
ನಟಿ ಜಾನ್ವಿ ಕಪೂರ್ ಸ್ಟಾರ್ ಕಿಡ್. ಹೀಗಾಗಿ, ಅವರಿಗೆ ಅವಕಾಶಗಳು ಅನಾಯಾಸವಾಗಿ ಹರಿದು ಬರುತ್ತವೆ. ಆದರೆ, ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಈ ವಿಚಾರದಲ್ಲಿ ಅವರು ತಲೆಕೆಡಿಸಿಕೊಂಡಿಲ್ಲ.

ಜಾನ್ವಿ ಕಪೂರ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೆಲವು ಚಿತ್ರಗಳು ಅವರ ಕೈಯಲ್ಲಿವೆ. ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ನಟನೆ ವಿಚಾರದಲ್ಲಿ ಅವರು ಇನ್ನೂ ಪಳಗಬೇಕಿದೆ ಎನ್ನುವ ಮಾತು ಅಭಿಮಾನಿಗಳ ವಲಯದಲ್ಲಿದೆ.

ಜಾನ್ವಿ ಕಪೂರ್ಗೆ ಫೋಟೋಶೂಟ್ ಅಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿ ಭಾರಿ ಭಿನ್ನ ಫೋಟೋಶೂಟ್ ಮಾಡಿಸಿ ಅವರು ಗಮನ ಸೆಳೆಯುತ್ತಾರೆ. ಈ ಬಾರಿ ಅವರು ಮತ್ತೆ ಪಡ್ಡೆಗಳ ಮನಸ್ಸು ಕದ್ದಿದ್ದಾರೆ.

ಖುಷ್ ಹೆಸರಿನ ಮ್ಯಾಗಜಿನ್ಗಾಗಿ ಜಾನ್ವಿ ಕಪೂರ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ಇದೇ ಮೊದಲ ಬಾರಿಗೆ ಅವರು ತಮ್ಮ ತಂದೆ ಬೋನಿ ಕಪೂರ್ ನಿರ್ಮಾಣ ಮಾಡಲಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೋಮ್ ಬ್ಯಾನರ್ನಲ್ಲಿ ನಟಿಸುತ್ತಿರುವುದಕ್ಕೆ ಅವರಿಗೆ ಖುಷಿ ಇದೆ.

ಆ ಚಿತ್ರಕ್ಕೆ ‘ಮಿಲಿ’ ಎಂದು ಹೆಸರು ಇಡಲಾಗಿದೆ. ತಂದೆಯ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಅವರು ಖುಷಿ ವ್ಯಕ್ತಪಡಿಸಿದ್ದರು.

ಜಾನ್ವಿ ಕಪೂರ್