
ನಟ ಜೂ.ಎನ್ಟಿಆರ್ ಅವರು ಸದ್ಯ ಖುಷಿಯಲ್ಲಿದ್ದಾರೆ. ಅವರ ನಟನೆಯ ‘ಆರ್ಆರ್ಆರ್’ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರ ವಿದೇಶದಲ್ಲಿ ಅವಾರ್ಡ್ ಗೆಲ್ಲುತ್ತಿದೆ.

ಜೂ.ಎನ್ಟಿಆರ್ ಅವರು ಈಗ ಹೈದರಾಬಾದ್ಗೆ ಮರಳಿದ್ದಾರೆ. ಈ ವೇಳೆ ಅವರು ಟೀಂ ಇಂಡಿಯಾ ಆಟಗಾರರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕ್ಲಿಕ್ಕಿಸಿಕೊಂಡ ಫೋಟೋ ವೈರಲ್ ಆಗಿದೆ.

ಬುಧವಾರ (ಜನವರಿ 18) ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಹೀಗಾಗಿ ಟೀಂ ಇಂಡಿಯಾ ಆಟಗಾರರು ಹೈದರಾಬಾದ್ನಲ್ಲಿದ್ದಾರೆ.

ಯಜುವೇಂದ್ರ ಚಹಾಲ್, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಶಾರ್ದೂಲ್ ಠಾಕೂರ್ ಮೊದಲಾದ ಆಟಗಾರರು ಜೂ.ಎನ್ಟಿಆರ್ನ ಹೈದರಾಬಾದ್ನಲ್ಲಿ ಭೇಟಿ ಆಗಿದ್ದಾರೆ.

‘ಆರ್ಆರ್ಆರ್’ ಸಿನಿಮಾ ಗೋಲ್ಡನ್ ಗ್ಲೋಬ್ಸ್ ಹಾಗೂ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ನಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.