IND vs ENG: ಟೆಸ್ಟ್​ನಲ್ಲಿ 2000 ರನ್, 200 ವಿಕೆಟ್.. ಆಂಗ್ಲರ ನೆಲದಲ್ಲಿ ರವೀಂದ್ರ ಜಡೇಜಾ ನೂತನ ದಾಖಲೆ!

Ravindra Jadeja: ರವೀಂದ್ರ ಜಡೇಜಾ ಟೆಸ್ಟ್​ನಲ್ಲಿ 2000 ರನ್ ಮತ್ತು 200 ವಿಕೆಟ್ ಪಡೆದ ನಾಲ್ಕನೇ ಆಲ್ ರೌಂಡರ್. ಅವರು 53 ನೇ ಟೆಸ್ಟ್​ನಲ್ಲಿಯೇ ಈ ಸಾಧನೆ ಮಾಡಿದರು.

TV9 Web
| Updated By: ಪೃಥ್ವಿಶಂಕರ

Updated on:Aug 09, 2021 | 7:01 PM

ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧ ನಾಟಿಂಗ್ ಹ್ಯಾಮ್ ಟೆಸ್ಟ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಮೊದಲ ಟೆಸ್ಟ್ ನ ಮೂರನೇ ದಿನ 18 ರನ್ ಗಳಿವುದರೊಂದಿಗೆ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ 2000 ರನ್ ಮತ್ತು 200 ವಿಕೆಟ್ ಪೂರೈಸಿದ ಐದನೇ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಸ್ಯಾಮ್ ಕರ್ರನ್ ಎಸೆತಕ್ಕೆ ಬೌಂಡರಿ ಬಾರಿಸುವ ಮೂಲಕ ಅವರು ಈ ಸಾಧನೆ ಮಾಡಿದರು. ಭಾರತ 145 ರನ್​ಗಳಿಗೆ ಐದು ವಿಕೆಟ್ ಕಳೆದುಕೊಂಡ ನಂತರ ಜಡೇಜಾ ಕ್ರೀಸ್​ಗೆ ಬಂದರು. ಇದರ ನಂತರ, ಕೆಎಲ್ ರಾಹುಲ್ ಜೊತೆಗೂಡಿ, ಅವರು ಭಾರತದ ಇನ್ನಿಂಗ್ಸ್ ಅನ್ನು ನಿಭಾಯಿಸಿದರು. ಇಬ್ಬರೂ ಮೂರನೇ ದಿನದ ಊಟಕ್ಕೆ ಮೊದಲು ಯಾವುದೇ ವಿಕೆಟ್ ಬೀಳಲು ಬಿಡಲಿಲ್ಲ ಮತ್ತು ಭಾರತವನ್ನು 191 ರನ್​ಗಳ ಗಡಿ ದಾಟಿಸಿದರು.

1 / 5
ರವೀಂದ್ರ ಜಡೇಜಾ ಟೆಸ್ಟ್​ನಲ್ಲಿ 2000 ರನ್ ಮತ್ತು 200 ವಿಕೆಟ್ ಪಡೆದ ನಾಲ್ಕನೇ ಆಲ್ ರೌಂಡರ್. ಅವರು 53 ನೇ ಟೆಸ್ಟ್​ನಲ್ಲಿಯೇ ಈ ಸಾಧನೆ ಮಾಡಿದರು. ಅವರು ಇಂಗ್ಲೆಂಡ್​ನ ಇಯಾನ್ ಬೋಥಮ್ (42 ಟೆಸ್ಟ್), ಕಪಿಲ್ ದೇವ್-ಇಮ್ರಾನ್ ಖಾನ್ (50 ಟೆಸ್ಟ್) ಮತ್ತು ರವಿಚಂದ್ರನ್ ಅಶ್ವಿನ್ (51 ಟೆಸ್ಟ್) ಗಿಂತ ಮುಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ರವೀಂದ್ರ ಜಡೇಜಾ ಟೀಮ್ ಇಂಡಿಯಾಕ್ಕೆ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಅದ್ಭುತ ಕೊಡುಗೆ ನೀಡಿದ್ದಾರೆ.

2 / 5
ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ 2000 ರನ್ ಮತ್ತು 200 ವಿಕೆಟ್ ಪಡೆದ ಐದನೇ ಭಾರತೀಯ. ಈ ಸಂಚಿಕೆಯಲ್ಲಿ ಕಪಿಲ್ ದೇವ್ ಅವರಿಗಿಂತ ಮುಂದಿದ್ದಾರೆ. ಕಪಿಲ್ 434 ವಿಕೆಟ್ ಪಡೆದು 5248 ರನ್ ಗಳಿಸಿದ್ದಾರೆ. ನಂತರ ಅಶ್ವಿನ್ 413 ವಿಕೆಟ್ ಮತ್ತು 2685 ರನ್ ಗಳಿಸಿದ್ದಾರೆ. ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು 2506 ರನ್ ಗಳಿಸಿದರು. ಹರ್ಭಜನ್ ಸಿಂಗ್ 413 ವಿಕೆಟ್ ಮತ್ತು 2224 ರನ್ ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಇದುವರೆಗೆ 221 ವಿಕೆಟ್ ಗಳೊಂದಿಗೆ 2012 ರನ್ ಗಳಿಸಿದ್ದಾರೆ.

3 / 5
ಟೀಂ ಇಂಡಿಯಾದ ಉಳಿದ ತಾರೆಯರಿಂದಾಗಿ ರವೀಂದ್ರ ಜಡೇಜಾ ಆಟವನ್ನು ಹೆಚ್ಚಾಗಿ ಮರೆಮಾಡಲಾಗಿದೆ. ಆದರೆ ಈ ಆಟಗಾರನು ಟೆಸ್ಟ್‌ಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದಾನೆ. ಅವರ ರನ್-ಸ್ಕೋರಿಂಗ್ ಸರಾಸರಿ 35.44 ಆಗಿದ್ದರೆ ಅವರ ವಿಕೆಟ್ ತೆಗೆದುಕೊಳ್ಳುವ ಸರಾಸರಿ 24.41 ಆಗಿದೆ. ಅಂದರೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಸರಾಸರಿ 11.03. ಈ ಅರ್ಥದಲ್ಲಿ, ಅವರು ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಗ್ಯಾರಿ ಸೋಬರ್ಸ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಮತ್ತು ಪಾಕಿಸ್ತಾನದ ಇಮ್ರಾನ್ ಖಾನ್ ಮಾತ್ರ ಅವರಿಗಿಂತ ಮುಂದಿದ್ದಾರೆ.

4 / 5
ರವೀಂದ್ರ ಜಡೇಜಾ 2009 ರಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ನಾಲ್ಕು ವರ್ಷಗಳ ನಂತರ, 2013 ರಲ್ಲಿ, ಅವರು ಟೆಸ್ಟ್ ತಂಡದ ಭಾಗವಾದರು. ಇದುವರೆಗೆ ಅವರು 52 ಟೆಸ್ಟ್, 168 ಏಕದಿನ ಮತ್ತು 50 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ ನಲ್ಲಿ 211 ವಿಕೆಟ್, 2012 ರನ್, ಏಕದಿನದಲ್ಲಿ 188 ವಿಕೆಟ್ ಮತ್ತು 2411 ರನ್, ಟಿ 20 ಯಲ್ಲಿ 39 ವಿಕೆಟ್ ಮತ್ತು  217 ರನ್ ಗಳಿಸಿದ್ದಾರೆ.

5 / 5

Published On - 7:29 pm, Fri, 6 August 21

Follow us
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ

ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್