
ನಟಿ ಜಾನ್ವಿ ಕಪೂರ್ ಅವರ ಬೋಲ್ಡ್ನೆಸ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಮಾಡಿಸುವ ಹಾಟ್ ಫೋಟೋಶೂಟ್ ಸಾಕಷ್ಟು ಜನರು ಗಮನ ಸೆಳೆದಿದೆ. ಈಗ ನಟಿ ಜಾನ್ವಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

ಕಿತ್ತಳೆ ಹಣ್ಣಿನ ಬಣ್ಣದ ಡ್ರೆಸ್ ತೊಟ್ಟಿದ್ದಾರೆ ಜಾನ್ವಿ ಕಪೂರ್. ಈ ಫೋಟೋ ಅಭಿಮಾನಿಗಳ ಕಣ್ಣು ಕುಕ್ಕಿದೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ಗಳ ಮಳೆ ಸುರಿಸಿದ್ದಾರೆ.

ಜಾನ್ವಿ ಕಪೂರ್ ಅವರಿಗೆ ಫೋಟೋಶೂಟ್ ಮಾಡಿಸೋದು ಅಂದರೆ ಎಲ್ಲಿಲ್ಲದ ಖುಷಿ. ಹೀಗಾಗಿ, ವಾರಕ್ಕೆ ಒಂದಾದರೂ ಫೋಟೋಶೂಟ್ ಮಾಡಿಸಿ ಎಲ್ಲರ ಗಮನ ಸೆಳೆಯುತ್ತಾರೆ.

ಜಾನ್ವಿ ಕಪೂರ್ ನಟನೆಯ ‘ಗುಡ್ ಲಕ್ ಜೆರ್ರಿ’ ಇತ್ತೀಚೆಗೆ ರಿಲೀಸ್ ಆಯಿತು. ಸದ್ಯ ಅವರು ‘ಮಿಲಿ’, ‘ಮಿಸ್ಟರ್ ಆ್ಯಂಡ್ ಮಾಹಿ’ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಬೋನಿ ಕಪೂರ್ ಹಾಗೂ ಶ್ರೀದೇವಿ ಮಗಳು ಜಾನ್ವಿ ಕಪೂರ್. ಈ ಕಾರಣಕ್ಕೆ ಚಿತ್ರರಂಗದಲ್ಲಿ ಅವರಿಗೆ ಸುಲಭವಾಗಿ ಅವಕಾಶ ಸಿಗುತ್ತಿದೆ. ಆದರೆ, ಯಶಸ್ಸು ಮಾತ್ರ ಅವರಿಗೆ ಸಿಗುತ್ತಿಲ್ಲ.

ಜಾನ್ವಿ ಕಪೂರ್