Updated on: Jan 27, 2023 | 9:55 AM
ಇರಾ ಖಾನ್ ಅವರು ಸದಾ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಭಾವಿ ಪತಿ ನೂಪುರ್ ಜತೆ ಅವರು ಸಮಯ ಕಳೆಯುತ್ತಾರೆ. ಈಗ ಅವರು ಹಂಚಿಕೊಂಡಿರುವ ಹೊಸ ಫೋಟೋದಿಂದ ಬಾಡಿ ಶೇಮಿಂಗ್ ಎದುರಿಸಿದ್ದಾರೆ.
ಇರಾ ಖಾನ್ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಆದರೂ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಆಮಿರ್ ಖಾನ್ ಮಗಳು ಎನ್ನುವ ಕಾರಣಕ್ಕೆ ಅವರನ್ನು ಸಾಕಷ್ಟು ಮಂದಿ ಗಮನಿಸುತ್ತಾರೆ.
ಈಗ ಇರಾ ಖಾನ್ ಅವರು ಗೆಳತಿಯರ ಜತೆ ಸಮಯ ಕಳೆದಿದ್ದಾರೆ. ಮುಖಕ್ಕೆ ಫೇಶಿಯಲ್ ಮಾಡಿಕೊಂಡಿದ್ದಾರೆ. ಈ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋ ನೋಡಿದ ಅನೇಕರು ಅವರ ದೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಕೆಲವರು ಡುಮ್ಮಿ ಎಂದೆಲ್ಲ ಕರೆದಿದ್ದಾರೆ.
ಇರಾ ಮುಖಕ್ಕೆ ಫೇಶಿಯಲ್ ಮಾಡಿಕೊಂಡಿರುವ ಬಗ್ಗೆಯೂ ಕೆಲವರು ಟೀಕೆ ಮಾಡಿದ್ದಾರೆ. ‘ನಿಮ್ಮ ಮುಖದ ಮೇಲಿರುವುದು ಬೇರೆ ರೀತಿಯಲ್ಲಿ ಕಾಣುತ್ತಿದೆ’ ಎಂದೆಲ್ಲ ಹೇಳಿದ್ದಾರೆ.
Published On - 9:24 am, Fri, 27 January 23