- Kannada News Photo gallery Indian javelin ace Neeraj Chopra displaces Usain Bolt as world most written about athlete
ಮತ್ತೊಂದು ಅದ್ಭುತ ಸೃಷ್ಟಿಸಿದ ಚಿನ್ನದ ಹುಡುಗ; ಉಸೇನ್ ಬೋಲ್ಟ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ನೀರಜ್!
Neeraj Chopra: ಪ್ರತಿ ವರ್ಷ ವಿಶ್ವ ಅಥ್ಲೆಟಿಕ್ಸ್, ಅತಿ ಹೆಚ್ಚು ಲೇಖನಗಳು ಯಾವ ಆಟಗಾರ ಮೇಲೆ ಪ್ರಕಟವಾಗಿವೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪಟ್ಟಿಯ ಪ್ರಕಾರ, ಮೊದಲ ಸ್ಥಾನದಲ್ಲಿರುವ ನೀರಜ್ ಚೋಪ್ರಾ ಬಗ್ಗೆ 812 ಲೇಖನಗಳನ್ನು ಬರೆಯಲಾಗಿದೆ.
Updated on:Dec 16, 2022 | 2:28 PM

ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವಿಶೇಷ ದಾಖಲೆಗೆ ಕೊರಳೊಡ್ಡಿದ್ದಾರೆ. ಈ ವರ್ಷ ಅನೇಕ ಐತಿಹಾಸಿಕ ವಿಜಯಗಳನ್ನು ಸಾಧಿಸಿರುವ ನೀರಜ್ ಬಗ್ಗೆ ಈ ವರ್ಷ ಅತಿ ಹೆಚ್ಚು ಲೇಖನಗಳು ಪ್ರಕಟವಾಗಿದ್ದು, ಈ ಪಟ್ಟಿಯಲ್ಲಿ ನೀರಜ್ಗೆ ಮೊದಲ ಸ್ಥಾನ ಸಿಕ್ಕಿದೆ.

ಪ್ರತಿ ವರ್ಷ ವಿಶ್ವ ಅಥ್ಲೆಟಿಕ್ಸ್, ಅತಿ ಹೆಚ್ಚು ಲೇಖನಗಳು ಯಾವ ಆಟಗಾರ ಮೇಲೆ ಪ್ರಕಟವಾಗಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪಟ್ಟಿಯ ಪ್ರಕಾರ, ಮೊದಲ ಸ್ಥಾನದಲ್ಲಿರುವ ನೀರಜ್ ಚೋಪ್ರಾ ಬಗ್ಗೆ 812 ಲೇಖನಗಳನ್ನು ಬರೆಯಲಾಗಿದೆ. ಇದರ ನಂತರ, ಎರಡನೇ ಸ್ಥಾನದಲ್ಲಿ ಜಮೈಕಾದ ಅಥ್ಲೀಟ್ ಎಲೈನ್ ಥಾಂಪ್ಸನ್ ಹೆರ್ರಾ ಇದ್ದಾರೆ, ಅವರ ಮೇಲೆ 751 ಲೇಖನಗಳನ್ನು ಬರೆಯಲಾಗಿದೆ. ಅದೇ ಸಮಯದಲ್ಲಿ, ಮೂರನೇ ಸ್ಥಾನದಲ್ಲಿರುವ ಶೆಲ್ಲಿ ಆನ್ ಫ್ರೇಸರ್ ಮೇಲೆ 698 ಲೇಖನಗಳನ್ನು ಬರೆಯಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಈ ವರ್ಷ ಐದನೇ ಸ್ಥಾನದಲ್ಲಿದ್ದಾರೆ. ಅವರ ಮೇಲೆ 574 ರನ್ ಲೇಖನಗಳನ್ನು ಬರೆಯಲಾಗಿದೆ.

ಈ ಪಟ್ಟಿಯಲ್ಲಿ ನೀರಜ್ ಚೋಪ್ರಾ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿರುವುದನ್ನು ಕಂಡು ಆಶ್ಚರ್ಯಚಕಿತರಾಗಿರು ಅಥ್ಲೆಟಿಕ್ಸ್ ಫೆಡರೇಶನ್ ಅಧ್ಯಕ್ಷ ಸೆಬಾಸ್ಟಿಯನ್, ಇದು ತುಂಬಾ ವಿಭಿನ್ನವಾಗಿದೆ, ಅಲ್ಲದೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಮೊದಲ ಬಾರಿಗೆ ಉಸೇನ್ ಬೋಲ್ಟ್ ಈ ಪಟ್ಟಿಯಲ್ಲಿ ನಂ.1 ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಆಶ್ಚರ್ಯ ಹೊರಹಾಕಿದ್ದಾರೆ.

ನೀರಜ್ ಚೋಪ್ರಾಗೆ ಈ ವರ್ಷ ತುಂಬಾ ವಿಶೇಷವಾಗಿದೆ. ಮೊದಲು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದ ನೀರಜ್, ಈ ವರ್ಷದ ಡೈಮಂಡ್ ಲೀಗ್ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೂ ಭಾಜನರಾಗಿದ್ದರು.
Published On - 2:28 pm, Fri, 16 December 22




