- Kannada News Photo gallery bandipur national park attacking with its greenery see photos kannada news
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ ಬಂಡೀಪುರ; ತುಂಬಿದ ಕೆರೆ ಕಟ್ಟೆಗಳು, ಸ್ವಚ್ಛಂದದಿಂದ ವನ್ಯ ಜೀವಿಗಳ ಓಡಾಟ, ಫೋಟೋಸ್ ನೋಡಿ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯ ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಅರಣ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಬರದಿಂದ ಒಣಗಿದ್ದ ಕಾಡು ಈ ಬಾರಿಯ ಮಳೆಗೆ ಹಚ್ಚ ಹಸಿರಾಗಿದೆ. ಹಸಿರು ಗಿಡ ಮರಗಳಿಂದ ಕಂಗೊಳಿಸುತ್ತಿದೆ.
Updated on: Aug 20, 2024 | 10:43 AM

ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಅರಣ್ಯ ಎಂಬ ಹೆಗ್ಗಳಿಕೆ ಬಂಡೀಪುರಕ್ಕಿದೆ. ಕಳೆದ ವರ್ಷ ಬರದಿಂದ ಒಣಗಿದ್ದ ಕಾಡು ಈ ಬಾರಿಯ ಮಳೆಗೆ ಹಚ್ಚ ಹಸಿರಾಗಿದೆ. ಹಸಿರು ಗಿಡ ಮರಗಳಿಂದ ಕಂಗೊಳಿಸುತ್ತಿದೆ.

ಎತ್ತ ಕಣ್ಣಾಯಿಸಿದರೂ ಕಣ್ಣಿಗೆ ರಾಚೋ ಹಸಿರ ಕಂಪು. ಹಸಿರಿನ ಹೋದಿಕೆಯನ್ನ ಹೊದ್ದು ನಿಂತಿರುವ ಬೆಟ್ಟಗುಡ್ಡಗಳು. ತುಂಬಿದ ಕೆರೆಯಲ್ಲಿ ನೀರು ಕುಡಿಯುತ್ತಿರುವ ವನ್ಯ ಮೃಗಗಳು. ಸ್ವಚ್ಛಂದದಿಂದ ಓಡಾಡುತ್ತಿರುವ ಪ್ರಾಣಿಗಳು. ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ.

ರಾಜ್ಯದಲ್ಲೇ ಅತಿ ಹೆಚ್ಚು ಹುಲಿ ಆನೆಗಳನ್ನ ಹೊಂದಿರುವ ಏಕೈಕ ಟೈಗರ್ ರಿಸರ್ವ್ ಫಾರೆಸ್ಟ್ ಅಂದ್ರೆ ಅದು ಬಂಡೀಪುರ. ಕಳೆದ ವರ್ಷ ಮಳೆಯಿಲ್ಲದೆ ಕಾಡು ಸಂಪೂರ್ಣ ಬರುಡಾಗಿತ್ತು. ಕೆರೆ ಕಟ್ಟೆಗಳೆಲ್ಲ ಒಣಗಿ ಹೋಗಿತ್ತು. ಕಾಡು ಪ್ರಾಣಿಗಳ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿತ್ತು. ಆದ್ರೆ ಈ ಬಾರಿ ಸುರಿದ ಮುಂಗಾರು ಮಳೆಗೆ ಬಂಡೀಪುರ ಫುಲ್ ಗ್ರಿನೀಶ್ ಆಗಿದ್ದು ಭೂ ಲೋಕದ ಸ್ವರ್ಗದಂತೆ ಭಾಸವಾಗುತ್ತಿದೆ.

ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ನಲ್ಲಿ 150ಕ್ಕೂ ಹೆಚ್ಚು ಕೆರೆ ಕಟ್ಟೆಗಳಿವೆ. ಈ ಎಲ್ಲಾ ಕೆರೆಗಳು ಬರಗಾಲಕ್ಕೆ ಭಾಗಶಃ ಖಾಲಿಯಾಗಿತ್ತು. ಬಂಡೀಪುರದಲ್ಲಿರುವ ಹುಲಿ ಹಾಗೂ ಆನೆಗಳು ಬಂಡೀಪುರದಿಂದ ಕಬಿನಿ ಹಿನ್ನೀರಿನ ಕಡೆ ಮುಖ ಮಾಡಿದ್ವು. ದಾಹ ತೀರಿಸಿಕೊಳ್ಳಲು ಗುಳೆ ಹೋಗಿದ್ದ ಕಾಡು ಪ್ರಾಣಿಗಳು ಈಗ ಮತ್ತೆ ಬಂಡೀಪುರದತ್ತ ಹಿಂತಿರುಗುತ್ತಿವೆ.

ಈ ಹಿನ್ನಲೆ ಸಫಾರಿಗೆ ಹೋದವರಿಗೂ ಆನೆ, ಹುಲಿ ಸೇರಿದಂತೆ ಕಾಡು ಪ್ರಾಣಿಗಳ ಸೈಟಿಂಗ್ ಕೂಡ ಚೆನ್ನಾಗಿ ಆಗ್ತಾಯಿದೆ. ಕೆರೆ ಕಟ್ಟೆಗಳು ತುಂಬಿ ಹಚ್ಚ ಹಸಿರಿನಿಂದ ಕೂಡಿದ ಪರಿಣಾಮ ವನ್ಯ ಮೃಗಗಳಿಗೂ ಆಹಾರ ಸಿಗುತ್ತಿದ್ದು ಕಾಡು ಪ್ರಾಣಿಗಳು ಸ್ವಚ್ಛಂದವಾಗಿ ಓಡಾಡುತ್ತಿವೆ.

ಒಟ್ಟಾರೆ ಈ ಬಾರಿಯ ಉತ್ತಮ ಮಳೆಗೆ ಒಣಗಿ ಹೋಗಿದ್ದ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಫುಲ್ ಗ್ರೀನಿಶ್ ಆಗಿದ್ದು ಪ್ರವಾಸಿಗರ ಪಾಲಿಗೆ ಬಂಡೀಪುರ ಭೂ ಲೋಕದ ಸ್ವರ್ಗದಂತೆ ಕಂಗೊಳಿಸುತ್ತಿದೆ.



