
ಕನ್ನಡದ ಪೊಗರು ಸಿನಿಮಾದಲ್ಲಿ ನಟಿಸಿದ್ದ ಬಾಡಿಬಿಲ್ಡರ್ ಜೋ ಲಿಂಡ್ನರ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.

ಜೋ ಲಿಂಡ್ನರ್ ಅನ್ನು ಅಭಿಮಾನಿಗಳು ಜೋಸ್ತೆಟಿಕ್ ಎಂದೂ ಸಹ ಕರೆಯುತ್ತಿದ್ದರು. ಮೆದುಳಿನಲ್ಲಿ ಅಚಾನಕ್ ರಕ್ತಸ್ರಾವವಾಗಿ ಅವರ ಸಾವಾಗಿದೆ ಎನ್ನಲಾಗುತ್ತಿದೆ.

ಬಾಡಿಬಿಲ್ಡಿಂಗ್ ಆರಂಭಿಸುವ ಮುನ್ನ ಜೋ ಪಬ್ ಒಂದರಲ್ಲಿ ಬೌನ್ಸರ್ ಆಗಿದ್ದರು.

ಜರ್ಮನಿಯವರಾಗಿರುವ ಜೋ ಕನ್ನಡದ ಪೊಗರು ಇನ್ನೂ ಕೆಲವು ಭಾರತೀಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಜೋನ ಗರ್ಲ್ಫ್ರೆಂಡ್ ಹೆಸರು ನಿಚಾ, ಜೋ ನಿಧನ ಹೊಂದಿದಾಗ ಆಕೆಯೊಂದಿಗೆ ರೂಮಿನಲ್ಲಿ ಇದ್ದರು ಜೋ. ಜೋ ಸಾವಿನ ಬಗ್ಗೆ ನಿಚಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಜೋ, ಏಲಿಯನ್ ಗೇನ್ಸ್ ಹೆಸರಿನ ಖಾಸಗಿ ಫಿಟ್ನೆಸ್ ಟ್ರೈನಿಂಗ್ ಅಪ್ಲಿಕೇಶನ್ ಅನ್ನು ಹೊರತಂದಿದ್ದಾರೆ.

ಜೋನ ಅಭಿಮಾನಿಗಳು ಅವರ ದೇಹದಾರ್ಢ್ಯವನ್ನು ಅರ್ನಾಲ್ಡ್ ಶಾಸ್ನೆಗರ್ ಜೊತೆ ಹೋಲಿಸುತ್ತಿದ್ದರು.