ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ಕಂಡುಬರುತ್ತದೆ ಎಂದು ಅದನ್ನು ಪೂಜಿಸಲಾಗುತ್ತದೆ. ಅದಕ್ಕೆ ಭಗವಾನ್ ವಿಷ್ಣುವಿಗೂ ತುಳಸಿ ಎಂದರೆ ತುಂಬಾ ಪ್ರೀತಿ. ಅದಕ್ಕಾಗಿಯೇ ವಿಷ್ಣು ಮೂರ್ತಿಯನ್ನು ಪೂಜಿಸುವಾಗ ಖಂಡಿತವಾಗಿಯೂ ತುಳಸಿ ದಳಗಳನ್ನು ಇಡಲಾಗುತ್ತದೆ. ಅಷ್ಟೇ ಅಲ್ಲ ವಾಸ್ತು ಶಾಸ್ತ್ರದಲ್ಲೂ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ಹಾಗಾಗಿಯೇ ಎಲ್ಲಾ ಹಿಂದೂಗಳ ಮನೆಗಳಲ್ಲಿ ತುಳಸಿ ಗಿಡವನ್ನು ನೆಡಲಾಗುತ್ತದೆ. ಆದರೆ ಕೆಲವೊಮ್ಮೆ ತುಳಸಿ ಗಿಡ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಈ ನಂಬಿಕೆಯ ಸಮ್ಮುಖದಲ್ಲಿ ಎಲ್ಲ ಹಿಂದೂಗಳ ಮನೆಗಳಲ್ಲಿ ತುಳಸಿ ಗಿಡವನ್ನು ನೆಡಲಾಗುತ್ತದೆ. ಆದರೆ ಕೆಲವೊಮ್ಮೆ ತುಳಸಿ ಗಿಡ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅದನ್ನು ನೋಡಿ ನಾವು ಕಂಗಾಲಾಗುತ್ತೇವೆ. ಆದರೆ ಋತುಮಾನಕ್ಕೆ ತಕ್ಕಂತೆ ತುಳಸಿ ಗಿಡದ ಎಲೆಗಳು ಹಳದಿ ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ಮತ್ತೆ ಬೆಳೆಯ ತೊಡಗುತ್ತದೆ.
ಆದರೆ ತುಳಸಿ ಗಿಡ ಹೀಗೆ ಕಪ್ಪು ಬಣ್ಣಕ್ಕೆ ತಿರುಗುವುದು ವಾಸ್ತು ದೋಷಗಳನ್ನು ಸೂಚಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ತುಳಸಿ ಗಿಡ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದರ್ಥ. ಜೊತೆಗೆ ಆ ಮನೆಯಲ್ಲಿ ತೊಂದರೆಗಳಿರುತ್ತವೆ.
ವಾಸ್ತು ಪ್ರಕಾರ ... ಮನೆಗೆ ಒಳ್ಳೆಯ ದಿನಗಳು ಬರುತ್ತಿವೆ ಎಂದಾದರೆ... ತುಳಸಿ ಸಸ್ಯವು ಹಸಿರು ಹಸಿರಾಗಿ ನಳನಳಿಸುತ್ತಾ ಆಕರ್ಷಕವಾಗಿ ಕಾಣುತ್ತದೆ. ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದರೆ ಅಥವಾ ಕುಟುಂಬದ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಇತ್ತ ಆ ತುಳಸಿಗಿಡವು ಕಳೆಗುಂದುತ್ತಾ ಬಿದ್ದುಹೋಗುತ್ತದೆ. ತುಳಸಿ ಗಿಡ ಬಿದ್ದು ಹೋದ ತಕ್ಷಣ ಇನ್ನೊಂದು ಗಿಡವನ್ನು ಕುಂಡದಲ್ಲಿ ನೆಟ್ಟರೆ ಶುಭವಾಗುವುದು.