 / 13

ಸಿಮಿ ಸಿಂಗ್ (ಐರ್ಲೆಂಡ್): ಆಫ್-ಬ್ರೇಕ್ ಬೌಲರ್ ಸಿಮಿ ಸಿಂಗ್ 2021 ರಲ್ಲಿ 13 ಪಂದ್ಯಗಳಲ್ಲಿ 19 ವಿಕೆಟ್​ಗಳನ್ನು ಪಡೆದಿದ್ದರು. ಅಷ್ಟೇ ಅಲ್ಲದೆ 280 ರನ್‌ಗಳನ್ನು ಕೂಡ ಕಲೆಹಾಕಿದ್ದರು.

13 / 13

ದುಷ್ಮಂತ ಚಮೀರಾ (ಶ್ರೀಲಂಕಾ): ಕಳೆದ ವರ್ಷ 14 ಪಂದ್ಯಗಳನ್ನು ಆಡಿರುವ ಚಮೀರಾ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Loading...
Unable to load recommendations.
Follow Us