AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಪ್ರೇಮಿಗಳಾದ್ರೆ ಸ್ಲಿಮ್ ಆಗಿ… ದೇಶದ ಆರ್ಥಿಕ ಆರೋಗ್ಯಕ್ಕೆ ಮಗ್ಗುಲ ಮುಳ್ಳಾಗಿದೆ ಜನರ ಬೊಜ್ಜು

Indian economy and obesity: ಭಾರತ 2047ರೊಳಗೆ ಮುಂದುವರಿದ ದೇಶವಾಗಬೇಕು ಎನ್ನುವ ಗುರಿ ಹೊಂದಿದೆ. ಆರ್ಥಿಕ ಬೆಳವಣಿಗೆಯ ಓಟ ಸರಾಗವಾಗಿ ಸಾಗಿದರೆ ಇದು ನಿಜವಾಗಬಹುದು. ಆದರೆ, ಆರ್ಥಿಕ ಓಟಕ್ಕೆ ಹಲವು ಅಡೆತಡೆಗಳು ಇವೆ. ಜಾಗತಿಕ ವಿದ್ಯಮಾನಗಳ ಜೊತೆಗೆ ಆಂತರಿಕವಾದ ಇತರ ಸಮಸ್ಯೆಗಳೂ ತೊಡರುಗಳೆನಿಸಿವೆ. ದೇಶದ ಜನರ ಆರೋಗ್ಯವೂ ಆರ್ಥಿಕತೆಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಭಾರತೀಯರನ್ನು ಕಾಡುತ್ತಿರುವ ಬೊಜ್ಜಿನ ಸಮಸ್ಯೆ ಭಾರತದ ಗುರಿಯನ್ನು ಮಸುಕಾಗಿಸುತ್ತಿದೆ. ಈ ಬಗ್ಗೆ ಒಂದು ವರದಿ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 20, 2024 | 11:48 AM

Share
ಭಾರತೀಯ ಯುವಸಮುದಾಯದಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯೊಂದರ ಪ್ರಕಾರ 18ರಿಂದ 69 ವರ್ಷ ವಯೋಮಾನದ ಪುರುಷರಲ್ಲಿ ಬೊಜ್ಜಿನ ಸಮಸ್ಯೆ ಇರುವವರ ಪ್ರಮಾಣ ಶೇ. 22.9 ಅಂತೆ. ಇದು ಐದನೇ ಸಮೀಕ್ಷೆಯಾಗಿದೆ. ಹಿಂದಿನ ಸಮೀಕ್ಷೆ, ಅಂದರೆ ನಾಲ್ಕನೇ ಸಮೀಕ್ಷೆಯಲ್ಲಿ ಆ ವಯೋಮಾನದವರಲ್ಲಿ ಬೊಜ್ಜು ಹೊಂದಿರುವವರ ಪ್ರಮಾಣ ಶೇ. 18.9 ರಷ್ಟು ಇತ್ತು. ನಾಲ್ಕು ಪ್ರತಿಶತದಷ್ಟು ಹೆಚ್ಚಳವಾಗಿದೆ. ಹಾಗೆಯೇ, ಅದೇ ವಯೋಮಾನದ ಮಹಿಳೆಯರಲ್ಲಿ ಬೊಜ್ಜು ಹೊಂದಿರುವವರ ಸಂಖ್ಯೆ ಶೇ. 20.6ರಿಂದ ಶೇ. 24ಕ್ಕೆ ಏರಿಕೆ ಆಗಿದೆ.

