ಭೂಕಂಪ ಪೀಡಿತ ನೇಪಾಳಕ್ಕೆ 2ನೇ ಬಾರಿಗೆ ಸಹಾಯಹಸ್ತ ನೀಡಿದ ಭಾರತ

|

Updated on: Nov 07, 2023 | 11:14 AM

ಭಾರತದ ಎಲ್ಲ ಹಲವು ರಾಷ್ಟ್ರಗಳಿಗೆ ಆಪತ್ಭಾಂದವನಂತೆ, ಕಷ್ಟದಲ್ಲಿರುವ ರಾಷ್ಟ್ರಗಳಿಗೆ ಸಹಾಯ ಹಸ್ತವನ್ನು ನೀಡುತ್ತದೆ. ಈ ಒಂದು ಕಾರಣಕ್ಕೂ ಇತರ ದೇಶಗಳು ಭಾರತವನ್ನು ಗೌರವಿಸುವುದು. ಇದೀಗ ನೇಪಾಳದಲ್ಲಿ ನಡೆದ ಭೂಕಂಪದಿಂದ ಅಲ್ಲಿನ ಜನರ ಜೀವನ ಅಸ್ಥವ್ಯಸ್ಥವಾಗಿದೆ. ಅದಕ್ಕಾಗಿ ಭಾರತ ಈಗಾಗಲೇ ಒಂದು ಸುತ್ತಿನ ಸಹಾಯ ಹಸ್ತವನ್ನು ನೀಡಿದೆ. ಇದೀಗ ಎರಡನೇ ಹಂತದ ಸಹಾಯಹಸ್ತವನ್ನು ಕಳುಹಿಸಿದೆ.

1 / 5

2 / 5
ಭಾರತ ಸೋಮವಾರದಂದು ನೇಪಾಳಕ್ಕೆ ಆಹಾರ, ಬಟ್ಟೆಗಳನ್ನು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ನೀಡಿದೆ. ಇನ್ನು ಭೂಕಂಪ ಪೀಡಿತ ಜಿಲ್ಲೆಗಳಿಗೆ ತುರ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

3 / 5
ನೇಪಾಳದಲ್ಲಿ ಶುಕ್ರವಾರ ಮಧ್ಯರಾತ್ರಿ 6.4 ತೀವ್ರತೆಯ ಭೂಕಂಪ ಸಂಭವಿಸಿದ್ದು, 153 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಶ್ಚಿಮ ನೇಪಾಳದ ಜಜರ್ಕೋಟ್ ಮತ್ತು ರುಕುಮ್ ವೆಸ್ಟ್ ಜಿಲ್ಲೆಗಳನ್ನು ಸಂಭವಿಸಿದ ಭೂಕಂಪದಿಂದ ಸುಮಾರು 8,000 ಸಾರ್ವಜನಿಕ ಮತ್ತು ಖಾಸಗಿ ಮನೆಗಳಿಗೆ ಹಾನಿಯಾಗಿದೆ.

4 / 5
ಈ ಸಮಯದಲ್ಲಿ ನೇಪಾಳಕ್ಕೆ ಭಾರತದ ಸಹಾಯ ಅಗತ್ಯವಿದೆ. ಅದಕ್ಕಾಗಿ ಭಾರತ ನೇಪಾಳಕ್ಕೆ ಅಗತ್ಯ ವಸ್ತುಗಳು ಹಾಗೂ ವೈದ್ಯಕೀಯ ನೆರವು ನೀಡಿದೆ ಎಂದು ವಿದೇಶಾಂಗ ಸಚಿವ ಎಸ್​​ ಜೈಶಂಕರ್​​ ಹೇಳಿದ್ದಾರೆ.

5 / 5
ಇನ್ನು ಈ ವಿಶೇಷ ಪರಿಹಾರವನ್ನು ಭಾರತೀಯ ವಾಯುಪಡೆಯ C-130  ನೇಪಾಳಕ್ಕೆ ರವಾನಿಸಿದೆ. ಮೊದಲ ಹಂತದ ಪರಿಹಾರವನ್ನು ಭಾನುವಾರ ನೀಡಲಾಗಿದೆ. ಈ ಸಮಯದಲ್ಲಿ ಭಾರತ ನೇಪಾಳಕ್ಕೆ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧವಿದೆ ಎಂದು ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿದೆ.