- Kannada News Photo gallery if you see these five things in dream it will be indication of becoming rich Swapna Shastra in kannada
ಈ ಐದು ವಸ್ತುಗಳು ಕನಸಲ್ಲಿ ಕಂಡರೆ ಎಲ್ಲವೂ ಶುಭವೇ… ಮನೆಯಲ್ಲಿ ಲಕ್ಷ್ಮಿಕಟಾಕ್ಷ!
Swapna Shastra: ಕನಸಿನಲ್ಲಿ ಹಾವು ಕಂಡರೆ ಅಶುಭ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಅದು ನಿಜವಲ್ಲ. ಹಾವುಗಳ ನೋಡುವುದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯು ತನ್ನ ಕನಸಿನಲ್ಲಿ ಯಾವ ಸ್ಥಿತಿಯಲ್ಲಿ ಮತ್ತು ಯಾವ ಸ್ಥಳದಲ್ಲಿದ್ದ ಹಾವನ್ನು ನೋಡಿದರು ಎಂಬುದರ ಮೇಲೆ ಅದರ ಫಲಾಫಲ ಅವಲಂಬಿಸಿರುತ್ತದೆ.
Updated on: Aug 27, 2024 | 6:06 AM

ಹಿಂದೂಗಳು ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿ ದೇವತೆ ಎಂದು ಪರಿಗಣಿಸುತ್ತಾರೆ. ಎಲ್ಲೆಲ್ಲಿ ಲಕ್ಷ್ಮಿ ದೇವಿಯ ಕೃಪೆ ಇದೆಯೋ ಅಲ್ಲಿ ಸಂಪತ್ತಿನ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ಪ್ರತಿಯೊಬ್ಬರೂ ಎಂಥವರೇ ಆಗಲಿ ಜೀವನದಲ್ಲಿ ಒಂದಲ್ಲ ಅನೇಕ ಬಾರಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದಾಗ್ಯೂ, ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದ ನಂತರ ಇದ್ದಕ್ಕಿದ್ದಂತೆ ಶ್ರೀಮಂತರಾಗುತ್ತಾರೆ ಎಂಬುದನ್ನು ಸಾಮಾನ್ಯವಾಗಿ ಗಮನಿಸಬಹುದು. ಇನ್ನು ನಿದ್ರೆಯ ಸಮಯದಲ್ಲಿ ಪ್ರತಿಯೊಬ್ಬರೂ ವಿಭಿನ್ನ ಕನಸುಗಳನ್ನು ಅನುಭವಿಸುತ್ತಾರೆ. ಆ ಕನಸುಗಳಲ್ಲಿ ಪ್ರಾಣಿ, ಪಕ್ಷಿ ಮುಂತಾದ ಹಲವು ಬಗೆಯ ವಸ್ತುಗಳನ್ನು ಕಾಣುತ್ತಾರೆ. ಯಾರಾದರೂ ಕನಸಿನಲ್ಲಿ ಈ 5 ಸಂಗತಿಗಳನ್ನು ಕಂಡರೆ ಅವರಿಗೆ ಒಳ್ಳೆಯ ದಿನಗಳು ಬರುತ್ತವೆ ಎಂದು ಸ್ವಪ್ನ ವಿಜ್ಞಾನ ಹೇಳುತ್ತದೆ. ಅವು ಯಾವುವು ಎಂದು ಇಲ್ಲಿ ತಿಳಿದುಕೊಳ್ಳೋಣ.

