
ಇಂದು(ಭಾನುವಾರ) ನಡೆದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಹಿಂದು ವಿರೋಧಿ ನೀತಿ ಬೆಳಕಿಗೆ ಬಂದಿದೆ. ಹೌದು, ಮಹಿಳಾ ಪರೀಕ್ಷಾರ್ಥಿಗಳ ಮೂಗುಬೊಟ್ಟನ್ನು ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷಾ ಸಿಬ್ಬಂದಿ ಬಿಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ 57 ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆಯುತ್ತಿದ್ದು, ಅದರಲ್ಲಿ ಬಾಗಲಕೋಟೆ ಬಿವಿವಿ ಸಂಘದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಕೆಲವರ ಮೂಗು ಬೊಟ್ಟು ತೆಗೆಸಿದರೆ, ಮೂಗುಬೊಟ್ಟು ತೆಗೆಯಲು ಬಾರದವರಿಗೆ ಬಿಳಿ ಕಾಗದ ಪಟ್ಟಿ ಅಂಟಿಸಿ ಕಳಿಸಲಾಗಿದೆ.

ಅಷ್ಟೇ ಅಲ್ಲ, ಕಿವಿಯೋಲೆಯನ್ನು ಕೂಡ ತೆಗೆಸಿ ಪರೀಕ್ಷೆ ಕೇಂದ್ರದ ಒಳಬಿಡಲಾಗಿದೆ. ಈ ಹಿನ್ನಲೆ ಕೆಲವರು ನಕಲು ತಡೆಯಲು ಈ ಮೂಲಕ ಹಿಂದೂ ಸಂಪ್ರದಾಯಕ್ಕೆ ಕೊಳ್ಳಿ ಇಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ಕೆಲವರು ಆಧುನಿಕ ಉಪಕರಣ ನಿರ್ಬಂಧ ಒಕೆ, ಮೂಗುಬೊಟ್ಟು ಕಿವಿಯೋಲೆ ತೆಗೆಯೋದೇಕೆ? ನಕಲು ತಡೆಯಲು ಇದೆಂತಾ ವಿಚಿತ್ರ ಕ್ರಮ ಎಂದು ಪ್ರಶ್ನಿಸಿದರು.

ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಬ್ಲ್ಯೂ ಟೂತ್, ವೈರ್ಲೆಸ್, ಮೊಬೈಲ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಆಭರಣ ಧರಿಸುವಂತಿಲ್ಲ ಎಂದು ಹಾಲ್ ಟಿಕೆಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಿನ್ನೆಲೆ ಸಿಬ್ಬಂದಿ, ಮೂಗುಬೊಟ್ಟು, ಕಿವಿಯೋಲೆಯನ್ನು ತೆಗೆಸಿದ್ದಾರೆ.

ಜೀನ್ಸ್ ಪ್ಯಾಂಟ್, ಉದ್ದ ತೋಳಿನ ಬಟ್ಟೆ ಹಾಕಿ ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ಆಧುನಿಕ ಉಪಕರಣ ತರುವಂತಿಲ್ಲ ಎಂದು ಕಂಡೀಷನ್ ಇದೆ. ಆದರೆ, ಒಂದು ಧರ್ಮದ ಸಂಪ್ರದಾಯಕ್ಕೆ ದಕ್ಕೆ ತರುವಂತಹ ಕೆಲಸ ಉಳಿತಲ್ಲ ಎಂದರು