Updated on: Apr 27, 2022 | 1:06 PM
ಐಪಿಎಲ್ನ 39ನೇ ಪಂದ್ಯದಲ್ಲಿ ಆರ್ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋತಿದೆ. ಈ ಸೋಲಿನೊಂದಿಗೆ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಕೆಳಗಿಳಿದಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡವು ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ಒಂದೇ ಒಂದು ಗೆಲುವು ದಾಖಲಿಸದ ಮುಂಬೈ ಇಂಡಿಯನ್ಸ್ ಕೊನೆಯ ಸ್ಥಾನದಲ್ಲಿದೆ. ಅದರಂತೆ ಹೊಸ ಪಾಯಿಂಟ್ ಟೇಬಲ್ನಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ನೋಡೋಣ...
1- ರಾಜಸ್ಥಾನ್ ರಾಯಲ್ಸ್ (12 ಪಾಯಿಂಟ್ಸ್), 2- ಗುಜರಾತ್ ಟೈಟನ್ಸ್ (12 ಪಾಯಿಂಟ್ಸ್), 3-ಸನ್ರೈಸರ್ಸ್ ಹೈದರಾಬಾದ್ (10 ಪಾಯಿಂಟ್ಸ್), 4- ಲಕ್ನೋ ಸೂಪರ್ ಜೈಂಟ್ಸ್ ( 10 ಪಾಯಿಂಟ್ಸ್), 5- ರಾಯಲ್ ಚಾಲೆಂಜರ್ಸ್ ಬೆಂಗಳೂರು (10 ಪಾಯಿಂಟ್ಸ್)
6- ಪಂಜಾಬ್ ಕಿಂಗ್ಸ್ (8 ಪಾಯಿಂಟ್ಸ್), 7- ಡೆಲ್ಲಿ ಕ್ಯಾಪಿಟಲ್ಸ್ (6 ಪಾಯಿಂಟ್ಸ್), 8- ಕೊಲ್ಕತ್ತಾ ನೈಟ್ ರೈಡರ್ಸ್ (6 ಪಾಯಿಂಟ್ಸ್), 9- ಚೆನ್ನೈ ಸೂಪರ್ ಕಿಂಗ್ಸ್ (4 ಪಾಯಿಂಟ್ಸ್), 10- ಮುಂಬೈ ಇಂಡಿಯನ್ಸ್ (0 ಪಾಯಿಂಟ್)
ಸದ್ಯ ಅತೀ ಹೆಚ್ಚು ವಿಕೆಟ್ ಪಡೆದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಯಜುವೇಂದ್ರ ಚಹಲ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಚಹಲ್ 8 ಪಂದ್ಯಗಳಲ್ಲಿ 18 ವಿಕೆಟ್ ಪಡೆದರೆ, 7 ಪಂದ್ಯಗಳಿಂದ 15 ವಿಕೆಟ್ ಪಡೆದಿರುವ ಎಸ್ಆರ್ಹೆಚ್ ತಂಡದ ನಟರಾಜನ್ 2ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ 8 ಪಂದ್ಯಗಳಿಂದ 14 ವಿಕೆಟ್ ಪಡೆದಿರುವ ಸಿಎಸ್ಕೆ ತಂಡದ ಡ್ವೇನ್ ಬ್ರಾವೊ ಮೂರನೇ ಸ್ಥಾನದಲ್ಲಿದ್ದಾರೆ.
ಅದೇ ರೀತಿ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿದ್ದಾರೆ. ಬಟ್ಲರ್ 8 ಇನಿಂಗ್ಸ್ಗಳಿಂದ 499 ರನ್ ಕಲೆಹಾಕಿದ್ದಾರೆ. ಹಾಗೆಯೇ 8 ಇನಿಂಗ್ಸ್ಗಳಿಂದ 368 ರನ್ ಬಾರಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ 2ನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ 8 ಇನಿಂಗ್ಸ್ನಿಂದ 302 ರನ್ ಬಾರಿಸಿರುವ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಇದ್ದಾರೆ. (PC: Sportskeeda)