- Kannada News Photo gallery JDS Pancharatna rathayatre enters Vijayapura district HD Kumaraswamy garlanded with fruits and vegetables using cranes
ಜೆಡಿಎಸ್ ಪಂಚರತ್ನ ರಥಯಾತ್ರೆ: ಹೆಚ್ ಡಿ ಕುಮಾರಸ್ವಾಮಿಗೆ ದಪ್ಪಮೆಣಸಿನಕಾಯಿ ಬೃಹತ್ ಹಾರ ಹಾಕಿದ ರೈತರು
ವಿಜಯಪುರ: ಮುಂದಿನ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯು (JDS Pancharatna rathayatre) ಇಂಡಿ ತಾಲೂಕಿನ ಇಂಡಿ ವಿಧಾನಸಭಾ ಮತಕ್ಷೇತ್ರದ ಲಚ್ಯಾಣ ಗ್ರಾಮಕ್ಕೆ ಇಂದು ಮಂಗಳವಾರ ಆಗಮಿಸಿದೆ. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದ ಪಂಚರತ್ನ ರಥಯಾತ್ರೆ ಇಂದಿನಿಂದ 6 ದಿನಗಳ ಕಾಲ ವಿಜಯಪುರ (Vijayapura) ಜಿಲ್ಲೆಯಲ್ಲಿ ಸಂಚರಿಸಲಿದೆ. ಇಂದು ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಸಂಚರಿಸಿತು. ಮತಕ್ಷೇತ್ರದ ಚಿಕ್ಕಮಣ್ಣೂರ ಕ್ರಾಸ್ ಮೂಲಕ ಅಗರಖೇಡದವರೆಗೆ ರೋಡ್ ಶೋ ನಡೆಯಿತು. ಆ ವೇಳೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ರೈತರು ತಾವು ಬೆಳೆದ ವಿವಿಧ ತರಕಾರಿಗಳು, ಹಣ್ಣುಗಳಿಂದ (fruits and vegetables) ಮಾಡಿದ ಬೃಹತ್ ಹಾರಗಳನ್ನು (garland) ಕ್ರೇನ್ ಮೂಲಕ ಹಾಕಿ, ತಮ್ಮ ಅಭಿಮಾನ ಮೆರೆದರು.
Updated on: Jan 17, 2023 | 6:31 PM

ಕುಮಾರಸ್ವಾಮಿ ಅವರು ಭತಗುಣಕಿ ಗ್ರಾಮದಲ್ಲಿ ಇಂದು ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಿಗ್ಗೆ ಸಿಂದಗಿ ವಿಧಾನಸಭಾ ಮತಕ್ಷೇತ್ರದ ಕನ್ನೊಳ್ಳಿ ಕ್ರಾಸ್ ಮೂಲಕ ರಥಯಾತ್ರೆ ಮುಂದುವರೆಯಲಿದೆ.

ನಂತರ ಪಂಚರತ್ನ ರಥಯಾತ್ರೆಯು ಮಾವಿನಹಳ್ಳಿ, ಇಂಡಿ, ಅಹಿರಸಂಗ ಮೂಲಕ ಭತಗುಣಕಿ ಗ್ರಾಮಕ್ಕೆ ತೆರಳಲಿದೆ.

ಕ್ರೇನ್ ಮೂಲಕ ಬೃಹತ್ ಮಾಲೆ ಹಾಕಿ ಸ್ಥಳೀಯರು ಹಾಗೂ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.

ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರಿಂದ ಭವ್ಯ ಸ್ವಾಗತ ದೊರಕಿತು.

ಮತಕ್ಷೇತ್ರದ ಚಿಕ್ಕಮಣ್ಣೂರ ಕ್ರಾಸ್ ಮೂಲಕ ಅಗರಖೇಡದವರೆಗೆ ರೋಡ್ ಶೋ ನಡೆಯಿತು. ನಂತರ ಅಗರಖೇಡ ಗ್ರಾಮ, ಚಿಕ್ಕಬೇವನೂರ, ಇಂಗಳಗಿ, ಆಳೂರ ಇದೀಗ ಲಚ್ಯಾಣ ಗ್ರಾಮಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿತು.

ಇಂದು ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಸಂಚರಿಸಿತು. ಮತಕ್ಷೇತ್ರದ ಚಿಕ್ಕಮಣ್ಣೂರ ಕ್ರಾಸ್ ಮೂಲಕ ಅಗರಖೇಡದವರೆಗೆ ರೋಡ್ ಶೋ ನಡೆಯಿತು. ಆ ವೇಳೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ರೈತರು ತಾವು ಬೆಳೆದ ವಿವಿಧ ತರಕಾರಿಗಳು, ಹಣ್ಣುಗಳಿಂದ ಮಾಡಿದ ಬೃಹತ್ ಹಾರಗಳನ್ನು ಕ್ರೇನ್ ಮೂಲಕ ಹಾಕಿ, ತಮ್ಮ ಅಭಿಮಾನ ಮೆರೆದರು.

ವಿಜಯಪುರ: ಮುಂದಿನ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯು ಇಂಡಿ ತಾಲೂಕಿನ ಇಂಡಿ ವಿಧಾನಸಭಾ ಮತಕ್ಷೇತ್ರದ ಲಚ್ಯಾಣ ಗ್ರಾಮಕ್ಕೆ ಇಂದು ಮಂಗಳವಾರ ಆಗಮಿಸಿದೆ. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಇಂದಿನಿಂದ 6 ದಿನಗಳ ಕಾಲ ವಿಜಯಪುರ ಜಿಲ್ಲೆಯಲ್ಲಿ ಸಂಚರಿಸಲಿದೆ.




