ಭವ್ಯಾಗೋಸ್ಕರ ಗುಡ್​ ಮಾರ್ನಿಂಗ್ ಸಾಂಗ್; ಬಂತು ಜಿಲೇಬಿ ಹಾಡು

Updated on: Dec 03, 2024 | 8:59 AM

ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

1 / 5
ಬಿಗ್ ಬಾಸ್​ನಲ್ಲಿ ಕಳೆದ ವಾರ ಸಾಕಷ್ಟು ಚರ್ಚೆ ಆದ ವಿಚಾರ ಎಂದರೆ ಅದು ಜಿಲೇಬಿ ವಿಚಾರ. ಹೌದು, ಜಿಲೇಬಿ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು ಗಮನ ಸೆಳೆದಿತ್ತು.

ಬಿಗ್ ಬಾಸ್​ನಲ್ಲಿ ಕಳೆದ ವಾರ ಸಾಕಷ್ಟು ಚರ್ಚೆ ಆದ ವಿಚಾರ ಎಂದರೆ ಅದು ಜಿಲೇಬಿ ವಿಚಾರ. ಹೌದು, ಜಿಲೇಬಿ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು ಗಮನ ಸೆಳೆದಿತ್ತು.

2 / 5

ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

3 / 5

ಈ ವಿಚಾರ ತಿಳಿದ ಭವ್ಯಾ ಗೌಡ ಅವರು ಶಾಪ ಹಾಕಿದ್ದರು. ‘ತಿಂದವರಿಗೆ ವಾಂತಿ ಆಗಲಿ’ ಎಂದು ಶಾಪ ಹಾಕಿದ್ದರು ಭವ್ಯಾ. ಈ ಶಾಪದ ವಿಚಾರವನ್ನು ಸುದೀಪ್ ಅವರು ಕೇಳಿದ್ದರು. ಅಲ್ಲದೆ, ಅವರಿಗೆ ಜಿಲೇಬಿ ಎಂದೇ ಕರೆಯುತ್ತಿದ್ದರು ಸುದೀಪ್.

4 / 5

ಈಗ ಡಿಸೆಂಬರ್ 2ರ ಎಪಿಸೋಡ್ ಪ್ರಸಾರ ಕಂಡಿದೆ. ಈ ಎಪಿಸೋಡ್​ನಲ್ಲಿ ‘ಜಿಲ್ ಜಿಲ್​ ಜಿಲೇಬಿ ರಾಣಿ’ ಹಾಡನ್ನು ಹಾಕಲಾಗಿದೆ. ‘ರಂಗಸ್ಥಳ’ ಚಿತ್ರದಲ್ಲಿ ಬರೋ ಹಾಡು (ಕನ್ನಡ ವರ್ಷನ್) ಇದಾಗಿದೆ.

5 / 5

ಈ ಹಾಡು ಕೇಳುತ್ತಿದ್ದಂತೆ ಭವ್ಯಾಗೆ ಶಾಕ್ ಆಗಿದೆ. ಎಲ್ಲರೂ ಭವ್ಯಾ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ‘ನೀವು ಈ ಸಾಂಗ್​ನ ಯಾಕೆ ಹಾಕಿದ್ರೋ ಗೊತ್ತಿಲ್ಲ. ಏನೇ ಆಗ್ಲಿ ಥ್ಯಾಂಕ್ಸ್’ ಎಂದರು ಭವ್ಯಾ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us