ಆಮಿರ್ ಖಾನ್ ಮಗಳು ಇರಾ ಖಾನ್ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಅವರು ಈವರೆಗೆ ಚಿತ್ರರಂಗಕ್ಕೆ ಎಂಟ್ರಿ ನೀಡಿಲ್ಲ. ಆದರೆ, ಅವರ ಖ್ಯಾತಿ ತುಂಬಾನೇ ದೊಡ್ಡದಿದೆ. ಸ್ಟಾರ್ ನಟನ ಮಗಳು ಎನ್ನುವ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.
ಇರಾ ಖಾನ್ ಸ್ವಿಮ್ಮಿಂಗ್ಪೂಲ್ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಆಮಿರ್ ಖಾನ್ ಮಗಳು ಕಳೆದ ಕೆಲ ವರ್ಷಗಳಿಂದ ನೂಪುರ್ ಶಿಖಾರೆ ಜತೆ ಡೇಟಿಂಗ್ ನಡೆಸುತ್ತಿದ್ದಾರೆ. ನೂಪುರ್ ಜತೆ ಸಮಯ ಕಳೆದ ಸಾಕಷ್ಟು ಫೋಟೋಗಳನ್ನು ಈ ಮೊದಲು ಅವರು ಹಂಚಿಕೊಂಡಿದ್ದಾರೆ.
1986ರಲ್ಲಿ ನಟಿ ರೀನಾ ದತ್ತ ಜೊತೆ ಆಮಿರ್ ಖಾನ್ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು (ಪುತ್ರ ಜುನೈದ್, ಪುತ್ರಿ ಇರಾ) ಜನಿಸಿದರು. 2002ರಲ್ಲಿ ಆಮಿರ್ ಮತ್ತು ರೀನಾ ಡಿವೋರ್ಸ್ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡರು.
ಮೊದಲ ಪತ್ನಿಯ ಮಕ್ಕಳ ಜೊತೆ ಆಮಿರ್ ಖಾನ್ ಇಂದಿಗೂ ಚೆನ್ನಾಗಿಯೇ ಇದ್ದಾರೆ. ರೀನಾ ದತ್ತಾ ಜತೆ ವಿಚ್ಛೇದನ ಪಡೆದ ನಂತರದಲ್ಲಿ ಆಮಿರ್ ಖಾನ್ ಕಿರಣ್ ರಾವ್ ಅವರನ್ನು ಮದುವೆ ಆಗಿದ್ದರು. ಕಳೆದ ವರ್ಷ ಇಬ್ಬರೂ ಬೇರೆ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದರು.