
ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರತಂಡ ಮುಂಬೈನಲ್ಲಿ ಅದ್ಧೂರಿಯಾಗಿ ಪ್ರಚಾರ ಮಾಡುತ್ತಿದೆ.

ಕಬ್ಜ ಸಿನಿಮಾದ ನಾಯಕ ಉಪೇಂದ್ರ, ನಾಯಕಿ ಶ್ರೆಯಾ ಶಿರಿನ್ ಜೊತೆಗೆ ನಟ ಸುದೀಪ್ ಸಹ ಚಿತ್ರತಂಡದೊಡನೆ ಮುಂಬೈನಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಕಬ್ಜ ಸಿನಿಮಾದ ಹಿಂದಿ ಆವೃತ್ತಿಯ ವಿತರಕ ಆನಂದ್ ಪಂಡಿತ್ ಸಹ ಚಿತ್ರತಂಡವನ್ನು ಸೇರಿಕೊಂಡು ಅದ್ಧೂರಿಯಾಗಿ ಪ್ರಚಾರ ಮಾಡಿದ್ದಾರೆ.

ಪ್ರಚಾರದ ಭಾಗವಾಗಿ ಬೈಕ್ ರ್ಯಾಲಿಯನ್ನು ಸಹ ಆಯೋಜಿಸಲಾಗಿದ್ದು, ಉಪೇಂದ್ರ ಹಾಗೂ ನಟಿ ಶ್ರೆಯಾ ಶೀರಿನ್ ಅವರುಗಳು ಬೈಕ್ ಹಿಂಬದಿ ಕೂತು ಸವಾರಿ ಮಾಡಿ ಸಂಭ್ರಮಿಸಿದ್ದಾರೆ.

ಮುಂಬೈನ ಮಾಲ್ಗಳಲ್ಲಿ, ಇತರೆಡೆ ಕಬ್ಜ ಸಿನಿಮಾದ ಕಟೌಟ್, ಪೋಸ್ಟರ್ಗಳು ರಾರಾಜಿಸುತ್ತಿವೆ. ಮಾರ್ಚ್ 17 ರಂದು ಸಿನಿಮಾ ಬಿಡುಗಡೆ ಆಗಲಿದೆ.