ಹಾವು: ಕನಸಿನಲ್ಲಿ ಹಾವು ಕಂಡರೆ ಅಶುಭ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಅದು ನಿಜವಲ್ಲ. ಹಾವುಗಳ ನೋಡುವುದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯು ತನ್ನ ಕನಸಿನಲ್ಲಿ ಯಾವ ಸ್ಥಿತಿಯಲ್ಲಿ ಮತ್ತು ಯಾವ ಸ್ಥಳದಲ್ಲಿದ್ದ ಹಾವನ್ನು ನೋಡಿದರು ಎಂಬುದರ ಮೇಲೆ ಅದರ ಫಲಾಫಲ ಅವಲಂಬಿಸಿರುತ್ತದೆ. ಯಾರಾದರೂ ಕನಸಿನಲ್ಲಿ ಹಾವು ತಮ್ಮ ಸುತ್ತಲೂ ಇರುವುದನ್ನು ನೋಡಿದರೆ, ಕನಸಿನ ವಿಜ್ಞಾನದ ಪ್ರಕಾರ, ಇದು ಸಿರಿಸಂಪತ್ತನ್ನು ಪಡೆಯುವ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಗೂಬೆ: ಗೂಬೆಯು ಲಕ್ಷ್ಮೀದೇವಿಯ ವಾಹನ. ಲಕ್ಷ್ಮಿ ದೇವಿಯನ್ನು ಸಂಪತ್ತಿನ ಪ್ರಧಾನ ದೇವತೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಯಾರಾದರೂ ಕನಸಿನಲ್ಲಿ ಗೂಬೆಯನ್ನು ಕಂಡರೆ ಅವರ ಜೀವನದಲ್ಲಿ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವು ಲಭಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಕನಸಿನ ವಿಜ್ಞಾನದಲ್ಲಿ, ಗೂಬೆಯ ನೋಡುವುದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ದೀಪ: ಹಿಂದೂ ಧರ್ಮದಲ್ಲಿ ದೀಪಕ್ಕೆ ವಿಶೇಷ ಮಹತ್ವವಿದೆ. ಕೆಲವರು ಪ್ರತಿ ದಿನ ಮತ್ತು ವಿಶೆಷವಾಗಿ ಹಬ್ಬಹರಿದಿನಗಳಲ್ಲಿ ಪೂಜಾ ಕೋಣೆಯಲ್ಲಿ ದೀಪವನ್ನು ಹಚ್ಚುವುದು ವಾಡಿಕೆ. ಯಾರಾದರೂ ಕನಸಿನಲ್ಲಿ ಬೆಳಗುತ್ತಿರುವ ದೀಪವನ್ನು ಕಂಡರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ವ್ಯಕ್ತಿಗೆ ಒಳ್ಳೆಯ ದಿನಗಳು ಬರಲಿವೆ. ಬಹುಕಾಲದಿಂದ ಕಾಡುತ್ತಿರುವ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಭಾವಿಸಬಹುದು.

ಗರುಡ ಪಕ್ಷಿ: ಗರುಡ ಈ ಜಗತ್ತನ್ನು ಕಾಪಾಡುವ ವಿಷ್ಣುವಿನ ವಾಹನ. ನೀವು ಯಾರಾದರೂ ಕನಸಿನಲ್ಲಿ ಗರುಡನನ್ನು ಕಂಡರೆ, ವಿಷ್ಣುವು ನಿಮ್ಮನ್ನು ಆಶೀರ್ವದಿಸುತ್ತಾನೆ ಎಂದು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಕನಸಿನಲ್ಲಿ ಗರುಡ ಪಕ್ಷಿಯನ್ನು ಕಂಡರೆ ನೀವು ಶೀಘ್ರದಲ್ಲೇ ಜೀವನದಲ್ಲಿ ಶ್ರೀಮಂತರಾಗುತ್ತೀರಿ ಎಂದು ನೀವು ನಂಬುತ್ತೀರಿ.

ಚಿನ್ನ: ಕನಸಿನಲ್ಲಿ ಚಿನ್ನ ಕಂಡರೆ ಕೆಲವು ಸಮಸ್ಯೆಗಳು ಬಗೆಹರಿಯುತ್ತಿವೆ ಎಂದರ್ಥ. ಅದಕ್ಕಾಗಿಯೇ ಕನಸಿನಲ್ಲಿ ಚಿನ್ನವನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಲಕ್ಷ್ಮಿ ದೇವಿ ನಿಮ್ಮ ಜೀವನದಲ್ಲಿ ಲಕ್ಷ್ಮಿ ಕಟಾಕ್ಷ ಸುರಿಸುತ್ತಾಳೆ ಎಂಬುದನ್ನು ಸಾಂಕೇತಿಕವಾಗಿ ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಚಿನ್ನ ಕಂಡರೆ ಮನೆಯಲ್ಲಿ ಕನಕವೃಷ್ಟಿಯಾಗಲಿದೆ ಎಂದು ನಂಬಿ.



















