Updated on: Jan 03, 2023 | 12:40 PM
ಒತ್ತಡದ ಜೀವನದ ನಡುವೆ ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿಡಲು ಯೋಗಾಸನವು ಅತ್ಯಂತ ಸಹಕಾರಿಯಾಗಿದೆ. ಆದ್ದರಿಂದ ಪ್ರತಿ ದಿನ ಒಂದಷ್ಟು ಹೊತ್ತು ಯೋಗಾಸನಕ್ಕಾಗಿ ಸಮಯ ಮೀಸಲಿಡಿ.
ನಿಮ್ಮನ್ನು ಮಾನಸಿಕವಾಗಿ ಒತ್ತಡದಿಂದ ಹೊರತರಲು ಹಾಗೂ ದೈಹಿಕವಾಗಿ ಸದೃಡವಾಗಿರಲು ಸಹಾಯಕವಾಗುವ ಯೋಗಾಸನದ ಕೆಲವು ಭಂಗಿಗಳು ಇಲ್ಲಿವೆ.
ಪ್ರಾಣಾಯಾಮ: ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಾಣಾಯಾಮ ಅತ್ಯಂತ ಸಹಕಾರಿಯಾಗಿದೆ. ಆದ್ದರಿಂದ ಪ್ರತಿದಿನ 15 ನಿಮಿಷಗಳ ಕಾಲ ಪ್ರಾಣಾಯಾಮ ಮಾಡಿ.
ಭುಜಂಗಾಸನ: ನಿಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡವಾಗಿಡಲು ಭುಜಂಗಾಸನ ಅತ್ಯಂತ ಪ್ರಯೋಜನಕಾರಿಯಾಗಿದೆ. ಅನಿಯಮಿತ ಮುಟ್ಟಿನ ಸಮಸ್ಯೆ, ಸೊಂಟ ನೋವನ್ನು ಶಮನ ಮಾಡಲು ಪ್ರತಿ ದಿನ ಒಂದಷ್ಟು ಹೊತ್ತು ಈ ಭುಜಂಗಾಸವನ್ನು ಅಭ್ಯಾಸ ಮಾಡಿ.
ಬಾಲಾಸನ: ನಿಮ್ಮನ್ನು ಒತ್ತಡದಿಂದ ಹೊರ ತರಲು ಬಾಲಾಸನ ಸಹಕಾರಿಯಾಗಿದೆ. ಈ ಆಸನವು ವಿಶ್ರಾಂತಿಯ ಭಂಗಿಯಾಗಿದೆ. ಪ್ರತಿದಿನ ಬಾಲಾಸನ ಮಾಡುವುರಿಂದ ನಿಮ್ಮ ದೇಹ ಹಾಗೂ ಮನಸ್ಸಿಗೆ ಸಾಕಷ್ಟು ವಿಶ್ರಾಂತಿಯನ್ನು ನೀಡುತ್ತದೆ.
ಶವಾಸನ: ನೀವು ಯಾವುದೇ ಆಸನ ಮಾಡಿದ ಮೇಲೆ ಯಾವತ್ತಿಗೂ ಕೊನೆಯ ಆಸನವಾದ ಶವಾಸನವನ್ನು ಸ್ಕಿಪ್ ಮಾಡದಿರಿ. ಪ್ರತಿ ದಿನ ಒಂದಷ್ಟು ಹೊತ್ತು ಶವಾಸನ ಮಾಡುವುದನ್ನು ರೂಢಿಸಿಕೊಳ್ಳಿ. ಇದು ನಿಮಗೆ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ವಿಶ್ರಾಂತಿಯನ್ನು ನೀಡುತ್ತದೆ.
ವೃಕ್ಷಾಸನ: ವೃಕ್ಷಾಸನವು ಸುಧಾರಿತ ಪರ್ವತ ಭಂಗಿಯಾಗಿದೆ. ಇದು ಮಾನಸಿಕವಾಗಿ ಏಕಾಗ್ರತೆಯನ್ನು ಕಾಪಾಡಲು ಸಹಾಯಕವಾಗಿದೆ. ಆದ್ದರಿಂದ ಪ್ರತಿ ದಿನ ಒಂದಷ್ಟು ಹೊತ್ತು ಯೋಗಾಸಕ್ಕಾಗಿ ಸಮಯ ಮೀಸಲಿಡಿ.
Published On - 12:27 pm, Tue, 3 January 23