1 / 5
ತಪ್ಪಾದ ಆಹಾರ ಕ್ರಮ, ಅತಿಯಾದ ಸೋಷಿಯಲ್ ಮೀಡಿಯಾ ಬಳಕೆ, ಅತಿಯಾದ ಟಿವಿ ವೀಕ್ಷಣೆ, ಸೋಂಬೇರಿತನದ ಜೀವನಶೈಲಿ ಇವೆಲ್ಲವೂ ಡಯಾಬಿಟಿಸ್, ಬಿಪಿ, ಹೃದ್ರೋಗ, ಕ್ಯಾನ್ಸರ್ ಇತ್ಯಾದಿಗೆ ಎಡೆ ಮಾಡಿಕೊಡುತ್ತಿವೆ. ಭಾರತದಲ್ಲಿ ಸಣ್ಣ ವಯಸ್ಸಿನ ಮಂದಿಯಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚೆಚ್ಚು ಕಾಡತೊಡಗಿದೆ.

2 / 5
ಅನಾರೋಗ್ಯಯುತ ಆಹಾರಗಳ ಸೇವನೆಯಿಂದ ಶೇ. 54ರಷ್ಟು ಜನರು ಕಾಯಿಲೆ ತಂದುಕೊಳ್ಳುತ್ತಿದ್ದಾರೆ. ನಗರ ಭಾಗದಲ್ಲಿ ಶೇ. 70ರಷ್ಟು ಜನರು ಬೊಜ್ಜಿನ ಸಮಸ್ಯೆ ಹೊಂದಿದ್ದಾರೆ. 19 ವರ್ಷದೊಳಗಿನ ಮಕ್ಕಳಲ್ಲಿ ಸಹಜಕ್ಕಿಂತ ಹೆಚ್ಚು ತೂಕ ಹೊಂದಿರುವವರ ಸಂಖ್ಯೆ 1.25 ಕೋಟಿ ಇದೆ.

3 / 5
ಈ ಮೇಲಿನ ಅಂಕಿ ಅಂಶಗಳಿಗೂ ಭಾರತದ ಆರ್ಥಿಕತೆಗೂ ಸಂಬಂಧ ಇದೆ. 2023-24ರ ಆರ್ಥಿಕ ಸಮೀಕ್ಷೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಭಾರತದ ಆರ್ಥಿಕತೆಯ ಅಭಿವೃದ್ಧಿ ಪೂರ್ಣ ಶಕ್ತಿಯಲ್ಲಿ ಆಗಬೇಕೆಂದರೆ ಕೆಲಸ ಮಾಡಬಲ್ಲ ಮಾನವ ಸಂಪನ್ಮೂಲ ಪೂರ್ಣ ಬಳಕೆ ಆಗಬೇಕು. ಆದರೆ, ಯುವ ಸಮುದಾಯ ಬಹಳಷ್ಟು ಕಾಯಿಲೆಗಳಿಂದ ಬಳಲುತ್ತಿದ್ದು ಇದು ಮಾನವ ಸಂಪನ್ಮೂಲದ ಸರಿಯಾದ ಬಳಕೆ ಅಸಾಧ್ಯವಾಗುವಂತೆ ಮಾಡುವ ಭೀತಿ ಇದೆ.

4 / 5
ಬೊಜ್ಜು ಹಲವು ರೋಗಗಳಿಗೆ ಮೂಲವಾಗಿದೆ. ಜನರು ತಮ್ಮ ದೇಹದ ಬೊಜ್ಜನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿದರೆ ಅವರ ದೇಹದ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೆಯೇ, ದೇಶದ ಆರೋಗ್ಯವೂ ಉತ್ತಮವಾಗಿರುತ್ತದೆ. ಜನರು ತಮ್ಮ ಬಾಡಿ ಮಾಸ್ ಇಂಡೆಕ್ಸ್ ಅಥವಾ ಬಿಎಂಐ ಅನ್ನು 25ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಬಿಎಂಐ 30ಕ್ಕಿಂತ ಹೆಚ್ಚಿದ್ದರೆ ಅದು ಒಬೆಸಿಟಿ ಅಥವಾ ಬೊಜ್ಜು ಸ್ಥಿತಿ ಎನಿಸುತ್ತದೆ.

5 / 5
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು

ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ

ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ

‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು

17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ

ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ

RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ

ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!